ನವದೆಹಲಿ: ಇಲ್ಲಿನ ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಸ್ಮಾರಕ ಬದಲಿಗೆ ಭಾರತದ ಎಲ್ಲ ಪ್ರಧಾನ ಮಂತ್ರಿಗಳ ಕುರಿತು ಮಾಹಿತಿ ನೀಡುವ ಮ್ಯೂಸಿಯಂ ಆಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿದ ನೆಹರೂ ಮೆಮೋರಿಯಲ್ ಮ್ಯೂಸಿಯಂ ಹಾಗೂ ಲೈಬ್ರರಿ ಸೊಸೈಟಿಯ ನಾಲ್ವರು ಸದಸ್ಯರಿಗೆ ಕೇಂದ್ರ ಸರ್ಕಾರ ಗೇಟ್‌ಪಾಸ್ ನೀಡಿದೆ. 

ಅವರ  ಸ್ಥಾನಕ್ಕೆ ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ, ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್.ಜೈ ಶಂಕರ್, ಬಿಜೆಪಿ ಸಂಸದ ಸಹಸ್ರಬುದ್ಧೆ ಮತ್ತುಐಜಿಎನ್ ಸಿಎ ಅಧ್ಯಕ್ಷ ರಾಮ್ ಬಹದ್ದೂರ್ ರಾಯ್ ಅವ ರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.