ಸೂರತ್, [ಏ.30] : ಸ್ವಯಂ ಘೋಷಿತ ದೇವಮಾನವ ಅಸಾರಾಮ್​ ಬಾಪು ಪುತ್ರ, ನಾರಾಯಣ ಸಾಯಿ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ಯದಾನೆ. 

ಕಳೆದ ಶುಕ್ರವಾರ ನಾರಾಯಣ ಸಾಯಿ ಅಪರಾಧಿ ಎಂದು ತೀರ್ಪು ನೀಡಿದ್ದ ಗುಜರಾತ್‌ನ ಸೂರತ್ ಕೋರ್ಟ್ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರುಪಾಯಿ ದಂಡ ವಿಧಿಸಿದೆ.

2013ರಲ್ಲಿ ನಾರಾಯಣ ಸಾಯಿ ಹಾಗೂ ಅಸಾರಾಮ್​ ಬಾಪು ಸೂರತ್​​ನಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿರೋ ಆರೋಪ ಕೇಳಿಬಂದಿತ್ತು. ನಾರಾಯಣ ಸಾಯಿ ಕಿರಿಯಳ ಮೇಲೆ ಅತ್ಯಾಚಾರವೆಸಗಿದ್ರೆ, ಅಸರಾಂ ಬಾಪು ಹಿರಿಯ ಸಹೋದರಿಯ ಮೇಲೆ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಲಾಗಿತ್ತು. 

ರೇಪ್‌ ಕೇಸಲ್ಲಿ ಆಸಾರಂನ ಪುತ್ರ ನಾರಾಯಣ್‌ ಸಾಯಿ ದೋಷಿ

ಕೇಸ್​​ ದಾಖಲಾಗುತ್ತಿದ್ದಂತೆ ನಾರಾಯಣ ಸಾಯಿ ಭೂಗತನಾಗಿದ್ದ. 2 ತಿಂಗಳ ತೀವ್ರ ಶೋಧ ನಡೆಸಿ  ನಾರಾಯಣನನ್ನು ದೆಹಲಿ-ಹರಿಯಾಣ ಗಡಿಯಲ್ಲಿ ಬಂಧಿಸಲಾಗಿತ್ತು. 

ಅತ್ತ ನಾರಾಯಣ ಸಾಯಿ ತಂದೆ  ಅಸರಾಂ ಬಾಪು ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿದ್ದು, ಸದ್ಯ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.