ಬೆಳಗಾವಿ  : ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. 

ಪ್ರತೀ ಬಾರಿ ಅಧಿವೇಶನದ ವೇಳೆ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡುತ್ತಿದ್ದ ಸರ್ಕೀಟ್ ಹೌಸ್ ನಿಂದ ಈ ಬಾರಿ ಸಿಎಂ ಕುಮಾರಸ್ವಾಮಿ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ. 

ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಸರ್ಕೀಟ್ ಹೌಸ್ ವಾಸ್ತುವಿನ ಬಗ್ಗೆ ಅನುಮಾನ ಕಾಡಿದ್ದರಿಂದ ಹೀಗೆ ಮಾಡಿದರಾ ಎನ್ನಲಾಗುತ್ತಿದ್ದು, ಅಧಿವೇಶನಕ್ಕೂ ಮೊದಲೇ ಹೋಮ ಹವನದ ಮೊರೆ ಹೋಗಿದ್ದ ಸಿಎಂ ಕುಮಾರಸ್ವಾಮಿ ಬೆಳಗಾವಿಯಲ್ಲೂ ಲೆಕ್ಕಾಚಾರದ ನಡೆ ಇರಿಸಿದ್ದಾರೆ. 

ಡಿಸೆಂಬರ್ 10 ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಯುತ್ತಿದ್ದು, ಬೆಳಗಾವಿ ಸರ್ಕೀಟ್ ಹೌಸ್ ನಿಂದ ವಿಟಿಯು ಗೆಸ್ಟ್ ಹೌಸ್ ಗೆ ಶಿಫ್ಟ್ ಆದ ಸಿಎಂ ವಾಸ್ತವ್ಯ ಬದಲಾವಣೆ ಮಾಡಿದ್ದಾರೆ. 

ಸಿಎಂ ವಾಸ್ತು ಬದಲಾವಣೆಯಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಲಿದ್ದು, ಈ ಬಗ್ಗೆ ಯಾವುದೇ ಮಾಹಿತಿಯನ್ನೂ ಜಿಲ್ಲಾಧಿಕಾರಿಗಳು ನೀಡಿಲ್ಲ. ಜಿಲ್ಲಾಧಿಕಾರಿಗಳೂ ಕೂಡ ಈ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ.