Asianet Suvarna News Asianet Suvarna News

ಏನ್ರೀ ಅದು ಗಲಾಟೆ: ಶಾ ಕೈಯಲ್ಲಿರುವ ವರದಿಯಲ್ಲಿದೆ ಚಕ್ರವರ್ತಿ, ಗೌಡರ ಭರಾಟೆ!

ಬಿಜೆಪಿ ಹೈಕಮಾಂಡ್'ಗೆ ಸಂಕಷ್ಟ ತಂದಿಟ್ಟ ನೆರೆ ಪರಿಹಾರ ವಿವಾದ| ಚಕ್ರವರ್ತಿ ಸೂಲಿಬೆಲೆ, ಸದಾನಂದ ಗೌಡರ ನಡುವಿನ ಟ್ವಿಟ್ ವಾರ್| ನಾಯಕರ ನಡುವಿನ ಜಗಳದ ವರದಿ ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ| ಜನ ಮತ್ತು ಮಾಧ್ಯಮಗಳು ಕೇಳುವ ಪ್ರಶ್ನೆಗೆ ಸಂಯಮದಿಂದ ಉತ್ತರಿಸುವಂತೆ ಶಾ ಸೂಚನೆ| 'ಪಕ್ಷ ಮತ್ತು ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಅಸಮಾಧಾನ ಶಮನಕ್ಕೆ ಕ್ರಮ ಕೈಗೊಳ್ಳಿ'|  

Amit Sha Seeks Report On Chakravarthy Sulibele and DV Sadananda Gowda Twitter War
Author
Bengaluru, First Published Oct 4, 2019, 1:20 PM IST

ನವದೆಹಲಿ(ಅ.04): ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ಡಿವಿ ಸದಾನಂದಗೌಡ ನಡುವೆ ನಡೆದಿದ್ದ ಟ್ವೀಟ್ ಸಮರ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೆ ಬಂದಿದೆ.

ನೆರೆ ಪರಿಹಾರ ಒದಗಿಸುವಲ್ಲಿ ವಿಫಲವಾಗಿರುವ ಬಿಜೆಪಿ ಪ್ರಭಾವಿ ಸಂಸದರನ್ನು ಚಕ್ರವರ್ತಿ ಸೂಲಿಬೆಲೆ ತರಾಟೆಗೆ ತೆಗೆದುಕೊಂಡಿದ್ದರು. ಈ ಕುರಿತು ವರದಿ ಪ್ರಕಟಿಸಿದ್ದ ಸುವರ್ನನ್ಯೂಸ್ ಸೇರಿದಂತೆ ಚಕ್ರವರ್ತಿ ಸೂಲಿಬೆಲೆ ಅವರ ಟ್ವಿಟ್ಟರ್ ಅಕೌಂಟ್'ನ್ನು ಸದಾನಂದ ಗೌಡ ಬ್ಲಾಕ್ ಮಾಡಿದ್ದರು.

ಸದಾನಂದ ಗೌಡರ ಈ ನಡೆಗೆ ಮತ್ತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸೂಲಿಬೆಲೆ, ಜನ ಪ್ರತಿನಿಧಿಗಳಿಂದ ಇಮತಹ ನಡೆ ನಿರೀಕ್ಷಿಸಿರಲಿಲ್ಲ ಎಂದು ಹರಿಹಾಯ್ದಿದ್ದರು. ಅಲ್ಲದೇ ಗೌಡರ ನಡೆಗೆ ಸಾರ್ವಜನಿಕವಾಗಿಯೂ ತೀವ್ರ ಆಕ್ರೋಶ ವ್ತಕ್ತವಾಗಿತ್ತು.

ಈ ಎಲ್ಲ ಬೆಳವಣಿಗೆಗಳು ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತಲುಪಿದ್ದು, ಇಬ್ಬರ ಜಗಳದ ಕುರಿತು ಶಾ ವರದಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ. ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಮುಂದಿಡಿ ಇಟ್ಟಿದ್ದು, ಈ ಮಧ್ಯೆ ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರದ ವಿರುದ್ಧ ಸ್ಫೋಟವಾಗಿರುವ ಅಸಮಾಧಾನ ಶಮನಕ್ಕೆ ಮುಂದಾಗಲು ಶಾ ಸೂಚನೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ನೆರೆ ಪರಿಹಾರದ ಕುರಿತು ಜನ ಮತ್ತು ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸುವಂತೆಯೂ ಅಮಿತ್ ಶಾ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. 

Follow Us:
Download App:
  • android
  • ios