ಪೋರ್ಟ್ ಬ್ಲೇರ್ :  ಬಾಹ್ಯ ಜಗತ್ತಿನ ಸಂಪರ್ಕಕ್ಕೇ ಬಾರದೇ ಜೀವಿಸುತ್ತಿರುವ ದ್ವೀಪವೊಂದರ ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೋಗಿದ್ದ ಅಮೆರಿಕ ಪ್ರಜೆಗೆ ಬುಡಕಟ್ಟು ಜನರು ಬಿಲ್ಲು- ಬಾಣಗಳಿಂದ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಅಂಡಮಾನ್‌- ನಿಕೋಬಾರ್‌ನಲ್ಲಿ ಸಂಭವಿಸಿದೆ.

ಇನ್ನು ಈ ವ್ಯಕ್ತಿ ಇಲ್ಲಿಗೆ ಆಗಮಿಸುವ ಮೊದಲು ತಮ್ಮ ಪೋಷಕರಿಗೆ ಬರೆದಿರುವ ಪತ್ರವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. 

ಕಳೆದ ನವೆಂಬರ್  16ರಂದು ಈ ವ್ಯಕ್ತಿ ಬರೆದ ಪತ್ರದಲ್ಲಿ ತಾವು ಅಲ್ಲಿಗೆ ತೆರಳಲು ಹೆಚ್ಚಿನ ಪ್ರಮಾಣದಲ್ಲಿ ಉತ್ಸಾಹವನ್ನು ಹೊಂದಿದ್ದೇನೆ. ಆದರೆ ಅಲ್ಲಿಗೆ ತೆರಳಿದಾಗ ಅಲ್ಲಿನ ಆದಿವಾಸಿಗಳು ನನ್ನನ್ನು ಹತ್ಯೆ ಮಾಡಿದಲ್ಲಿ ಯಾವುದೇ ಕಾರಣಕ್ಕೂ ಕೂಡ ಸಿಟ್ಟಾಗದಿರಿ ಎಂದು ಬರೆದಿದ್ದರು. 

ಇನ್ನೊಂದು ಜನ್ಮ ತಾಳಿ ನಿಮ್ಮನ್ನು ಮತ್ತೆ ನೋಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ ನಾನು ನಿಮ್ಮೆಲ್ಲರನ್ನೂ ಕೂಡ ಪ್ರೀತಿ ಮಾಡುತ್ತೇನೆ. ಅಲ್ಲದೇ ಜೇಸುಗಿಂತ ನಿಮ್ಮನ್ನು ಹೆಚ್ಚು ಪ್ರೀತಿ ಮಾಡುವವರು ಯಾರೂ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಈ ವ್ಯಕ್ತಿ ಅಂಡಮಾನ್ ಗೆ ತೆರಳುವ ಮೊದಲು ಬರೆದ ಈ ಪತ್ರವನ್ನು ಕುಟುಂಬಸ್ಥರು ಆತನ ಇನ್ ಸ್ಟಾಗ್ರಾಮ್ ಖಾತೆಯಲ್ಲಿಯೇ ಪ್ರಕಟ ಮಾಡಿದ್ದಾರೆ.