Asianet Suvarna News Asianet Suvarna News

ಬೊಮ್ಮಾಯಿಗೆ ಗುರುಗಳ ಆಶೀರ್ವಾದ, ಗಡಂಗ್ ರಕ್ಕಮ್ಮಾಗೆ ಜನ ಫಿದಾ; ಆ.1ರ ಟಾಪ್ 10 ಸುದ್ದಿ!

ನೂತನ ಸಿಎಂ ಬಸವರಾಜ ಬೊಮ್ಮಾಯಿ ರಾಜಕೀಯ ಗುರು ದೇವೇಗೌಡ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಡಿಜಿಟಲ್ ಪಾವತಿಗೆ ಪ್ರಧಾನಿ ಮೋದಿ e-RUPI ಲಾಂಚ್ ಮಾಡಲಿದ್ದಾರೆ. ಗಡಂಗ್ ರಕ್ಕಮ್ಮನ ಸಖತ್ ಲುಕ್‌ಗೆ ಸಿನಿಪ್ರಿಯರ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಕುಂದ್ರಾಗೆ ಕೋಲ್ಕತಾ ಲಿಂಕ್,ದೇಶ ವಿರೋಧಿಗಳ ವಿರುದ್ಧ ಕಠಿಣ ನಿಯಮ ಜಾರಿ ಸೇರಿದಂತೆ ಆಗಸ್ಟ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Basavaraj Bommai Met Devegowda to Jacqueline Fernandez top 10 News of August 1 ckm
Author
Bengaluru, First Published Aug 1, 2021, 4:45 PM IST

ಡಿಜಿಟಲ್ ಪಾವತಿಗೆ e-RUPI ಲಾಂಚ್ ಮಾಡಲಿದ್ದಾರೆ ಮೋದಿ

Basavaraj Bommai Met Devegowda to Jacqueline Fernandez top 10 News of August 1 ckm

ವಿಶ್ವಾದ್ಯಂತ ಈಗ ಎಲ್ಲ ಕ್ಷೇತ್ರದಲ್ಲಿಯೂ ಡಿಜಿಟಲೀಕರಣ ವೇಗಗತಿಯಲ್ಲಿ ಸಾಗುತ್ತಿದೆ. ಪ್ರತಿ ಕ್ಷೇತ್ರದಲ್ಲಿ ಡಿಜಿಟಲೀಕರಣದ ವೇಗ ಹೆಚ್ಚಿದ್ದು, ಬೃಹತ್ ಮಟ್ಟದ ಬದಲಾವಣೆಗಳಿಗೆ ಜಗತ್ತು ಸಾಕ್ಷಿಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲೀಕರಣದ ಪ್ರಮುಖ ಹಂತಗಳನ್ನು ನಾವು ನೋಡಿಕೊಂಡು ಬಂದಿದ್ದೇವೆ. ನೋಟು ಅಮಾನ್ಯದ ನಂತರ ಡಿಜಿಟಲ್ ಪೇಮೆಂಟ್ ಯಾವ ರೀತಿ ಉತ್ತೇಜಿಸಲ್ಪಟ್ಟಿತೋ ಅದೇ ರೀತಿ ಲಾಕ್‌ಡೌನ್ ನಂತರ ಶಿಕ್ಷಣದಲ್ಲಿಯೂ ಡಿಜಿಟಲ್ ಬದಲಾವಣೆಗಳಿಗೆ ದೇಶ ಸಾಕ್ಷಿಯಾಗಿದೆ.

ಯಡಿಯೂರಪ್ಪ ನೋಡಿ ಕಲೀಬೇಕು: ಬೊಮ್ಮಾಯಿ ಬಳಿ ಬಿಎಸ್‌ವೈ ಹೊಗಳಿದ ಮೋದಿ!

Basavaraj Bommai Met Devegowda to Jacqueline Fernandez top 10 News of August 1 ckm

ಸಿಎಂ ಆಯ್ಕೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಸದ್ಯ ಸಂಪುಟ ಸದ್ದು ಮಾಡುತ್ತಿದೆ. ಸಿಎಂ ಬೊಮ್ಮಾಯಿ ಮತ್ತೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಸೋಮವಾರ ಸಚಿವರ ಪಟ್ಟಿ ಫೈನಲ್ ಆಗುವ ಸಾಧ್ಯತೆ ಇದೆ. 

ಟೋಕಿಯೋ 2020: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ರಾಣಿ ರಾಂಪಾಲ್ ಪಡೆ

Basavaraj Bommai Met Devegowda to Jacqueline Fernandez top 10 News of August 1 ckm

ರಾಣಿ ರಾಂಪಾಲ್‌ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ನಾಕೌಟ್‌ ಹಂತಕ್ಕೇರಿದ ಸಾಧನೆ ಮಾಡಿದೆ.

ಗಡಂಗ್ ರಕ್ಕಮ್ಮನ ಸಖತ್ ಲುಕ್‌ಗೆ ಸಿನಿಪ್ರಿಯರ್ ಕ್ಲೀನ್ ಬೋಲ್ಡ್

Basavaraj Bommai Met Devegowda to Jacqueline Fernandez top 10 News of August 1 ckm

ಮುಂಬೈನಲ್ಲಿ ಕನ್ನಡ ಸಿನಿಮಾದ ಹವಾ ಶುರುವಾಗಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ವತಃ ವಿಕ್ರಾಂತ್ ರೋಣದ ಫಸ್ಟ್‌ಲುಕ್ ರಿವೀಲ್ ಮಾಡಿದ್ದಾರೆ. ಕಿಚ್ಚ ಸುದೀಪ್ ಹಾಗೂ ಕಿಚ್ಚ ಸದೀಪ್ ಜೋಡಿ ಮಾಡಿರುವ ಮೋಡಿಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣವಾಗುತ್ತಿದೆ.

ಉದ್ಯೋಗಿಗಳಿಗೆ ಕಾರು ಗಿಫ್ಟ್ ಮಾಡಿದ್ದ ಉದ್ಯಮಿಯಿಂದ ಮುಂಬೈನಲ್ಲಿ 185 ಕೋಟಿಯ ಮನೆ ಖರೀದಿ!

Basavaraj Bommai Met Devegowda to Jacqueline Fernandez top 10 News of August 1 ckm

ಸೂರತ್ ಮೂಲದ ವಜ್ರ ವ್ಯಾಪಾರಿ ಘನಶ್ಯಾಮ್ ಭಾಯ್ ಧಂಜಿ ಭಾಯ್ ಡೋಲಾಕಿಯಾ ಅವರ ಕಂಪನಿಯು ಮುಂಬೈನ ವರ್ಲಿ ಸೀ ಫೇಸ್ ನಲ್ಲಿ 185 ಕೋಟಿ ರೂ. ಮೊತ್ತಕ್ಕೆ ಪನ್ಹಾರ್ ಹೆಸರಿನ ಬಂಗಲೆಯನ್ನು ಖರೀದಿಸಿದೆ. ಇದು 19,886 ಚದರ ಅಡಿ ವಿಸ್ತೀರ್ಣ ಹೊಂದಿದೆ. ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಖರೀದಿಸಿದ ಈ ಬಂಗಲೆ ನೆಲ ಮಹಡಿ ಸೇರಿದಂತೆ 6 ಮಹಡಿಗಳನ್ನು ಒಳಗೊಂಡಿದೆ. ಈ ಐಷಾರಾಮಿ ಬಂಗಲೆಯನ್ನು ಜುಲೈ 30 ರಂದು ಖರೀದಿಸಲಾಗಿದೆ.

ಸರ್ಕಾರಿ ಸೌಲಭ್ಯವಿಲ್ಲ, ಪಾಸ್‌ಪೋರ್ಟ್ ಸಿಗಲ್ಲ; ದೇಶ ವಿರೋಧಿಗಳ ವಿರುದ್ಧ ಕಠಿಣ ನಿಯಮ ಜಾರಿ!

Basavaraj Bommai Met Devegowda to Jacqueline Fernandez top 10 News of August 1 ckm

ದೇಶ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲು ಜಮ್ಮು ಮತ್ತು ಕಾಶ್ಮೀರ ಮುಂದಾಗಿದೆ. ಕಲ್ಲು ತೂರಾಟ, ಗಲಭೆ, ಪಿತೂರಿ ಸೇರಿದಂತೆ ಯಾವುದೇ ದೇಶ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡವರ ಎಲ್ಲ ಸೌಲಭ್ಯ ಕಡಿತಗೊಳಿಸಲು ಜಮ್ಮು ಮತ್ತು ಕಾಶ್ಮೀರ ಹೊಸ ಆದೇಶ ಹೊರಡಿಸಿದೆ.

ಕುಂದ್ರಾಗೆ ಕೋಲ್ಕತಾ ಲಿಂಕ್, ಪೋರ್ನ್ ತಯಾರಿಕೆಯಲ್ಲಿದ್ದ ಮಾಡೆಲ್ ಅರೆಸ್ಟ್!

Basavaraj Bommai Met Devegowda to Jacqueline Fernandez top 10 News of August 1 ckm

ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿದ್ದರು ಎಂಬ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಜೈಲು ಸೇರಿದ್ದಾರೆ. ಇದೀಗ ಕೋಲ್ಕತಾದಿಂದ ಇಂಥದ್ದೇ ಒಂದು ಪ್ರಕರಣ ವರದಿಯಾಗಿದೆ.

ಚಿತ್ರಗಳು: ಗುರು ಶಿಷ್ಯ ಭೇಟಿ ಮಧ್ಯೆ ಸೋಮಣ್ಣ-ರೇವಣ್ಣ

Basavaraj Bommai Met Devegowda to Jacqueline Fernandez top 10 News of August 1 ckm

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ರಾಜಕೀಯ ಮೊದಲ ಗುರು ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಎಚ್.ಡಿ.ದೇವೇಗೌಡ ನಿವಾಸಕ್ಕೆ ಭೇಟಿ ನೀಡಿದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೆ ಏರಿದ ಬಳಿಕ ಮೊದಲ ಬಾರಿ ಸೌಹಾರ್ದಯುತ ಭೇಟಿ ನೀಡಿದರು. 

ಟೋಕಿಯೋ 2020: ಲೊವ್ಲಿನಾ ಬೊರ್ಗೊಹೈನ್ ಊರಿಗೆ ಹೊಸ ರಸ್ತೆ ಗಿಫ್ಟ್‌ ಕೊಟ್ಟ ಶಾಸಕ..!

Basavaraj Bommai Met Devegowda to Jacqueline Fernandez top 10 News of August 1 ckm

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಖಚಿತ ಪಡಿಸಿದ ಬಾಕ್ಸರ್‌ ಲೊವ್ಲಿನಾ ಬೊರ್ಗೊಹೈನ್ ತವರಿಗೆ ಮರಳುತ್ತಿದ್ದಂತೆ ಅಭೂತಪೂರ್ತ ಸ್ವಾಗತದ ಜತೆಗೆ ಸ್ಮರಣೀಯ ಗಿಫ್ಟ್‌ವೊಂದು ಕಾದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಪದಕ ಗೆದ್ದುಕೊಟ್ಟ ಸಾಧಕಿಯ ಊರಿನ ರಸ್ತೆಗೆ ಅಭಿವೃದ್ದಿಯ ಸ್ಪರ್ಷ ಸಿಕ್ಕಿದೆ ಎಂದು ವರದಿಯಾಗಿದೆ.

Follow Us:
Download App:
  • android
  • ios