ಬೆಂಗಳೂರು :  ರಾಜ್ಯದಲ್ಲಿ ಆಪರೇಷನ್ ಕಮಲದ ವಿಚಾರದ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಕುಮಾರಿ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಮಂಗಳೂರಿನ ನಡುರಸ್ತೆಯಲ್ಲಿ ತಮಗೆ ಸಿಕ್ಕಿದ್ದು, ಯಾಕೆ ಯಡಿಯೂರಪ್ಪ ಕೇರಳಕ್ಕೆ  ಹೋಗಿದ್ದಾರೆ ಎಂದು ಗೊತ್ತಿದೆ ಎಂದು ಗೋಪಾಲ ಕೃಷ್ಣ  ಟಾಂಗ್ ನೀಡಿದ್ದಾರೆ.  

ಶೋಭಾ ಅವರ ಮೇಲೆ ತಮಗೆ ಅಪಾರ ಗೌರವವಿದ್ದು,  ಅವರನ್ನು ನಾನು ಕುಮಾರಿ ಶೋಭಾ ಕರಂದ್ಲಾಜೆ ಎಂದೇ ಕರೆಯುತ್ತೇನೆ. ;ಬೇಳೂರು ಗೋಪಾಲಕೃಷ್ಣ ಬಹಳ ಸಣ್ಣವರು’ ಎಂದು ಅವರು ಹೇಳುತ್ತಾರೆ. ಅವರು ಹೇಳುವುದು ನಿಜ, ನಾನು ಬಹಳ ಸಣ್ಣವನೇ ಎಂದಿದ್ದಾರೆ. 

ನಿಂಬೆ ಹಣ್ಣು ಮಾರಲು ಬಂದ ಯಡಿಯೂರಪ್ಪ ಮುಖ್ಯಮಂತ್ರಿ ಆದರು.  ಇನ್ನು ಶೋಭಾ ಕರಂದ್ಲಾಜೆ ಕೂಡ ಹೇಗಿದ್ದರು, ಹೇಗಾದರು ಎನ್ನುವುದೂ ತಮಗೆ ತಿಳಿದಿದೆ.  ಅವರಿಗೆ ಇನ್ನೂ ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸಬೇಕು ಎನ್ನುವ ಆಸೆ ಇದೆ.  ಬಿಜೆಪಿಯವರು ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡುತ್ತಿದ್ದಾರೆ. ಜಾವಡೇಕರ್ ಹೇಳಿಕೆಯೇ ಇದಕ್ಕೆ ಸಾಕ್ಷಿ. ಆದರೂ ಆಪರೇಷನ್ ಕಮಲ ಸಕ್ಸಸ್ ಆಗೋದಿಲ್ಲ.

ಹೋಮ ಹವನ ಮಾಟ ಮಂತ್ರ ಮಾಡಿಸಲು ಯಡಿಯೂರಪ್ಪ ಕೇರಳಕ್ಕೆ ಹೋಗಿದ್ದಾರೆ. ಅವರೆಂದಿಗೂ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ ಎಂದು ಬೇಳೂರು ಕಿಡಿಕಾರಿದ್ದಾರೆ. 

ಇನ್ನು ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ಗೋಗುತ್ತಾರೆ ಎನ್ನುವ ವಿಚಾರದ ಸಂಬಂಧ ಪ್ರತಿಕ್ರಿಯಿಸಿದ ಗೋಪಾಲಕೃಷ್ಣ ಕಾಂಗ್ರೆಸ್ ನಿಂದ ಹೊರಗೆ ಹೋಗಿ ಯಾವ ಶಾಸಕನೂ ಮತ್ತೆ ಚುನಾವಣೆ ಎದುರಿಸಲು ಸಿದ್ದರಿಲ್ಲ. ಈಗಾಗಲೇ ಬಿಜೆಪಿಯವರು ಎರಡು ಸಲ ಆಪರೇಷನ್ ಮಾಡಿ ಕೈ ಸುಟ್ಟಕೊಂಡಿದ್ದಾರೆ. ಮೂರನೇ ಬಾರಿ ಕೇರಳಕ್ಕೆ ಹೋಗಿ ಪ್ರಯತ್ನ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.