Asianet Suvarna News Asianet Suvarna News

Bitcoin ಹಗರಣ ಕುರಿತ ಆಡಿಯೋ ಸ್ಫೋಟ, NZ ಟೆಸ್ಟ್ ಸರಣಿಗೆ ತಂಡ ಪ್ರಕಟ; ನ.12ರ ಟಾಪ್ 10 ನ್ಯೂಸ್!

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋ ಲೀಕ್ ಆಗಿದೆ. ಐಪಿಎಸ್ ಅಧಿಕಾರಿ ಫೋನ್ ಕಾಲ್ ಆಡಿಯೋ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿ ಇಬ್ಬರು ಕ್ರಿಕೆಟಿಗರ ಮೇಲೆ ರೇಪ್ ದೂರು ದಾಖಲಾಗಿದೆ. ನಿರ್ಮಾಪಕರೊಬ್ಬರ ಹಾಟ್ ವಿಚಾರ ಮಲ್ಲಿಕಾ ಶೆರಾವತ್ ಬಹಿರಂಗ ಪಡಿಸಿದ್ದಾರೆ. ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ರಾಜಸ್ಥಾನ ರಾಜಕೀಯಕ್ಕೆ ಪ್ರಿಯಾಂಕ ಪ್ರವೇಶ ಸೇರಿದಂತೆ ನವೆಂಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Audio clip of Bitcoin scam in Karnataka to Team India squad top 10 News of November 12 km
Author
Bengaluru, First Published Nov 12, 2021, 4:51 PM IST
  • Facebook
  • Twitter
  • Whatsapp

Facebook ಬಳಸಿದ್ರೆ ನನಗೆ ಹೊಡಿ ಎಂದು ಚಂದದ ಹುಡಗಿಯ ಕೆಲಸಕ್ಕೆ ನೇಮಿಸಿದ, ಗಂಟೆಗೆ 600 Rs ಸಂಬಳ

Audio clip of Bitcoin scam in Karnataka to Team India squad top 10 News of November 12 km

ಭಾರತೀಯ-ಅಮೆರಿಕನ್ ವಾಣಿಜ್ಯೋದ್ಯಮಿ ಮನೀಶ್ ಸೇಥಿ ಅವರು ಫೇಸ್‌ಬುಕ್ ಅನ್ನು ನೋಡಿದಾಗೆಲ್ಲ ಕಪಾಳಮೋಕ್ಷ ಮಾಡಲು ಕ್ರೇಗ್ಸ್‌ಲಿಸ್ಟ್‌ನಿಂದ ಸ್ಲ್ಯಾಪರ್ ಒಬ್ಬರನ್ನು ನೇಮಿಸಿಕೊಂಡಿದ್ದಾರೆ. ಬ್ರಾಂಡ್ ಪಾವ್ಲೋಕ್‌ನ ಸಂಸ್ಥಾಪಕ ಸೇಥಿ, ಕಾರಾ ಎಂಬ ಮಹಿಳೆಯನ್ನು ಗಂಟೆಗೆ 8 ಡಾಲರ್ ನೀಡಿ ನೇಮಿಸಿಕೊಂಡಿದ್ದಾರೆ. ಅಂದರೆ ಭಾರತೀಯ ರುಪಾಯಿಗಳಲ್ಲಿ 600 ರೂಪಾಯಿ ಹತ್ತಿರ. ತನ್ನ ಫೇಸ್‌ಬುಕ್ ವೀಕ್ಷಿಸಲು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗೆ ಹೋದರೆ ತನಗೆ ಕಪಾಳಮೋಕ್ಷ ಮಾಡಲು ನೇಮಿಸಿಕೊಂಡಿದ್ದಾರೆ

ರಾಜಸ್ಥಾನದಲ್ಲಿ ಸರ್ಕಾರ ಉಳಿಸಲು ಪ್ರಿಯಾಂಕಾ ವಾದ್ರಾ ರಂಗಪ್ರವೇಶ

Audio clip of Bitcoin scam in Karnataka to Team India squad top 10 News of November 12 km

ಕಣ್ಣ ಮುಂದೆಯೇ ಒಂದೊಂದೇ ರಾಜ್ಯದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ (Congress) ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi), ಇದೀಗ ರಾಜಸ್ಥಾನ ರಾಜಕೀಯಕ್ಕೆ (Politics) ರಂಗಪ್ರವೇಶ ಮಾಡಿದ್ದಾರೆ.

Bitcoin Scam: ಬಿಟ್‌ಕಾಯಿನ್‌ ಬಿಟ್ಹಾಕಿ, ಚೆನ್ನಾಗಿ ಕೆಲಸ ಮಾಡಿ: ಮೋದಿ ಕಿವಿಮಾತು!

Audio clip of Bitcoin scam in Karnataka to Team India squad top 10 News of November 12 km

ಬಿಟ್‌ಕಾಯಿನ್‌ ಪ್ರಕರಣದಲ್ಲಿ (Bitcoin Scam) ಪ್ರತಿಪಕ್ಷಗಳ ವಾಗ್ದಾಳಿಗೆ ಗುರಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavraj Bommai) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಧೈರ್ಯ ತುಂಬಿದ್ದಾರೆ. 

Team India ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿ ಇಬ್ಬರು ಕ್ರಿಕೆಟಿಗರಿಂದ ಗ್ಯಾಂಗ್‌ಸ್ಟರ್ ಪತ್ನಿ ಮೇಲೆ ರೇಪ್ ಆರೋಪ..!

Audio clip of Bitcoin scam in Karnataka to Team India squad top 10 News of November 12 km

ಕುಖ್ಯಾತ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ (Dawood Ibrahim) ಅವರ ಸಹಚರ ರಿಯಾಜ್ ಭಾಟಿ (Riyaz Bhati) ಪತ್ನಿ ರೆಹನೂಮಾ ಭಾಟಿ ಟೀಂ ಇಂಡಿಯಾ ಕ್ರಿಕೆಟಿಗ ಸೇರಿದ ಕೆಲವು ವ್ಯಕ್ತಿಗಳ ಮೇಲೆ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಮಾತ್ರವಲ್ಲದೇ ಮುಂಬೈ ಪೊಲೀಸರ (Mumbai Police) ಬಳಿ ಕೇಸ್ ದಾಖಲಿಸಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ

Ind vs NZ Test: ಕಿವೀಸ್ ಎದುರಿನ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ..!

Audio clip of Bitcoin scam in Karnataka to Team India squad top 10 News of November 12 km

ಹುನಿರೀಕ್ಷಿತ ನ್ಯೂಜಿಲೆಂಡ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 16 ಆಟಗಾರರನ್ನೊಳಗೊಂಡ ಭಾರತ ತಂಡ (Indian Cricket Team) ಪ್ರಕಟವಾಗಿದ್ದು, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ಅಜಿಂಕ್ಯ ರಹಾನೆಗೆ (Ajinkya Rahane) ನಾಯಕತ್ವ ಪಟ್ಟ ಕಟ್ಟಲಾಗಿದೆ. ಮೊದಲ ಟೆಸ್ಟ್ ನವೆಂಬರ್ 25ರಿಂದ 29ರವರೆಗೆ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆದರೆ, ಡಿಸೆಂಬರ್ 03ರಿಂದ 07ರವರೆಗೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

ನಿರ್ಮಾಪಕರೊಬ್ಬರ ಹಾಟ್ ವಿಚಾರವೊಂದನ್ನು ಬಹಿರಂಗಪಡಿಸಿದ ಮಲ್ಲಿಕಾ ಶೆರಾವತ್‌

Audio clip of Bitcoin scam in Karnataka to Team India squad top 10 News of November 12 km

‘ಹಾಟ್‌ ಸಾಂಗ್‌’ (hot song) ಒಂದನ್ನು ಚಿತ್ರೀಕರಿಸಲು ಹೊಟ್ಟೆಯ ಮೇಲೆ ಚಪಾತಿ ಬಿಸಿ ಮಾಡುವ ದೃಶ್ಯ ಚಿತ್ರೀಕರಿಸುವುದಾಗಿ ನಿರ್ಮಾಪಕರೊಬ್ಬರು (Producer) ಕೇಳಿದ್ದರು.

Tech News: YouTubeನಲ್ಲಿ ಇನ್ನು ಮುಂದೆ ಡಿಸ್‌ಲೈಕ್ ಕೌಂಟ್ ಕಾಣಲ್ಲ!

Audio clip of Bitcoin scam in Karnataka to Team India squad top 10 News of November 12 km

ವಿಶ್ವದ ಅತಿದೊಡ್ಡ ಆನ್‌ಲೈನ್ ವಿಡಿಯೋ ಷೇರಿಂಗ್ ವೇದಿಕೆಯಾಗಿರುವ ಯುಟೂಬ್ (YouTube), ವಿಡಿಯೋ ಸೃಷ್ಟಿಕಾರರ ವಿರುದ್ಧ ನಿಂದನೆ ಮತ್ತು ದುರುಪಯೋಗವನ್ನು ತಡೆಯುವುದಕ್ಕಾಗಿ, ಡಿಸ್‌ಲೈಕ್ ಕೌಂಟ್ (Dislike) ಅನ್ನು ತೆಗೆದು ಹಾಕಲಿದೆ. ಆನ್‌ಲೈನ್ ನಿಂದನೆಯನ್ನು ತಡೆಯಲು ಕಂಪನಿ ಈ ಕ್ರಮವನ್ನು ಕೈಗೊಳ್ಳುತ್ತಿದೆ.

Digital India Effect| ಡಿಜಿಟಲ್‌ ವಹಿವಾಟು ನಂಬರ್‌ 1, ನೋಟುಗಳಿಗಿಲ್ಲ ಡಿಮ್ಯಾಂಡ್‌..!

Audio clip of Bitcoin scam in Karnataka to Team India squad top 10 News of November 12 km

ಹಣ(Money) ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವುದು ಹಳೆಯ ಗಾದೆ. ಈಗ ಹಣ ಅಂದರೆ ನೋಟಿಗೇ ಡಿಮ್ಯಾಂಡ್‌ ಇಲ್ಲ. ಡಿಜಿಟಲ್‌ ಪೇಮೆಂಟ್‌(Digital Payment) ಹೆಚ್ಚುತ್ತಿದ್ದಂತೆ ನೋಟುಗಳು ದೂರ ಸರಿಯುತ್ತಿವೆ. ವಿಶ್ವದಲ್ಲೇ ಡಿಜಿಟಲ್‌ ವಹಿವಾಟಿನ ಸಂಖ್ಯೆಯಲ್ಲಿ ಭಾರತ(India) ಪ್ರಥಮ ಸ್ಥಾನದಲ್ಲಿದೆ. ಚೀನಾ(China), ಅಮೆರಿಕವನ್ನು(America) ಹಿಂದಿಕ್ಕಿದೆ.

Bitcoin Scam Exclusive: ಬಿಟ್‌ಕಾಯಿನ್ ಹಗರಣಕ್ಕೆ ಬಿಗ್ ಟ್ವಿಸ್ಟ್, IPS ಅಧಿಕಾರಿಯ ಆಡಿಯೋ ಲೀಕ್!

Audio clip of Bitcoin scam in Karnataka to Team India squad top 10 News of November 12 km
ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ ಭಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಸತತ ಸುದ್ದಿಗೋಷ್ಠಿ ಮೂಲಕ ಗಂಭೀರ ಆರೋಪ ಮಾಡುತ್ತಿದೆ. ಇತ್ತ ಬಿಜೆಪಿ ದಾಖಲೆ ಕೊಡಿ ಎಂದು ಹೇಳುತ್ತಿದೆ. ಇದರ ನಡುವೆ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋ ಲೀಕ್ ಆಗಿದೆ. 

Follow Us:
Download App:
  • android
  • ios