ರಾಲೆ ಗಣ್ ಸಿದ್ದಿ(ಫೆ.03): ಲೋಕಪಾಲ ಮಸೂದೆಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ಈ ಹೋರಾಟದಲ್ಲಿ ಒಂದು ವೇಳೆ ತಮಗೇನಾದರೂ ಆದಲ್ಲಿ ಅದಕ್ಕೆ ಜನರು ಮೋದಿಯನ್ನೇ ಹೊಣೆಯಾಗಿಸುತ್ತಾರೆ ಎಂದು ಹಜಾರೆ ಗುಡುಗಿದ್ದಾರೆ. 

ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಹಜಾರೆ, ‘ಜನರು ನನ್ನನ್ನು ಪರಿಸ್ಥಿತಿಗಳನ್ನು ನಿಭಾಯಿಸಿದ ವ್ಯಕ್ತಿ ಎಂದು ನೆನಪಿಸಿಕೊಳ್ಳುತ್ತಾರೆಯೇ ಹೊರತು ಉರಿಯುತ್ತಿರುವ ಬೆಂಕಿಯನ್ನು ಮತ್ತಷ್ಟು ಉತ್ತೇಜಿಸಿದ ವ್ಯಕ್ತಿ ಎಂದು ನೆನಪಿಸಿಕೊಳ್ಳುವುದಿಲ್ಲ. ನನಗೆ ಏನೇ ಆದರೂ ಜನರು  ಅದಕ್ಕೆ ಮೋದಿಯನ್ನೇ ಹೊಣೆಯಾಗಿಸುತ್ತಾರೆ..’ ಎಂದು ಹರಿಹಾಯ್ದಿದ್ದಾರೆ.

ಜನ್ ಆಂದೋಲನ್ ಸತ್ಯಾಗ್ರಹದ ಅಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕಳೆದ ಜ.30 ರಿಂದ ನಿರಶನ ಪ್ರಾರಂಭಿಸಿದ್ದು, ಲೋಕಾಯುಕ್ತ, ಲೋಕಪಾಲ್ ಜಾರಿಗಾಗಿ ಮತ್ತೆ ಹೋರಾಟ ಆರಂಭಿಸಿದ್ದಾರೆ.