ಹೈದರಾಬಾದ್(ಡಿ.02): ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಾಹ್ ಸೋಲಿಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. 

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಅಲ್ಲಾಹ್ ಸೋಲಿಸಲಿದ್ದಾರೆ ಎಂದು ಒವೈಸಿ ಹೇಳಿದ್ದಾರೆ. 

ಅಲ್ಲಾಹ್ ನಮ್ಮ ಜೊತೆಗಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ತನಕ ಎಂಐಎಂಐಎಂ ವಿರಮಿಸುವುದಿಲ್ಲ ಎಂದು ಒವೈಸಿ ಭರವಸೆ ನೀಡಿದ್ದಾರೆ.

ಇನ್ನು ಒವೈಸಿ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್, ದೇವರು ಯಾರ ಜೊತೆಗಿರಲಿದ್ದಾನೆ ಎಂಬುದು ಚುನಾವಣೆ ಮುಗಿದ ಮೇಲೆ ಒವೈಸಿಗೆ ಗೊತ್ತಾಗಲಿದೆ ಎಂದು ಹೇಳಿದೆ.