ದಾವ​ಣ​ಗೆರೆ :  ಶ್ರೇಣಿ 1ರಿಂದ ಶ್ರೇಣಿ 7ರ ಅಧಿಕಾ​ರಿ​ಗಳ ವೇತನ ಪರಿಷ್ಕ​ರ​ಣೆಗೆ ಸಮ್ಮತಿ ನೀಡು​ವುದೂ ಸೇರಿ​ದಂತೆ ವಿವಿಧ ಬೇಡಿಕೆ ಈಡೇ​ರಿ​ಸು​ವಂತೆ ಒತ್ತಾ​ಯಿಸಿ ಅಖಿಲ ಭಾರತ ಬ್ಯಾಂಕ್‌ ಅಧಿ​ಕಾ​ರಿ​ಗಳ ಒಕ್ಕೂ​ಟ​ದಿಂದ ಬ್ಯಾಂಕ್‌​ಗ​ಳನ್ನು ಬಂದ್‌ ಮಾಡುವ ಮೂಲಕ ನಗ​ರ​ದಲ್ಲಿ ಶುಕ್ರ​ವಾರ ಪ್ರತಿ​ಭ​ಟನೆ ನಡೆ​ಸ​ಲಾ​ಯಿತು.

ನಗ​ರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿ​ಯಾದ ಮಂಡಿ​ಪೇಟೆ ಶಾಖೆ ಎದುರು ಸಂಘ​ಟ​ನೆಯ ನೇತೃ​ತ್ವ​ದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತ​ನಾ​ಡಿದ ಸಂಘ​ಟನೆ ಕಾರ್ಯ​ದರ್ಶಿ ಕೆ.ಎ​ನ್‌.​ಗಿ​ರಿ​ರಾಜ, ಇಂಡಿ​ಯನ್‌ ಬ್ಯಾಂಕ್‌ ಅಸೋ​ಸಿ​ಯೇ​ಷನ್‌ ವಿರುದ್ಧ ಪ್ರತಿ ಬಾರಿಯೂ ನಮ್ಮ ಹಕ್ಕು ಪಡೆ​ಯಲು ಮುಷ್ಕರ ನಡೆ​ಸ​ಬೇ​ಕಾದ ಅನಿ​ವಾರ್ಯ ಪರಿ​ಸ್ಥಿತಿ ಬಂದೊದಗಿದೆ. ನಮ್ಮ ಬೇಡಿ​ಕೆ​ಗಳು ಪ್ರಮು​ಖ​ವಾ​ಗಿ ಶ್ರೇಣಿ 1ರಿಂದ ಶ್ರೇಣಿ 7ರ ಅಧಿ​ಕಾ​ರಿ​ಗಳ ವೇತನ ಪರಿಷ್ಕ​ರ​ಣೆಗೆ ಸಮ್ಮತಿ ನೀಡ​ಬೇಕು. ಸಲ್ಲಿ​ಸಿ​ರುವ ಬೇಡಿ​ಕೆ​ಗಳ ಪ್ರಕಾ​ರವೇ ವೇತನ ಪರಿ​ಷ್ಕರಣೆ​ಯಾ​ಗ​ಲೇ​ಬೇಕು ಎಂದು ಆಗ್ರ​ಹಿ​ಸಿ​ದರು.

ಐದು ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಬಂದ್

ಬ್ಯಾಂಕ್‌​ಗಳ ವಿಲೀ​ನ​ವನ್ನು ಕೇಂದ್ರ ಸರ್ಕಾರ ಕೈಬಿ​ಡ​ಬೇಕು. ಲಾಭ​ದಾ​ಯಕ ಅಥವಾ ಪಾವ​ತಿ​ಸುವ ಸಾಮ​ರ್ಥ್ಯಕ್ಕೆ ತಳಕು ಹಾಕದೇ ಕನಿಷ್ಠ ವೇತನ ಸೂತ್ರದಲ್ಲೇ ವೇತನ ಪರಿ​ಷ್ಕರಣೆ​ಯಾ​ಗ​ಬೇಕು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿ​ಯಾ​ದ​ಲ್ಲಿ​ರುವ ಪ್ರಕಾರ ಎಲ್ಲಾ ಬ್ಯಾಂಕ್‌​ಗಳ ಅಧಿ​ಕಾ​ರಿ​ಗ​ಳಿಗೆ ವೈದ್ಯ​ಕೀಯ ವಿಮಾ ಯೋಜನೆ ನೀಡ​ಬೇಕು. ಸಾರ್ವ​ಜ​ನಿಕ ವಲಯದ ಬ್ಯಾಂಕ್‌​ಗಳ ವಿಲೀ​ನಕ್ಕೆ ನಮ್ಮ ಸಂಪೂರ್ಣ ವಿರೋ​ಧ​ವಿದೆ ಎಂದು ಹೇಳಿ​ದರು.

ರಾಷ್ಟ್ರೀ​ಕೃತ ಬ್ಯಾಂಕಿಂಗ್‌ ವ್ಯವ​ಸ್ಥೆ​ಯನ್ನು ದುರ್ಬ​ಲ​ಗೊ​ಳಿ​ಸುವ ಹುನ್ನಾ​ರ​ವನ್ನು ಕೈಬಿ​ಡ​ಬೇಕು. ಸಾರ್ವ​ಜ​ನಿಕ ಸ್ವಾಮ್ಯದ ಬ್ಯಾಂಕಿಂಗ್‌ ವ್ಯವ​ಸ್ಥೆ​ಯನ್ನು ಮತ್ತಷ್ಟುವಿಸ್ತಾ​ರ​ಗೊ​ಳಿ​ಸ​ಬೇಕು. ಎಲ್ಲಾ ರಾಷ್ಟ್ರೀ​ಕೃತ ಬ್ಯಾಂಕ್‌​ಗಳ ಅಸ್ತಿತ್ವವೂ ಉಳಿ​ಯ​ಬೇಕು. ಬ್ಯಾಂಕ್‌​ಗಳ ವಿಲೀ​ನಕ್ಕೆ ತುದಿ​ಗಾಲ ಮೇಲೆ ನಿಂತಿ​ರುವ ಕೇಂದ್ರ ಸರ್ಕಾರ ತನ್ನ ನಿಲುವು, ನಿರ್ಧಾ​ರ​ವನ್ನು ತಕ್ಷ​ಣವೇ ಹಿಂಪ​ಡೆ​ಯ​ಬೇಕು ಎಂದು ತಾಕೀತು ಮಾಡಿ​ದರು.

ಪೇಟಿಎಂ ಬ್ಯಾಂಕ್ ಮೇಲೆ ಆರ್‌ಬಿಐ ಮುನಿಸು: ಅದರಲ್ಲಿರೋ ನಿಮ್ಮ ಹಣ ಬಾಸು?

ಕೆಲಸ ಹಾಗೂ ವೈಯ​ಕ್ತಿಕ ಜೀವ​ನದ ಮಧ್ಯ ಸಮ​ನ್ವಯ ಕಾಪಾಡಿ, 5 ದಿನ​ಗಳ ಬ್ಯಾಂಕಿಂಗ್‌ ಕೆಲ​ಸ​ವನ್ನು ಜಾರಿ​ಗೊ​ಳಿ​ಸ​ಬೇಕು. ಮೂಲ ಬ್ಯಾಂಕಿಂಗ್‌ ನಡೆಸಿ, ಅನು​ತ್ಪಾ​ದಕ ಆಸ್ತಿ​ಗಳ ಕಡಿ​ತಕ್ಕೆ ಆದ್ಯತೆ ನೀಡ​ಬೇಕು. ಎನ್‌​ಪಿ​ಎಸ್‌ ತೆಗೆದು ಹಾಕಿ, ಹಳೆಯ ಪಿಂಚಣಿ ಯೋಜ​ನೆ​ಯನ್ನು ಜಾರಿ​ಗೊ​ಳಿ​ಸ​ಬೇ​ಕೆಂಬುದೂ ಸೇರಿದಂತೆ ಸಂಘ​ಟ​ನೆಯ ಎಲ್ಲಾ ಬೇಡಿ​ಕೆ​ಗ​ಳನ್ನು ಈಡೇ​ರಿ​ಸು​ವಂತೆ ಅವರು ತಾಕೀತು ಮಾಡಿ​ದರು.

ಸಂಘ​ಟನೆ ಮುಖಂಡ​ರಾದ ಹರೀಶ, ಕೃಷ್ಣಪ್ಪ, ಆನಂದ​ಮೂರ್ತಿ, ಸುರೇಶ, ಭಾರತಿ, ಎಲ್ಲಾ ಬ್ಯಾಂಕ್‌​ಗಳ ಶಾಖೆಯ ಅಧಿ​ಕಾ​ರಿ​ಗಳು ಪ್ರತಿ​ಭ​ಟ​ನೆ​ಯ​ಲ್ಲಿ​ದ್ದರು.