ಅತ್ಯಾಚಾರ ಪ್ರತಿಭಟಿಸಿ ಮಗಳ ಜತೆ ಸುದ್ದಿ ವಾಚಕಿ ಲೈವ್ ಶೋ!

First Published 12, Jan 2018, 8:51 AM IST
Anchor Reads News With Daughter to Protest Rape
Highlights
  • ಪೂರ್ವ ಪಾಕಿಸ್ತಾನದ ಕಸೂರ್ ಪಟ್ಟಣದಲ್ಲಿ 7 ವರ್ಷದ ಬಾಲಕಿಯ ಅಮಾನುಷ ಅತ್ಯಾಚಾರ ಹಾಗೂ ಕೊಲೆ
  • ಅತ್ಯಾಚಾರ ಹಾಗೂ ಕೊಲೆಯನ್ನು ಪ್ರತಿಭಟಿಸಿ ಪಾಕಿಸ್ತಾನದ ಜನಪ್ರಿಯ ಸುದ್ದಿವಾಚಕಿಯೊಬ್ಬರು ತಮ್ಮ ಮಗುವಿನ ಸಮೇತ ಟೀವಿ ಪರದೆ ಮೇಲೆ

ಇಸ್ಲಾಮಾಬಾದ್: ಏಳು ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆಯನ್ನು ಪ್ರತಿಭಟಿಸಿ ಪಾಕಿಸ್ತಾನದ ಜನಪ್ರಿಯ ಸುದ್ದಿವಾಚಕಿಯೊಬ್ಬರು ತಮ್ಮ ಮಗುವಿನ ಸಮೇತ ಟೀವಿ ಪರದೆ ಮೇಲೆ ಪ್ರತ್ಯಕ್ಷರಾದ ಘಟನೆ ನಡೆದಿದೆ.

ಪೂರ್ವ ಪಾಕಿಸ್ತಾನದ ಕಸೂರ್ ಪಟ್ಟಣದಲ್ಲಿ 7 ವರ್ಷದ ಬಾಲಕಿಯ ಅಮಾನುಷ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು.

ಈ ಘಟನೆ ಬಳಿಕ ಒಬ್ಬಳು ತಾಯಿಯಾಗಿ ತನಗೆ ಯಾವ ರೀತಿ ಅನ್ನಿಸುತ್ತಿದೆ ಎಂದು ಹೇಳಲು ಸಮಾ ಟೀವಿಯ ಸುದ್ದಿ ವಾಚಕಿ ಕಿರಣ್ ನಾಜ್ ಅವರು ತಮ್ಮ ಮಗುವನ್ನು ತೊಡೆ ಮೇಲೆ ಕೂರಿಸಿಕೊಂಡು, ಕಾರ್ಯಕ್ರಮ ನಡೆಸಿದರು.

‘ನಾನು ನಿಮ್ಮ ನಿರೂಪಕಿ ಕಿರಣ್ ನಾಜ್ ಅಲ್ಲ. ನಾನೊಬ್ಬಳು ತಾಯಿ. ನನ್ನ ಮಗಳ ಜತೆ ಕೂತಿದ್ದೇನೆ.

ಶವ ಸಣ್ಣದಿದ್ದರೂ, ತೂಕ ಹೆಚ್ಚಿರುತ್ತದೆ. ಕಸೂರ್ ಪಟ್ಟಣದಲ್ಲಿ ಸಣ್ಣ ಶವವೊಂದು ಬಿದ್ದಿದೆ. ಆಕೆಯ ಭಾರ ಪಾಕಿಸ್ತಾನದ ಮೇಲೆ ಬಿದ್ದಿದೆ. ಈ ದಿನ ಮಾನವೀಯತೆಯ ಅಂತ್ಯ ಕ್ರಿಯೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದರು.

ಪೊಲೀಸ್ ತನಿಖೆ ಹಾಗೂ ಪ್ರಕರಣವನ್ನು ಮುಂದಿಟ್ಟು ಕೊಂಡು ರಾಜಕೀಯ ನಡೆಯುತ್ತಿರುವುದನ್ನು ತರಾಟೆಗೆ ತೆಗೆದುಕೊಂಡರು.

ಕಸೂರ್ ಪಟ್ಟಣದಲ್ಲಿ ಬಾಲಕಿಯ ಅತ್ಯಾಚಾರ, ಕೊಲೆಯ ಬಳಿಕ ಭಾರಿ ಪ್ರತಿಭಟನೆ ನಡೆದಿತ್ತು. ಜನರನ್ನು ನಿಯಂತ್ರಿಸಲು ಆಗದೇ ಪೊಲೀಸರು ಗೋಲಿಬಾರ್ ಮಾಡಿದ್ದರಿಂದ ಇಬ್ಬರು ಮೃತಪಟ್ಟಿದ್ದರು.

 

loader