ಮಿನ್ಯಾ(ಫೆ.03): ಮಮ್ಮಿಗಳ ನಾಡು ಈಜಿಪ್ಟ್‌ನಲ್ಲಿ ಬಗೆದಷ್ಟೂ ಪುರಾತನ ಮಮ್ಮಿಗಳು ಸಿಗುತ್ತಿವೆ. ಮಮ್ಮಿಗಳ ಜಾಡು ಹಿಡಿದು ಹೊರಟಿರುವ ಪುರಾತತ್ವ ಶಾಸ್ತ್ರಜ್ಞರಿಗೆ ವಿಸ್ಮಯ ಮಮ್ಮಿಗಳು ದೊರೆಯುತ್ತಿವೆ.

ಅದರಂತೆ ಇಲ್ಲಿನ ಮಿನ್ಯಾ ರಾಜ್ಯದ ತುನಾ-ಅಲ್-ಗಬಲ್ ಪ್ರದೇಶದಲ್ಲಿ ಟಾಲೆಮಿಕ್ ಯುಗ(ಟಾಲೆಮಿ ರಾಜ)ದ ಸುಮಾರು 40 ಮಮ್ಮಿಗಳು ಪತ್ತೆಯಾಗಿದ್ದು, ವೃದ್ಧರ, ಮಕ್ಕಳ ಮತ್ತು ವಿವಿಧ ಪ್ರಾಣಿಗಳನ್ನು ಒಂದೇ ಜಾಗದಲ್ಲಿ ಮಮ್ಮಿ ರೂಪದಲ್ಲಿ ಶೇಖರಿಸಿರಲಾಗಿದೆ.

ಪತ್ತೆಯಾದ ಮಮ್ಮಿಗಳಲ್ಲಿ 12 ಮಕ್ಕಳ ಮತ್ತು 6 ಪ್ರಾಣಿಗಳ ಮಮ್ಮಿಗಳಿದ್ದು, ಇವರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರಾಗಿರಬಹುದು ಎಂದು ಅಂದಾಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪುರಾತತ್ವ ಶಾಸ್ತ್ರಜ್ಞ ಮೊಹ್ಮದ್ ರಗಾಬ್, ಈ ಮಮ್ಮಿಗಳು ಟಾಲೆಮಿ ರಾಜನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿವೆ ಎಂದು ತಿಳಿಸಿದ್ದಾರೆ. ಅಲ್ಲದೇ ಕೆಲವು ಮಮ್ಮಿಗಳಲ್ಲಿ 6 ಕೋಣೆಗಳ ಗುಪ್ತ ಹಾದಿ ಕೂಡ ಪತ್ತೆಯಾಗಿವೆ ಎಂದು ಹೆಳಿದ್ದಾರೆ.

ಸಿಕ್ತು ಪೂಜಾರಿಯ ಮಮ್ಮಿ: ಇಂರ್ಟೆಸ್ಟಿಂಗ್ ಕತೆ ಕೇಳಮ್ಮಿ!