ಬೆಂಗಳೂರು[ಫೆ.19]  ಸದ್ಯಕ್ಕೆ  ರೌಡಿ ಶಾಸಕ ಗಣೇಶ್‌ಗೆ ಜಾಮೀನು ಸಿಗುವುದು ಬಹುತೇಕ ಅನುಮಾನ. ಇದಕ್ಕೆ ಸಾಕಷ್ಟು ಕಾರಣಗಳು ಲಭ್ಯವಾಗುತ್ತಲೆ ಇವೆ.

ಐಪಿಸಿ ಸೆಕ್ಷನ್ 307 ಅಡಿ ಗಣೇಶ್‌ಗೆ ಜಾಮೀನು ಅಷ್ಟು ಸುಲಭವಲ್ಲ. ಕೊಲೆ ಯತ್ನ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.

ಆನಂದ್ ಸಿಂಗ್ ಹಲ್ಲೆ ಪ್ರಕರಣ, ಕೊನೆಗೂ ಕಂಪ್ಲಿ ಶಾಸಕ ಗಣೇಶ್ ಅರೆಸ್ಟ್

ಮೊದಲು ಕಂಪ್ಲಿ ಶಾಸಕರನ್ನು ಘಟನೆ ನಡೆದ ಈಗಲ್‌ ಟನ್ ರೆಸಾರ್ಟ್‌ಗೆ ಕರೆದುಕೊಂಡು ಹೋಗುತ್ತಾರೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಪೊಲೀಸರು ಕಲೆಹಾಕಿರುವ ಮಾಹಿತಿ ಆಧಾರದಲ್ಲಿ ಗಣೇಶ್ ಅವರನ್ನು 14 ದಿನ ವಿಚಾರಣೆಗೆ ಕೇಳುವ ಸಾಧ್ಯತೆ ಇದೆ.