ಹೈದರಾಬಾದ್(ಫೆ.10): ದಕ್ಷಿಣ ಭಾರತದ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟರ್ ನಲ್ಲಿ  ಆರಂಭಿಸಲಾಗಿರುವ #gobackmodi ಅಭಿಯಾನ ವೈರಲ್ ಆಗಿದೆ.

ಮೋದಿ ಹಿಂದಕ್ಕೆ ಹೋಗಿ, ಮತ್ತೆಂದೂ ಮೋದಿ ಬೇಡ ಎಂಬರ್ಥದ ಪೋಸ್ಟರ್ ಗಳು ಟ್ವೀಟರ್ ನಲ್ಲಿ ಹರಿದಾಡುತ್ತಿವೆ. #TNWelcomesModi ಮತ್ತು #GoBackSadistModi ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ ಆಗಿವೆ.

ನರೇಂದ್ರ ಮೋದಿ ಇಂದು ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಸಾಮಾಜಿಕ ತಾಣದಲ್ಲಿ #NoMoreModi ಮತ್ತು #ModIsAMistake ಎಂಬ ಘೋಷಣೆಗಳಿರುವ ಫಲಗಳನ್ನು ಪ್ರದರ್ಶಿಸುತ್ತಿರುವ ಜನರ ಗುಂಪು ಮತ್ತು ಪ್ರಧಾನಿ ನರೇಂದ್ರ ಮೋದಿ ಓಡುತ್ತಿರುವ ಕಾರ್ಟೂನ್‌ಗಳನ್ನು ಬಳಕೆ ಮಾಡಿದ ಪೋಸ್ಟರ್‌ ವೈರಲ್‌ ಆಗಿದೆ.

ಇನ್ನು ಆಂಧ್ರದಲ್ಲಿ ಪ್ರಧಾನಿ ಮೋದಿ ಭೇಟಿ ಖಂಡಿಸಿ ಟಿಡಿಪಿ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದು, ರಸ್ತೆಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.