Asianet Suvarna News Asianet Suvarna News

ಗೌರಿ - ಗಣೇಶ ಹಬ್ಬದ ದಿನವೇ ಬಿಎಸ್'ವೈಗೆ ಕಹಿ ಸುದ್ದಿ!

ಗೌರಿ - ಗಣೇಶ ಹಬ್ಬದ ದಿನವೇ ಬಿಎಸ್​ವೈಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಸುಪ್ರೀಂ ಕೋರ್ಟ್ ಬಿಎಸ್ ವೈ ವಿರುದ್ಧ 15 ಕ್ಕೂ ಹೆಚ್ಚು ಕೇಸ್'ಗಳ ಮರು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಮೂಲಕ ಹೈಕೋರ್ಟ್​ ರದ್ದುಗೊಳಿಸಿದ್ದ ಪ್ರಕರಣಗಳು ಮರುಜೀವ ಪಡೆದಿವೆ.   

Bad News For BS Yaddyurappa

ಬೆಂಗಳೂರು(ಆ.25): ಗೌರಿ - ಗಣೇಶ ಹಬ್ಬದ ದಿನವೇ ಬಿಎಸ್​ವೈಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಸುಪ್ರೀಂ ಕೋರ್ಟ್ ಬಿಎಸ್ ವೈ ವಿರುದ್ಧ 15 ಕ್ಕೂ ಹೆಚ್ಚು ಕೇಸ್'ಗಳ ಮರು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಮೂಲಕ ಹೈಕೋರ್ಟ್​ ರದ್ದುಗೊಳಿಸಿದ್ದ ಪ್ರಕರಣಗಳು ಮರುಜೀವ ಪಡೆದಿವೆ.   

ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಯಾವೆಲ್ಲ ಡಿ ನೋಟಿಫಿಕೇಷನ್ ಪ್ರಕರಣಗಳು ದಾಖಲಾಗಿದ್ದವೋ ಅವೆಲ್ಲವನ್ನೂ ಹೈ ಕೋರ್ಟ್ ರದ್ದುಗೊಳಿಸಿತ್ತು. ಹೀಗಾಗಿ ಈ ಪ್ರಕರಣಗಳನ್ನು ಸುಪ್ರೀಂ ಅಂಗಳಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಚಿಂತಿಸಿತ್ತು. ಇದಕ್ಕೆ ಪೂರಕವಾಗಿ ಶಿವಮೊಗ್ಗ ಮೂಲದ ಸಿರಾಜಿನ್​​ ಪಾಷಾ ಮತ್ತು ಬಾಲರಾಜ್ ಎಂಬ ಇಬ್ಬರು ವಕೀಲರು ದೂರು ನೀಡಿದ್ದರು. ಇವರಿಗೆ ರಾಜ್ಯ ಸರ್ಕಾರ ಸಾಥ್ ನೀಡಿದ್ದು, ಇದರ ಮರು ವಿಚಾರಣೆ ನಡೆಸುವಂತೆ ಸರ್ಕಾರ ಸುಪ್ರೀಂ ಮೊರೆ ಹೋಗಿತ್ತು. ಇದನ್ನು ಪರಿಶೀಲಿಸಿದ ಸುಪ್ರೀಂ ಕೇಸ್'ಗಳಿಗೆ ಮರುಜೀವ ನೀಡಿತ್ತು.

ಸುಪ್ರೀಂ ಇಂದು ಈ ಪ್ರಕರಣಗಳ ವಿಚಾರಣೆ ಆರಂಭಿಸಿದ್ದು, ಮುಂದಿನ 8 ವಾರಗಳ ಕಾಲ ಈ ವಿಚಾರಣೆಯನ್ನು ಮುಂದೂಡಿದೆ. ಇದನ್ನು ಗಮನಿಸಿದರೆ ರಾಜ್ಯ ಸರ್ಕಾರ ಬಿಎಸ್'ವೈ ವಿರುದ್ಧ  ಸಮರ ಸಾರಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

Follow Us:
Download App:
  • android
  • ios