ಸೋನಿಯಾ ಸಭೆ ದಿನವೇ ಕಾಂಗ್ರೆಸ್‌ಗೆ ಶಾಕ್; ಪಕ್ಷದ ಪ್ರಮುಖ ನಾಯಕಿ ರಾಜೀನಾಮೆ!...

ಕಾಂಗ್ರೆಸ್‌ ಒಡಕು ಶಮನಗೊಳಿಸಿ, ಬಂಡಾಯ ನಾಯಕರನ್ನು ಮತ್ತೆ ಪಕ್ಷದಲ್ಲಿ ಮುಂದುವರಿಸಲು ಖುದ್ದು ಸೋನಿಯಾ ಗಾಂಧಿ ಅಖಾಡಕ್ಕೆ ಇಳಿದಿದ್ದಾರೆ. ಇಂದು ಸಭೆ ಆಯೋಜಿಸಿದ್ದಾರೆ. ಆದರೆ ಇದೇ ದಿನ ಕಾಂಗ್ರೆಸ್‌ಗೆ ಮತ್ತೊಂದು ಕಡೆಯಿಂದ ಆಘಾತವಾಗಿದೆ. ಪಕ್ಷದ ನಾಯಕಿ, ರಾಹುಲ್ ಗಾಂಧಿ ಆಪ್ತೆ, NSUI ಕಾರ್ಯದರ್ಶಿ ರಾಜೀನಾಮೆ ನೀಡಿದ್ದಾರೆ

ಶಾ ಸಮ್ಮುಖದಲ್ಲಿ TMC ನಾಯಕ ಸುವೆಂದು ಅಧಿಕಾರಿ ಸೇರಿದಂತೆ 13 ನಾಯಕರು ಬಿಜೆಪಿ ಸೇರ್ಪಡೆ!...

ಪಶ್ಚಿಮ ಬಂಗಾಳ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿರುವ ಬಿಜೆಪಿ, ಆಡಳಿತಾರೂಢ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ತೃಣಮೂಲಕ ಕಾಂಗ್ರೆಸ್ ನಾಯಕರಲ್ಲಿ ಒಡಕು ಮೂಡಿದ್ದು, ಇದೀಗ ಬಿಜೆಪಿಯತ್ತ ಮುಖಮಾಡಿದ್ದಾರೆ. ಅಮಿತ್ ಶಾ ರ್ಯಾಲಿಯಲ್ಲಿ ಟಿಎಂಸಿ ನಾಯಕ ಸುವೆಂದು ಅದಿಕಾರಿ ಬಿಜೆಪಿ ಸೇರಿಕೊಂಡಿದ್ದಾರೆ. ಇದರ ಜೊತೆ ಪ್ರಮುಖ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ.

ನೋ ಗೂಗಲ್ ಪೇ, ನೋ ಫೋನ್ ಪೇ ಡೈರೆಕ್ಟ್ ಪಾಕೆಟ್‌ಗೆ: ಲಂಚ ಪಡೆದ ಪೊಲೀಸ್ ಫುಲ್ 'ಫೇಮಸ್'!...

ಮಹಿಳಾ ಟ್ರಾಫಿಕ್ ಪೊಲೀಸೊಬ್ಬರು, ಮತ್ತೊಬ್ಬ ಮಹಿಳೆಯಿಂದ ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಈ ಡೈರೆಕ್ಟ್ ಪಾಕೆಟ್‌ಗೆ ವಿಡಿಯೋ ಭಾರೀ ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸರ ಲಂಚಾವತಾರ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗಡಿಯಲ್ಲಿ ಮತ್ತೆ ಚೀನಾ ಕುತಂತ್ರ: ಕಾರಕೋರಂ, ಅಕ್ಸಾಯ್‌ ಚಿನ್‌ನಲ್ಲಿ ಬೃಹತ್‌ ರಸ್ತೆ!...

ಪೂರ್ವ ಲಡಾಖ್‌ನಲ್ಲಿ ಸೃಷ್ಟಿಯಾಗಿರುವ ಸಂಘರ್ಷವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಾಗಿ ಹೇಳುತ್ತಲೇ ಬಂದಿರುವ ಚೀನಾ, ಇದೀಗ ಗಡಿಯಲ್ಲಿ ಸದ್ದಿಲ್ಲದೆ ಬಲ ವೃದ್ಧಿಪಡಿಸಿಕೊಳ್ಳಲು ಯತ್ನಿಸುವ ಮೂಲಕ ಮತ್ತೊಮ್ಮೆ ತನ್ನ ಕುತಂತ್ರ ಬುದ್ಧಿಯನ್ನು ತೋರಿದೆ

ಪಿಂಕ್ ಬಾಲ್ ಟೆಸ್ಟ್: ಟೀಂ ಇಂಡಿಯಾಗೆ 8 ವಿಕೆಟ್‌ಗಳ ಹೀನಾಯ ಸೋಲು...

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರು ಆಸ್ಟ್ರೇಲಿಯಾ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಗ್ರಾಮಪಂಚಾಯಿತಿ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟ 'ಕನ್ನಡತಿ' ನಟಿ ರಂಜನಿ?...

ಮೂರು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಎಂಟ್ರಿ ಕೊಟ್ಟ ಕಿರುತೆರೆ ನಟಿ ರಂಜನಿ ರಾಘವನ್. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌...

ತಮ್ಮ ಫ್ಯಾನನ್ನೇ ಮದುವೆಯಾದ ಬಾಲಿವುಡ್ ತಾರೆಯರಿವರು!...

ಬಾಲಿವುಡ್‌ನ ಕೆಲವು ತಾರೆಯರು ತಮ್ಮ ಅಭಿಮಾನಿಗಳನ್ನೇ ಮದುವೆಯಾಗಿದ್ದಾರೆ. ಫ್ಯಾನ್‌ಗಳ ಜೊತೆ ಸುಖದಾಂಪತ್ಯ ನಡೆಸಿದವರೂ ಡೈವೋರ್ಸ್ ಮಾಡಿದವರೂ ಇದ್ದಾರೆ. ಯಾರವರು ?

ಕ್ರೋಮ್‌, ಎಡ್ಜ್‌ ಬಳಸುವ 30 ಲಕ್ಷ ಕಂಪ್ಯೂಟರ್‌ಗೆ ರಹಸ್ಯ ವೈರಸ್‌ ದಾಳಿ!...

ಜನಪ್ರಿಯ ಬ್ರೌಸರ್‌ಗಳಾದ ಗೂಗಲ್‌ ಕ್ರೋಮ್‌ ಹಾಗೂ ಮೈಕ್ರೋಸಾಫ್ಟ್‌ ಎಡ್ಜ್‌ಗಳನ್ನು ಬಳಸುವ ಕನಿಷ್ಠ 30 ಲಕ್ಷ ಮಂದಿ| ಕ್ರೋಮ್‌, ಎಡ್ಜ್‌ ಬಳಸುವ 30 ಲಕ್ಷ ಕಂಪ್ಯೂಟರ್‌ಗೆ ರಹಸ್ಯ ವೈರಸ್‌ ದಾಳಿ

8000 ಕೋಟಿ ರೂ. ಬೃಹತ್ ಬ್ಯಾಂಕ್‌ ಹಗರಣ ಪತ್ತೆ, ಸಿಬಿಐನಿಂದ ಪ್ರಕರಣ ದಾಖಲು!...

13 ಸಾವಿರ ಕೋಟಿ ರು. ಮೊತ್ತದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ ಹಚ್ಚ ಹಸಿರಾಗಿರುವಾಗಲೇ, ದೇಶದಲ್ಲಿ ಮತ್ತೊಂದು ಕಂಪನಿ ಬ್ಯಾಂಕುಗಳಿಗೆ ಮೆಗಾ ವಂಚನೆ ಮಾಡಿದೆ. ಹೈದರಾಬಾದ್‌ ಮೂಲದ ಟ್ರಾನ್ಸ್‌ಸ್ಟ್ರಾಯ್‌ ಕಂಪನಿಯು ಕೆನರಾ ಬ್ಯಾಂಕ್‌ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ 7926 ಕೋಟಿ ರು. ಮೋಸ ಮಾಡಿದೆ. ಇದನ್ನು ದೇಶ ಕಂಡ ಅತಿದೊಡ್ಡ ಬ್ಯಾಂಕಿಂಗ್‌ ಹಗರಣಗಳಲ್ಲಿ ಒಂದು ಎಂದು ಹೇಳಲಾಗಿದೆ.

ಹೆಚ್ಚಾಯ್ತು ನಿಸಾನ್ ಮ್ಯಾಗ್ನೈಟ್ ಬೇಡಿಕೆ; ನಿರ್ವಹಣೆ ವೆಚ್ಚ ಪ್ರತಿ ಕಿ.ಮೀಗೆ 29 ಪೈಸೆ ಮಾತ್ರ!...

ನಿಸಾನ್ ಮ್ಯಾಗ್ನೈಟ್ ಕಾರು ಡಿಸೆಂಬರ್ 2 ರಂದು ಬಿಡುಗಡೆಯಾಗಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಅತ್ಯಂತ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಮ್ಯಾಗ್ನೈಟ್ ಪಾತ್ರವಾಗಿದೆ. ದಾಖಲೆಯ ಪ್ರಮಾಣದ ಕಾರುಗಳು ಬುಕ್ ಆಗಿವೆ. ಕಾರಿನ ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣ ಇದರ ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆಯಾಗಿದೆ.