Asianet Suvarna News Asianet Suvarna News

ಬೆಂಗಳೂರಿನ ಈ ಜಾಗಕ್ಕೆ ಅಂಬಿ ಹೆಸರು

ಇತ್ತೀಚೆಗಷ್ಟೇ ನಿಧನರಾದ ಹಿರಿಯ ನಟ ಅಂಬರೀಷ್ ಹೆಸರನ್ನು ಬೆಂಗಳೂರಿನ ಈ ರಸ್ತೆಗೆ ಇಡಲು ಬಿಬಿಎಂಪಿ ಮುಂದಾಗಿದೆ.  ಡಿ.26ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆ ಸಾಧ್ಯತೆ ಇದೆ.

Bangalore Race Course Road to be named after Ambareesh
Author
Bengaluru, First Published Dec 22, 2018, 10:41 AM IST

ಬೆಂಗಳೂರು :  ಇತ್ತೀಚೆಗೆ ನಿಧನರಾದ ನಟ ಅಂಬರೀಷ್‌ ಅವರ ಹೆಸರನ್ನು ರೇಸ್‌ಕೋರ್ಸ್‌ ರಸ್ತೆ ನಾಮಕರಣ ಮಾಡಲು ಬಿಬಿಎಂಪಿ ಮುಂದಾಗಿದ್ದು, ಡಿ.26ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆ ಸಾಧ್ಯತೆ ಇದೆ.

ಕಳೆದ ತಿಂಗಳ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಅಂಬರೀಷ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಬಹುತೇಕ ಪಾಲಿಕೆ ಸದಸ್ಯರು, ಅಂಬರೀಷ್‌ ಅವರು ಕನ್ನಡ ಚಿತ್ರರಂಗ ಹಾಗೂ ರಾಜಕಾರಣಿಯಾಗಿ ಸಲ್ಲಿಸಿದ ಸೇವೆಯ ಕುರಿತು ಸ್ಮರಿಸಿದ ಹೆಚ್ಚಿನ ಸದಸ್ಯರು, ನಗರದ ಪ್ರಮುಖ ರಸ್ತೆ ಅಥವಾ ಕಟ್ಟಡಕ್ಕೆ ಅಂಬರೀಷ್‌ ಅವರ ಹೆಸರು ನಾಮಕರಣ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು.

ಇದರೊಂದಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ಸದಸ್ಯರು ಪಾಲಿಕೆ ವೃತ್ತದಿಂದ ಮೌರ್ಯ ವೃತ್ತದವರೆಗಿನ ಅಥವಾ ಚಾಲುಕ್ಯ ವೃತ್ತದಿಂದ ಚಲನಚಿತ್ರ ವಾಣಿಜ್ಯ ಮಂಡಳಿವರೆಗಿನ ರಸ್ತೆಗೆ ಅಂಬರೀಷ್‌ ಅವರ ಹೆಸರನರನ್ನು ನಾಮಕರಣ ಮಾಡುವಂತೆ ಕೋರಿದ್ದಾರೆ. ಡಿ.26 ರ ಸಾಮಾನ್ಯ ಸಭೆಯಲ್ಲಿ ಯಾವ ರಸ್ತೆ ಅಂಬಿ ಹೆಸರಿಡಬೇಕು ಎಂಬುದು ತೀರ್ಮಾನವಾಗುವ ಸಾಧ್ಯತೆ ಇದೆ.

ಈ ಕುರಿತು ಪ್ರತಿಕ್ರಿಯಿಸಿದ ಶಿವರಾಜು ಅವರು, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರು ರೇಸ್‌ಕೋರ್ಸ್‌ ರಸ್ತೆಗೆ ಅಂಬರೀಷ್‌ ಅವರ ಹೆಸರಿಡುವಂತೆ ದೂರವಾಣಿ ಮೂಲಕ ಕೋರಿದ್ದು, ಮನವಿ ಪತ್ರ ನೀಡುವಂತೆ ತಿಳಿಸಿದ್ದೇನೆ. ಜತೆಗೆ ಪಾಲಿಕೆಯಿಂದಲೂ ಪ್ರಮುಖ ರಸ್ತೆ ಅಥವಾ ಕಟ್ಟಡಕ್ಕೆ ಅವರ ಹೆಸರಿಡಲು ಹಿಂದಿನ ಸಭೆಯಲ್ಲಿ ನಿರ್ಧರಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯ ಮನವಿಯನ್ನು ಪಾಲಿಕೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios