Asianet Suvarna News Asianet Suvarna News

ಬೆಂಗಳೂರು ಉಪಮೇಯರ್ ರಮೀಳಾ ಇನ್ನಿಲ್ಲ

ಬೆಂಗಳೂರು ಉಪ ಮೇಯರ್ ರಮೀಳಾ ಉಮಾಶಂಕರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

Bangalore Deputy Mayor Ramila Dies
Author
Bengaluru, First Published Oct 5, 2018, 7:06 AM IST
  • Facebook
  • Twitter
  • Whatsapp

ಬೆಂಗಳೂರು :  ಕಳೆದ 8 ದಿನಗಳ ಹಿಂದಷ್ಟೇ ಬೆಂಗಳೂರು ಉಪಮೇಯರ್ ಆಗಿ ಆಯ್ಕೆ ಆಗಿದ್ದ  ರಮೀಳಾ ಉಮಾಶಂಕರ್ [44] ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

ಕಳೆದ ರಾತ್ರಿ 12.45ರ ಸುಮಾರಿಗೆ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ. ಅಧಿಕಾರ ಸ್ವೀಕಾರ ಮಾಡಿ 8ನೇ ದಿನಕ್ಕೆ ವಿಧಿ ಅಟ್ಟಹಾಸ ಮೆರೆದಿದ್ದು, ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ. 

"

ಕಾವೇರಿ ಪುರ ವಾರ್ಡ್ ಕಾರ್ಪೊರೇಟರ್ ಆಗಿದ್ದ ಅವರು ಕಳೆದ ಸೆಪ್ಟೆಂಬರ್ 28ರಂದು ಜೆಡಿಎಸ್ ನಿಂದ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮೇಯರ್ ಆಗಿದ್ದರು. 

ಉಪಮೇಯರ್ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ಅನೇಕ ಮುಖಂಡರು ಸಂತಾಪ ಸೂಚಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Follow Us:
Download App:
  • android
  • ios