ಸ್ವಾತಂತ್ರ್ಯ ದಿನ ನೆನಪಿಲ್ಲ, ಧ್ವಜಾರೋಹಣಕ್ಕೆ ಪುರಸೋತ್ತು ಇಲ್ಲ!
ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಧ್ವಜಾರೋಹಣ ಮಾಡದ ಸಿಬ್ಬಂದಿ ವಿರುದ್ಧ ಆಕ್ರೋಶ ಕೇಳಿ ಬಂದಿದೆ. ಇದು ದೂರದಲ್ಲಿ ಎಲ್ಲೋ ಆದ ಪ್ರಕರಣವವಲ್ಲ. ನಮ್ಮದೆ ರಾಜ್ಯದಲ್ಲಿ ಸ್ವಾತಂತ್ರ್ಯ ದಿನ ಇಂಥದ್ದೊಂದು ಘಟನೆ ನಡೆದು ಹೋಗಿದೆ.
ಬಾಗಲಕೋಟೆ(ಆ.15] ಜಿಲ್ಲೆಯ ತೊದಲಬಾಗಿ ಗ್ರಾಮದಲ್ಲಿರೋ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯದ ದಿನ ಧ್ವಜಾರೋಹಣ ಮಾಡಲಾಗಿಲ್ಲ. ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ಅಧಿಕಾರಿಗಳಿಗೆ ರಾಷ್ಟ್ರೀಯ ಹಬ್ಬದ ನೆನಪಿಲ್ಲ ಎಂಬ ಆಕ್ರೋಶ ಸಾಮಾಜಿಕ ತಾಣದಲ್ಲಿ ವ್ಯಕ್ತವಾಗಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮ ಇಂಥ ಪ್ರಕರಣಕ್ಕೆ ಆಕ್ಚಿಯಾಗಿದೆ. ಫೇಸ್ ಬುಕ್ ನಲ್ಲಿಯೂ ಬ್ಯಾಂಕ್ ನ ನಿರ್ಲಕ್ಷ್ಯತನಕ್ಕೆ ಛೀಮಾರಿ ಹಾಕಲಾಗಿದೆ.
ಆಲೂರು ಪಟ್ಟಣ ಕರ್ನಾಟಕ ಬ್ಯಾಂಕ್ ನಲ್ಲಿ ಸಹ ಕಳೆದ 3 ವರ್ಷಗಳಿಂದಲೂ ರಾಷ್ಟ್ರ ಧ್ವಜ ಅನಾವರಣ ಮಾಡಕಾಗುತ್ತಿಲ್ಲ. ಈ ಬಗ್ಗೆ ಸ್ವತಾ ತಹಸೀಲ್ದಾರ್ ಶಾರದಾಂಬಬಾ ಕಾರಣ ಕೇಳಿ ಕೇಳಿ ನೋಟಿಸ್ ನೀಡಿದ್ದಾರೆ. ಆದರೆ ಈ ಬಾರಿಯೂ ಧ್ವಜಾರೋಹಣ ಮಾಡಲಾಗಿಲ್ಲ. ಸಾರ್ವಜನಿಕರಿಂದ ವ್ಯಾಪಕ ಟೀಕೆ ಕೇಳಿ ಬಂದಿದೆ.