ರಾಜ್. ಬೇಂದ್ರೆ ಮೆಚ್ಚಿ ಕನ್ನಡದಲ್ಲಿಯೇ ಟ್ವೀಟ್ ಮಾಡಿದ ಅಮಿತ್ ಶಾ

Amit shah applauds Dr rajkumar and Da Ra Bendre
Highlights

ಪ್ರಧಾನಿ ನರೇಂದ್ರ ಮೋದಿ ಅವರಿಂದ ಕನ್ನಡದಲ್ಲಿ ಭಾಷಣವಾಯ್ತು. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕನ್ನಡದಲ್ಲಿ ವರಕವಿ ದ.ರಾ.ಬೇಂದ್ರೆ ಮತ್ತು ನಟ ಡಾ.ರಾಜ್‌ಕುಮಾರ್ ಅವರ ಬಗ್ಗೆ ಟ್ವೀಟ್ ಮಾಡಿ, ಕನ್ನಡಿಗರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಕನ್ನಡದಲ್ಲಿ ಭಾಷಣವಾಯ್ತು. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕನ್ನಡದಲ್ಲಿ ವರಕವಿ ದ.ರಾ.ಬೇಂದ್ರೆ ಮತ್ತು ನಟ ಡಾ.ರಾಜ್‌ಕುಮಾರ್ ಅವರ ಬಗ್ಗೆ ಟ್ವೀಟ್ ಮಾಡಿ, ಕನ್ನಡಿಗರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ.

ವಿಧಾನಸಭಾ ಚುನಾವಣಾ  ಹಿನ್ನೆಲೆಯಲ್ಲಿ ರಾಜ್ಯದ ಹುಬ್ಬಳ್ಳಿ-ಧಾರವಾಡ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಮಧ್ಯಾಹ್ನ ಧಾರವಾಡದಲ್ಲಿನ ದ.ರಾ.ಬೇಂದ್ರೆ ಭವನ ಮತ್ತು ಅವರ ನಿವಾಸಕ್ಕೆ ರಾಜ್ಯ ಬಿಜೆಪಿ ನಾಯಕರ ಜತೆ ಭೇಟಿ ನೀಡಿದ್ದರು.ಭೇಟಿ ಬಳಿಕ ಅಮಿತ್ ಶಾ ಟ್ವೀಟ್ ಮಾಡಿದ್ದು, ವರಕವಿ ದ.ರಾ.ಬೇಂದ್ರೆ ಭವನ ಹಾಗೂ ಕವಿ ಮನೆಗೆ ಭೇಟಿ ನೀಡಿದ್ದು ಸಕ್ಕರೆ ಸವಿದಷ್ಟು ಹಿತವಾಗಿತ್ತು. ನಾಕುತಂತಿಯ ಇಂಗ್ಲಿಷ್ ಭಾಷೆ ಅನುವಾದಿತ ಪುಸ್ತಕ ಉಡುಗೊರೆ ಪಡೆದ ನಾನೇ ಧನ್ಯ. ಸಾಧನಕೇರಿಗೆ ನನ್ನ ಭೇಟಿ ಅವಿಸ್ಮರಣೀಯ ಎಂದು ಭೇಟಿಯ ಫೋಟೋ ಹಾಕಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.

ಇನ್ನು ದ.ರಾ.ಬೇಂದ್ರೆ ಅವರ ‘ಕುರುಡ ಕಾಂಚಾಣ ಕುಣಿಯುತ್ತಲಿತ್ತು. ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು ಎಂಬ ಈ ಸಾಲುಗಳು ‘ಹಣವೇ ಪ್ರಮುಖವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟ ಆಡಳಿತದ ಬಗ್ಗೆ ಸೂಕ್ತವಾಗಿ ವರ್ಣಿಸುತ್ತವೆ. ಹಣಬಲದ ರಾಜಕಾರಣ ಮುಕ್ತಾಯ ಮಾಡಿ, ಕರ್ನಾಟಕವನ್ನು ಮತ್ತೆ ಮೌಲ್ಯಾಧಾರಿತ ರಾಜಕಾರಣದ ಆಧಾರದ ಮೇಲೆ ನಿರ್ಮಿಸಬೇಕಿದೆ’ ಎಂದು ಟ್ವೀಟರ್‌ನಲ್ಲಿ ಹೇಳಿದ್ದಾರೆ.


ವರನಟ ಡಾ.ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನೆಲೆ ಅವರ ಭಾವಚಿತ್ರ ಹಾಕಿ ಕನ್ನಡದಲ್ಲಿ ಮತ್ತೊಂದು ಟ್ವೀಟ್ ಮಾಡಿರುವ ಅಮಿತ್ ಶಾ, ‘ಅಭಿಮಾನಿ ದೇವರುಗಳ ದೈವ, ವರನಟ, ಡಾ.ರಾಜ್‌ಕುಮಾರ್ ಅವರಿಗೆ ಪುಣ್ಯತಿಥಿಯಂದು ನನ್ನ ಗೌರವ ನಮನ. ಅಣ್ಣ ಅವರ ನಾಡು, ನುಡಿ, ಕಲಾಪ್ರೇಮ ನಮಗೆ ಆದರ್ಶ’ ಎಂದು ಹೊಗಳಿದ್ದಾರೆ.

loader