Asianet Suvarna News Asianet Suvarna News

ಲಿವಿಂಗ್ ಟುಗೆದರ್ ಸ್ನೇಹಿತನಿಂದ ರೇಪ್: ಬಾರ್ ಗರ್ಲ್ ದೂರು

* ಅತ್ಯಾಚಾರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ
* ಸಾಲ ವಾಪಸ್‌ ಕೇಳಿದ್ದಕ್ಕೆ ಈ ರೀತಿ ದೂರು: ಆರೋಪಿ
* ಮದ್ಯ ಸೇವನೆಗೆ ಹೋಗುವಾಗ ಬಾರ್‌ಗರ್ಲ್ ಜತೆ ಆರೋಪಿ ಚಕ್ರಧರ್‌'ಗೆ ಸ್ನೇಹ
* ಬಳಿಕ ಕಸ್ತೂರಬಾ ನಗರದಲ್ಲಿ ಒಟ್ಟಿಗೆ ವಾಸ್ತವ್ಯ ಹೂಡಿದ್ದ ಜೋಡಿ
* ಚಕ್ರಧರ್‌ನಿಂದ ಪಡೆದಿದ್ದ 2.5 ಲಕ್ಷ ಪೈಕಿ 2 ಲಕ್ಷ ಸಾಲ ತೀರಿಸಿದ್ದ ಬಾರ್‌ಗರ್ಲ್
* ಈಗ ತಂಪು ಪಾನೀಯದಲ್ಲಿ ಮಾತ್ರೆ ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರು

bar girl alleges that living together friend rapes her

ಬೆಂಗಳೂರು(ಮಾ. 11): ಒಂದು ವರ್ಷದಿಂದ ‘ಲಿವಿಂಗ್‌ ಟುಗೆದರ್‌'ನಲ್ಲಿದ್ದ (ಸಹಜೀವನ) ಸ್ನೇಹಿತ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆ ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಬಾರ್‌ಗಲ್‌ರ್‍ ಆಗಿರುವ ಯುವತಿಯೊಬ್ಬಳು ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

24 ವರ್ಷದ ಬಾರ್‌ಗರ್ಲ್ ಮಾರ್ಚ್ 5ರಂದು ದೂರು ದಾಖಲಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಖಾಸಗಿ ಕಂಪನಿಯಲ್ಲಿ ಇಂಟಿರಿಯರ್‌ ಡಿಸೈನರ್‌ ಆಗಿರುವ ರಾಮಮೂರ್ತಿನಗರ ನಿವಾಸಿ ಚಕ್ರಧರರೆಡ್ಡಿ (37) ಎಂಬಾತನ ವಿರುದ್ಧ ಪೊಲೀಸರು ಅತ್ಯಾಚಾರ ಮತ್ತು ವಂಚನೆ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ರೆಸಿಡೆನ್ಸಿ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ಯುವತಿ ಕಳೆದ ಒಂದೂವರೆ ವರ್ಷದಿಂದ ಬಾರ್‌ಗಲ್‌ರ್‍ ಆಗಿದ್ದಳು. ಇದೇ ಬಾರ್‌ಗೆ ಮದ್ಯ ಸೇವಿಸಲು ಚಕ್ರಧರರೆಡ್ಡಿ ಹೋಗುತ್ತಿದ್ದಾಗ, 2015ರ ಡಿಸೆಂಬರ್‌ ತಿಂಗಳಲ್ಲಿ ಯುವತಿ ಮತ್ತು ಚಕ್ರಧರ್‌ ನಡುವೆ ಸ್ನೇಹವಾಗಿದೆ. ಇಬ್ಬರು ಜತೆಯಾಗಿ ಎಲ್ಲೆಡೆ ಸುತ್ತಾಡಿದ್ದು, ಬಳಿಕ 2016ರಿಂದ ಲಿವಿಂಗ್‌ ಟುಗೆದರ್‌ನಲ್ಲಿ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕಸ್ತೂರಬಾ ನಗರದಲ್ಲಿ ಒಟ್ಟಿಗೆ ನೆಲೆಸಿದ್ದರು. ಇನ್ನೂ ಇಬ್ಬರು ಹಲವು ಬಾರಿ ಹಣಕಾಸು ವಿನಿಮಯ ಮಾಡಿಕೊಂಡಿದ್ದಾರೆ. ಬಾರ್‌ಗರ್ಲ್ ಆಗಿರುವ ಯುವತಿ ಆರೋಪಿ ಚಕ್ರಧರ್‌ ಬಳಿ ರು. 2.5 ಲಕ್ಷ ಹಣ ಪಡೆದು ಕೊಂಡಿದ್ದಳು. ಇತ್ತೀಚೆಗೆ ತಾನೂ ಪಡೆದಿದ್ದ ರು. 2.5 ಲಕ್ಷ ಪೈಕಿ ರು. 2 ಲಕ್ಷ ಹಿಂದಿರುಗಿಸಿದ್ದಳು. ಬಾಕಿ ಹಣ ಕೊಡುವಂತೆ ಚಕ್ರಧರ್‌ ಕೇಳಿದ್ದಾನೆ. ಈ ವಿಚಾರವಾಗಿ ಬಾರ್‌ಗರ್ಲ್, ಆರೋಪಿ ನಡುವೆ ಜಗಳ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅತ್ಯಾಚಾರ ನಡೆಸಿರುವ ವಿಡಿಯೋ ಚಿತ್ರೀಕರಣ ಮಾಡಿಟ್ಟುಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಒಂದು ವೇಳೆ ಪೊಲೀಸರಿಗೆ ದೂರು ಕೊಟ್ಟರೆ ಆ್ಯಸಿಡ್‌ ಹಾಕುವುದಾಗಿಯೂ ಬೆದರಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಈ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 376, 354, 420 ಮತ್ತು ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಕೊಳ್ಳಲಾಗಿದೆ.

ಆರೋಪಿಗೆ ಮಕ್ಕಳಿದ್ದಾರೆ: ಆರೋಪಿ ಚಕ್ರಧರ್‌'ಗೆ ಈಗಾಗಲೇ ವಿವಾಹವಾಗಿದ್ದು, ಮಕ್ಕಳಿದ್ದಾರೆ. ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಹಣ ಕೇಳಿದ್ದಕ್ಕೆ ಈ ರೀತಿ ದೂರು ದಾಖಲಿಸಿದ್ದಾಳೆ ಎಂದು ಹೇಳಿಕೆ ನೀಡಿದ್ದಾನೆ. ಆತ ಅನಾರೋಗ್ಯದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಗುಣಮುಖವಾದ ಬಳಿಕ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಇಂತಹದ್ದೇ ಪ್ರಕರಣ:
ಇತ್ತೀಚೆಗೆ ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ಮಹಿಳೆಯೊಬ್ಬರು ತನ್ನ ಸ್ನೇಹಿತನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದರು. ಮಹಿಳೆ ಆರೋಪಿತ ವ್ಯಕ್ತಿಯೊಂದಿಗೆ 11 ವರ್ಷಗಳಿಂದ ಲಿವಿಂಗ್‌ ಟುಗೆದರ್‌ನಲ್ಲಿದ್ದರು. ಇಬ್ಬರ ನಡುವೆ ಮನಸ್ತಾಪವಾಗಿ ದೂರು ಇದ್ದರು. ಬಳಿಕ ಮಹಿಳೆ ಸ್ನೇಹಿತನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಳು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios