ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆ ಉರುಳಿಸಿ ಶಿವಾಜಿ ಪ್ರತಿಮೆ? ವೈರಲ್ ಆದ ಸಚಿವರ ಹೇಳಿಕೆಯ FB ಸ್ಟೇಟಸ್

Ananthkumar Hegde Fake FB States
Highlights

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆ ಉರುಳಿಸಿ ಶಿವಾಜಿ ಪ್ರತಿಮೆ ಸ್ಥಾಪಿಸುವುದಾಗಿ ಸ್ಟೇಟಸ್ ಹಾಕಲಾಗಿತ್ತು

ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರ ಹೆಸರನ್ನು ದುಬರ್ಳಕೆ ಮಾಡಿಕೊಂಡು ವ್ಯಕ್ತಿಯೋರ್ವ ಪೇಸ್ ಬುಕ್'ನಲ್ಲಿ ಮುಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆ ಉರುಳಿಸಿ ಶಿವಾಜಿ ಪ್ರತಿಮೆ ಸ್ಥಾಪಿಸುವುದಾಗಿ ಸ್ಟೇಟಸ್ ಹಾಕಲಾಗಿತ್ತು. ಇದನ್ನು  ಪ್ರಜಾಕೀಯ ಎಂಬ ಹೆಸರಿನಲ್ಲಿ ಅಕೌಂಟ್ ಸೃಷ್ಟಿಸಿ ಈ ಹೇಳಿಕೆ ಹಾಕಲಾಗಿದೆ.

ಅಲ್ಲದೇ  ಮಂಜು ಪವರ್ ಸ್ಟಾರ್ ಎಂಬುವವರು ಬೆಂಗಳೂರಿಗೆ ಬರ ಕೂಡದು ಎಂದು ಹೇಳಿಕೆ ಹರಿ ಬಿಟ್ಟಿದ್ದಾನೆ. ಇನ್ನೋರ್ವ ನರೇಂದ್ರ ಯಾದವ್ ತಿಮ್ಮಣ್ಣನ ಹಳ್ಳಿ ಎಂಬಾತ ನಿನಗೆ ತಾಕತ್ತು ಇದ್ದರೆ ಕೆಂಪೇಗೌಡರ ಪ್ರತಿಮೆ ಟಚ್ ಮಾಡಿ ನೋಡೋಣ ಎಂಬ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಇನ್ನು ಸುಳ್ಳು ಹೇಳಿಕೆಯನ್ನು ಬಿತ್ತರಿಸಿದ್ದ ಬಗ್ಗೆ ಸಚಿವ ಅನಂತಕುಮಾರ ಹೆಗಡೆ ಅವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿರಸಿ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

loader