ಕಾಪು ಕ್ಷೇತ್ರದಿಂದ ಅನುಪಮಾ ಶೆಣೈ ಸ್ಪರ್ಧೆ: ಪಕ್ಷದ ಚಿಹ್ನೆ ಯಾವುದು ಗೊತ್ತಾ?

First Published 13, Apr 2018, 1:31 PM IST
Anupama Shenai Contest from Kaapu constituency
Highlights

ಉಡುಪಿಯಲ್ಲಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಮ್ಮ ಪಕ್ಷದ ಚಿಹ್ನೆಯನ್ನು  ಘೋಷಣೆ ಮಾಡಿದ್ದಾರೆ. 

ಉಡುಪಿ (ಏ. 13):  ಉಡುಪಿಯಲ್ಲಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಮ್ಮ ಪಕ್ಷದ ಚಿಹ್ನೆಯನ್ನು  ಘೋಷಣೆ ಮಾಡಿದ್ದಾರೆ. 

ಭಾರತೀಯ ಜನಶಕ್ತಿ ಕಾಂಗ್ರೆಸ್  ಚಿಹ್ನೆ ಬೆಂಡೆಕಾಯಿ.  ಅನುಪಮಾ ಶೆಣೈ ಉಡುಪಿಯ ಕಾಪು ಕ್ಷೇತ್ರದಿಂದ ಸ್ಪರ್ಧೆ  ಮಾಡಲಿದ್ದಾರೆ.  ಮೋದಿ ವಿರುದ್ಧ ಫೇಸ್’ಬುಕ್ ವಾರ್ ಗೆ ತಾತ್ಕಾಲಿಕ ಬ್ರೇಕ್  ಹಾಕಿದ್ದಾರೆ.  ಡಿವೈಎಸ್ಪಿ ಹುದ್ದೆಗೆ ರಾಜಿನಾಮೆ ಕೊಟ್ಟಾಗ ನಾನು ಬಿಜೆಪಿ ಎಂದು ಬಿಂಬಿಸಲಾಯ್ತು.  ಆದರೆ  ನಾನು ಬಿಜೆಪಿ ಅಲ್ಲ.  ಮೋದಿನ ಟೀಕೆ ಮಾಡಿದ್ರೆ ಫಾಲೋವರ್ಸ್ ಕೆರಳ್ತಾರೆ.  ಜನಪ್ರಿಯತೆ ಹೆಚ್ಚಾಗುತ್ತದೆ.  ವೋಟ್ ಬ್ಯಾಂಕ್  ಮಾಡಬಹುದು ಎಂಬ ಉದ್ದೇಶ ನನ್ನದಲ್ಲ.  ಸಾಮಾಜಿಕ ‌ಜಾಲತಾಣ ಬಿಜೆಪಿಯಷ್ಟೇ  ಕಾಂಗ್ರೆಸ್  ಈಗಷ್ಟೇ ಸಕ್ರಿಯವಾಗುತ್ತಿದೆ ಎಂದಿದ್ದಾರೆ. 

ಲೋಕಸಭಾ ಚುನಾವಣೆ ಬರಲಿ.  ಮತ್ತೆ ಮೋದಿ ವಿರುದ್ದ ಟೀಕೆ ಆರಂಭಿಸುತ್ತೇನೆ. ಕಾಂಗ್ರೆಸ್ ಬಿಜೆಪಿ ಸಮಾನ ವೈರಿಗಳು  ಎಂದಿದ್ದಾರೆ. 

loader