ನವದೆಹಲಿ(ಡಿ.22) ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಭರ್ಜರಿ ಬಹುಮತ ಸಾಧಿಸಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿಗೆ ಕಳೆದ  ಕೆಲ ದಿನಗಳಲ್ಲಿ ಆ ರಾಜ್ಯದಲ್ಲಿ ಬಿಜೆಪಿ ಬೆಳೆದ ಬಗೆ ಆತಂಕ ತಂದಿದೆಯೇ?

ಈ ಪ್ರಶ್ನೆ ಸದ್ಯ ರಾಷ್ಟ್ರ ರಾಜಕಾರಣದ ವಲಯದಲ್ಲಿ ಎದ್ದಿದೆ. ಇದಕ್ಕೆ ಒಂದಿಷ್ಟು ಕಾರಣಗಳನ್ನು ಹೆಸರಿಸಬಹುದಾಗಿದೆ. ಕಳೆದ ಬೇಸಿಗೆಯಲ್ಲಿ ನಡೆಸ ಸ್ಥಳೀಯ ಪಂಚಾಯಿತಿ ಚುನಾವಣೆಗಳಲ್ಲಿ ಎದುರಾಗಿದ್ದ ಪರಿಸ್ಥಿತಿ ನೆನಪು ಮಾಡಿಕೊಳ್ಳಲೇಬೇಕಾಗುತ್ತದೆ. 50 ಸಾವಿರ ಸ್ಥಾನಗಳಲ್ಲಿ ಸುಮಾರು 16 ಸಾವಿರ ಸ್ಥಾನಗಳಲ್ಲಿ ವಿಪಕ್ಷಗಳು ಸ್ಪರ್ಧೆ ಮಾಡಿರಲಿಲ್ಲ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹುಟ್ಟುಹಾಕಿರುವ ಭಯವೇ ಇದಕ್ಕೆ ಕಾರಣ ಎಂದು ಹೇಳಲಾಗಿತ್ತು.

ಬಿಜೆಪಿ ರಥ ಯಾತ್ರೆಗೆ ಹೈಕೋರ್ಟ್ ಸಮ್ಮತಿ: ಸರ್ಕಾರಕ್ಕೆ ಒಳ್ಳೆ ಫಜೀತಿ!

ಇದೆಲ್ಲವನ್ನು ಚುನಾವಣಾ ಆಯೋಗ ಮತ್ತು ನ್ಯಾಯಾಂಗ ವ್ಯವಸ್ಥೆ ಗಮನಿಸುತ್ತಲೇ ಇತ್ತು. ಬಿಜೆಪಿ ಹಮ್ಮಿಕೊಂಡಿದ್ದ ರಥಯಾತ್ರೆಗೆ ಮೊದಲು ಪಶ್ಚಿಮ ಬಂಗಾಳ ಸರ್ಕಾರ ತಡೆ ಒಡ್ಡಿತ್ತು. ಆದರೆ ನಂತರ ನ್ಯಾಯಾಲಯವೇ ಬಿಜೆಪಿ ಯಾತ್ರೆಗೆ ಇದ್ದ ಅಡ್ಡಿಯನ್ನು ನಿವಾರಣೆ ಮಾಡಿತು. ಈ ನಡುವೆ ಪಶ್ಚಿಮ ಬಂಗಾಳ ಸರಕಾರ ತಾನೇ ನೀಡಿದ್ದ ಆದೇಶವನ್ನು ಹಿಂದಕ್ಕೆ ಪಡೆಯಿತು.

ಕಾಂಗ್ರೆಸ್ ಗಿಂತ ತನಗೆ ಬಿಜೆಪಿಯೇ ದೊಡ್ಡ ಎದುರಾಳಿ ಎಂದು ಮಮತಾ ಬ್ಯಾನರ್ಜಿ ಭಾವಿಸುತ್ತಿರುವುದು ಕೆಲ ಬದಲಾವಣೆಗಳಿಂದ ವ್ಯಕ್ತವಾಗುತ್ತಿದೆ. ೨೯೫ ಸೀಟುಗಳ ಪೈಕಿ ಬಿಜೆಪಿ ೪೨ಲ್ಲಿ ಜಯ ಸಾಧಿಸಿತ್ತು. ಹಾಗಾಗಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನೇ ಪ್ರಬಲ ಪ್ರತಿಸ್ಪರ್ಧಿ ಎಂದೇ ಭಾವಿಸಿದಂತಿದೆ. 

ಪಶ್ದಚಿಮ ಬಂಗಾಳದಲ್ಲಿ ಬಿಜೆಪಿ ಗಳಿಸಿಕೊಂಡಿರುವ ಮತ ಪ್ರಮಾಣವು ಸಹಜವಾಗಿ ಮಮತಾ ಬ್ಯಾನರ್ಜಿ ಅವರಿಗೆ ನಡುಕ ತಂದಿದೆ. ೨೦೧೩ರಲ್ಲಿ ಶೇ. 3 ಇದ್ದ ಬಿಜೆಪಿ ಮತಗಳಿಗೆ ಈ ವರ್ಷ ನಡೆದ ಉಪಚುನಾವಣೆ ವೇಳೆಗೆ ಶೇ. 23ಕ್ಕೆ ಏರಿತ್ತು.