Asianet Suvarna News Asianet Suvarna News

ಸ್ಫೋಟಕ ಸುದ್ದಿ: ದೇಶ ಬಿಡೋ ಮುನ್ನ ಬಿಜೆಪಿಗೆ 35 ಕೋಟಿ ಕೊಟ್ಟಿದ್ದ ಮಲ್ಯ?

ಮದ್ಯ ದೊರೆ ಮಲ್ಯರಿಂದ ಬಿಜೆಪಿಗೆ 35 ಕೋಟಿ ರೂ.! ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ ಚೆಕ್ ಫೋಟೋ! ಇದೊಂದು ನಕಲಿ ಚೆಕ್ ಎನ್ನುವುದಕ್ಕೆ ಇದೆ ಹಲವು ಸಾಕ್ಷಿ! ಯಾವುದೇ ತನಿಖೆಗೆ ಸಿದ್ಧ ಎಂದ ವಿಜಯ್ ಮಲ್ಯ

Before Leaving India Did Vijay Mallya Donate Rs 35 Crore to BJP
Author
Bengaluru, First Published Oct 6, 2018, 9:06 PM IST

ನವದೆಹಲಿ(ಅ.6): ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಕುರಿತು ದಿನಕ್ಕೊಂದು ಸುದ್ದಿ ಹರಿದಾಡುತ್ತವೆ. ಈ ಪಟ್ಟಿಗೆ ಹೊಸದೊಂದು ಸುದ್ದಿ ಸೇರ್ಪಡೆಯಾಗಿದೆ. ದೇಶ ಬಿಡುವುದಕ್ಕೂ ಮೊದಲು ಮಲ್ಯ ಬಿಜೆಪಿ ಪಕ್ಷಕ್ಕೆ 35 ಕೋಟಿ ರೂ. ಗಳನ್ನು ಸಂದಾಯ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಕುರಿತಾದ ಚೆಕ್‌ವೊಂದರ ಫೋಟೋ ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದು, ಮಲ್ಯ ಸಹಿ ಮಾಡಿರುವ 35 ಕೋಟಿ ರೂ. ಮೌಲ್ಯದ ಚೆಕ್ ಇದಾಗಿದೆ. ಆದರೆ ಈ ಕುರಿತು ಪರಿಶೀಲನೆ ನಡೆಸಲಾಗಿ ಇದೊಂದು ನಕಲಿ ಚೆಕ್ ಎಂಬುದು ಸಾಬೀತಾಗಿದೆ.

ಇದಕ್ಕೆ ಪುಷ್ಠಿ ಎಂಬಂತೆ ಚೆಕ್ ನಲ್ಲಿ ಭಾರತೀಯ ಜನತಾ ಪಾರ್ಟಿ ಬದಲು ಭಾರತೀಯ ಜನ್ತಾ ಪಾರ್ಟಿ ಎಂದಾಗಿದೆ. ಅಲ್ಲದೇ ಚೆಕ್ ನಲ್ಲಿ ಮಾಡಿರುವ ಸಹಿ ಕೂಡ ವಿಜಯ್ ಮಲ್ಯ ಅವರದ್ದಲ್ಲ ಎಂಬುದು ಸಾಬೀತಾಗಿದೆ. 

ಅಲ್ಲದೇ ಚೆಕ್ ನಲ್ಲಿರುವ ದಿನಾಂಕ ಕೂಡ ಇದೊಂದು ನಕಲಿ ಚೆಕ್ ಎಂಬುದಕ್ಕೆ ಸಾಕ್ಷಿ ಒದಗಿಸಿದೆ. ಚೆಕ್ ನಲ್ಲಿ 8-11-2016 ಎಂದು ನಮೂದಾಗಿದ್ದು, ಮಲ್ಯ 2 ಮಾರ್ಚ್ 2016 ರಲ್ಲೇ ದೇಶ ತೊರೆದಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಲ್ಯ, ತಮ್ಮ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ. ಅಲ್ಲದೇ ಈ ಕುರಿತು ಯಾವುದೇ ರೀತಿಯ ತನಿಖೆಗೆ ತಾವು ಸಿದ್ಧ ಎಂದೂ ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios