Asianet Suvarna News Asianet Suvarna News

ಬೆಳಗಾವಿ ಜಿಲ್ಲೆ ವಿಭಜನೆ ಖಚಿತ: ಯಾರ್ ಮಾಡ್ತಾರಂತೆ ಗೊತ್ತಾ?

ಬೆಳಗಾವಿ ಮೂರು ಜಿಲ್ಲೆಯಾಗಿ ವಿಭಜನೆ! ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿಕೆ! ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಳಗಾವಿ ವಿಭಜನೆ! ಬೆಳಗಾವಿ, ಚಿಕ್ಕೋಡಿ, ಗೋಕಾಕ ಜಿಲ್ಲೆಗಳಾಗಿ ವಿಭಜನೆ! ಹುಕ್ಕೇರಿ ಹೇಳಿಕೆಗೆ ಧ್ವನಿಗೂಡಿಸಿದ ಸಚಿವ ರಮೇಶ ಜಾರಕಿಹೊಳಿ

Belagavi district should divide says Prakash Hukkeri
Author
Bengaluru, First Published Oct 6, 2018, 7:55 PM IST
  • Facebook
  • Twitter
  • Whatsapp

ಬೆಳಗಾವಿ(ಅ.6): ಇಂದು ನಡೆದ ಕೆಡಿಪಿ ಸಭೆಯಲ್ಲಿ ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆ ಸದ್ದು ಕೇಳಿ ಬಂದಿದೆ. ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜನೆ ಮಾಡಲಾಗುವುದು ಎಂದು ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯನ್ನು ಬೆಳಗಾವಿ, ಚಿಕ್ಕೋಡಿ, ಗೋಕಾಕ್ ಹೀಗೆ ಮೂರು ಜಿಲ್ಲೆಗಳಾಗಿ ವಿಭಜನೆ ಮಾಡಲಾಗುವುದು ಎಂದು ಪ್ರಕಾಶ್ ಹುಕ್ಕೇರಿ ಸಭೆಯಲ್ಲಿ ಹೇಳಿದ್ದಾರೆ. ಜಿಲ್ಲೆ ವಿಭಜನೆಗೆ ಕುಮಾರಸ್ವಾಮಿ ಕೂಡ ಉತ್ಸುಕರಾಗಿದ್ದು, ಅದರಂತೆ ಶೀಘ್ರದಲ್ಲೇ ಬೆಳಗಾವಿ ಜಿಲ್ಲೆ ವಿಭಜನೆ ಖಚಿತ ಎಂದು ಹುಕ್ಕೇರಿ ಹೇಳಿದ್ದಾರೆ.

ಕೆಡಿಪಿ ಸಭೆಯಲ್ಲಿ ಇದು ಬೆಳಗಾವಿ ಜಿಲ್ಲೆ ಸಭೆಯೋ ಅಥವಾ ಚಿಕ್ಕೋಡಿ ಭಾಗದ ಸಭೆಯೋ ಎಂದು ಪ್ರಕಾಶ್ ಹುಕ್ಕೇರಿ ಅವರನ್ನು ಬಿಜೆಪಿ ಸದಸ್ಯರು ಛೇಡಿಸಿದರು. ಇದಕ್ಕೆ ಪ್ರತಿಯಾಗಿ ಹುಕ್ಕೇರಿ, ಜಿಲ್ಲೆ ವಿಣಜನೆ ಖಚಿತ ಎಂದು ಹೇಳಿದರು.

ಇನ್ನು ಪ್ರಕಾಶ್ ಹುಕ್ಕೇರಿ ಮಾತಿಗೆ ಧ್ವನಿಗೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ, ಜಿಲ್ಲೆಯನ್ನು ಮೂರು-ನಾಲ್ಕು ಜಿಲ್ಲೆಗಳಾಗಿ ವಿಭಜಿಸುವುದೇ ಸೂಕ್ತ ಎಂದು ಹೇಳಿದರು.  

Follow Us:
Download App:
  • android
  • ios