Asianet Suvarna News Asianet Suvarna News

ಟಿಡಿಪಿ ಶಾಸಕರ ಹತ್ಯೆ ಹಿಂದೆ ಮಹಿಳಾ ನಕ್ಸಲ್ ನಾಯಕಿ ಕೈವಾಡ..!

ಮಾವೋವಾದಿ ಕಮ್ಯುನಿಸ್ಟ್ ಪಕ್ಷದ ಸದಸ್ಯೆ ಅರುಣಾ ಎಂಬಾಕೆ 20ರಿಂದ 50 ಸದಸ್ಯರ ತಂಡವನ್ನು ರಚಿಸಿಕೊಂಡಿದ್ದಳು. ಈ ತಂಡದಲ್ಲಿದ್ದವರು ಬಹುತೇಕ 20-25 ವರ್ಷದ ಒಳಗಿನವರಾಗಿದ್ದಾರೆ.

Andhra Pradesh Police suspect one woman headed Maoist attack killing two TDP leaders in Araku
Author
Visakhapatnam, First Published Sep 25, 2018, 11:15 AM IST

ವಿಶಾಖಪಟ್ಟಣಂ[ಸೆ.25]: ನಕ್ಸಲರಿಂದ ಟಿಡಿಪಿಯ ಹಾಲಿ ಹಾಗೂ ಮಾಜಿ ಶಾಸಕರ ಹತ್ಯೆ ಪ್ರಕರಣ ಸಂಬಂಧ ಪೊಲೀಸರಿಗೆ ಸೋಮವಾರ ಮಹತ್ವದ ಸುಳಿವು ಲಭ್ಯವಾಗಿದ್ದು, ಆಂಧ್ರ- ಒಡಿಶಾ ಗಡಿ ಸಮಿತಿಯ ಮಹಿಳಾ ಸದಸ್ಯೆಯೊಬ್ಬಳು ದಾಳಿಯ ನೇತೃತ್ವ ವಹಿಸಿದ್ದಳು ಎಂಬ ಸಂಗತಿ ಬಹಿರಂಗಗೊಂಡಿದೆ.

ಮಾವೋವಾದಿ ಕಮ್ಯುನಿಸ್ಟ್ ಪಕ್ಷದ ಸದಸ್ಯೆ ಅರುಣಾ ಎಂಬಾಕೆ 20ರಿಂದ 50 ಸದಸ್ಯರ ತಂಡವನ್ನು ರಚಿಸಿಕೊಂಡಿದ್ದಳು. ಈ ತಂಡದಲ್ಲಿದ್ದವರು ಬಹುತೇಕ 20-25 ವರ್ಷದ ಒಳಗಿನವರಾಗಿದ್ದಾರೆ.

ಆಂಧ್ರ-ಓಡಿಶಾ ಗಡಿ ನಕ್ಸಲ್ ಸಮಿತಿ ಕಾರ್ಯದರ್ಶಿ ರಾಧಾಕೃಷ್ಣಾ ಎಂಬಾತ ದಾಳಿ ಯೋಜನೆ ರೂಪಿಸಿದ್ದರು ಎಂದಿದ್ದಾರೆ ಹಿರಿಯ ಅಧಿಕಾರಿ.

Follow Us:
Download App:
  • android
  • ios