ನೆಲಮಂಗಲ (ಜ. 28): ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರೆಲ್ಲಾ ಸೇರಿ ’ಬೆಂಗಳೂರು ಚಲೋ’ ರ್ಯಾಲಿಯನ್ನು ಶುರು ಮಾಡಿದ್ದಾರೆ. 

ಚಿತ್ರದುರ್ಗದಿಂದ ಬೆಂಗಳೂರಿಗೆ  ಕಾಲ್ನಡಿಗೆ ಜಾಥಾ ಹೊರಟಿದ್ದಾರೆ.  ಜಾಥಾದಲ್ಲಿ ಪಾಲ್ಗೊಂಡ ಮಹಿಳೆಗೆ ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಕುಲವನಹಳ್ಳಿ ಬಳಿ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. 

ರೇಣುಕಮ್ಮ  (55) ಅಪಘಾತದಿಂದ ಮೃತಪಟ್ಟ ದುರ್ದೈವಿ. ರೇಣುಕಮ್ಮ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಖೈರಾವಡಗಿ ಗ್ರಾಮದ ನಿವಾಸಿ. ನಿನ್ನೆ ಸಿದ್ದಗಂಗಾ ಮಠದಿಂದ ’ಮದ್ಯ ಮುಕ್ತ ಜಾಥ’ ಹೊರಟಿತ್ತು.  ಜನವರಿ 30 ರಂದು ಬೆಂಗಳೂರಿನ ವಿಧಾನಸೌಧಕ್ಕೆ  ತೆರಳುತ್ತಿದ್ದ ಚಲೋ ಇದಾಗಿತ್ತು. 

ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.