ನವದೆಹಲಿ(ಫೆ.27): ಪುಲ್ವಾಮಾ ದಾಳಿ, ಅದಕ್ಕೆ ಭಾರತೀಯ ವಾಯುಸೇನೆಯಿಂದ ಪ್ರತ್ಯುತ್ತರ ಮತ್ತು ಇಂದು ಭಾರತೀಯ ವಾಯುಪಡೆಯ ಮಿಗ್-೨೧ ವಿಮಾನ ಪತನದ ಬಳಿಕ ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ.

ಈಗಾಗಲೇ ಭಾರತೀಯ ವಾಯುಸೇನೆ ಪಾಕ್ ಗಡಿಯೊಳಗೆ ನುಸುಳಿ ಜೆಇಎಂ ಉಗ್ರರ ಅಡಗುತಾಣ ಧ್ವಂಸ ಮಾಡಿ ಬಂದಿದೆ. ಇದಕ್ಕೆ ಪ್ರತಿಯಾಗಿ ಇಂದು ಭಾರತೀಯ ವಾಯುಪಡೆಯ ಮಿಗ್-೨೧ ವಿಮಾನ ಹೊಡೆದಿರುವುದಾಗಿ ಪಾಕ್ ಹೇಳಿಕೊಳ್ಳುತ್ತಿದೆ.

ಈ ಮಧ್ಯೆ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಒಸಾಮ ಬಿನ್ ಲ್ಯಾಡನ್ ಹತ್ಯೆ ಕಾರ್ಯಾಚರಣೆ ಅಮೆರಿಕಕ್ಕೆ ಸಾಧ್ಯವಾದರೆ ಭಾರತಕ್ಕೆ ಏಕೆ ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಅಮೆರಿಕಕ್ಕೆ ಪಾಕಿಸ್ತಾನದಲ್ಲಿದ್ದ ಒಸಾಮ ಬಿನ್ ಲ್ಯಾಡನ್ ನನ್ನು ಹತ್ಯೆ ಮಾಡಲು ಸಾಧ್ಯವಾದರೆ ಅಂತಹ ಕಾರ್ಯಾಚರಣೆ ಭಾರತಕ್ಕೆ ಏಕೆ ಸಾಧ್ಯವಿಲ್ಲ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.

ಆದರೆ ಜೇಟ್ಲಿ ಇಶಾರೆ ಯಾರ ಮೇಲಿತ್ತು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ. ಜೇಟ್ಲಿ ಹಾಫೀಜ್ ಸಯೋದ್ ಕುರಿತು ಪ್ರಸ್ತಾಪಿಸಿದರೋ ಅಥವಾ ಮಸೂದ್ ಅಜರ್ ಕುರಿತು ಈ ಹೇಳಿಕೆ ನೀಡಿದರೋ ಗೊತ್ತಾಗಿಲ್ಲ.