Asianet Suvarna News Asianet Suvarna News

ಕಾಪಾಡಲು ಭಾರತಕ್ಕೆ ಅಮೆರಿಕದ ದುಂಬಾಲು, ಟ್ರೆಂಡ್ ಆಯ್ತು ಟಿಕ್‌ಟಾಕ್ ಸವಾಲು; ಏ.8ರ ಟಾಪ್ 10 ಸುದ್ದಿ!

ಕರ್ನಾಟಕಕ್ಕೆ ಬರಬೇಕಿದ್ದ GST ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡೋ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಇದೀಗ ಭಾರತದ ಹಿಂದೆ ಬಿದ್ದಿದೆ. ಮೋದಿ ಒಲಿಲಸಿಕೊಳ್ಳಲು ಹಲವು ತಂತ್ರಗಳನ್ನು ಮಾಡುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಅಮಿತಾಬ್ ಬಚ್ಚನ್, ಶಿವರಾಜ್ ಕುಮಾರ್ ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜರು ಸೇರಿ ಕಿರು ಚಿತ್ರದಲ್ಲಿ ನಟಿಸಿದ್ದಾರೆ. ಗೆಳತಿಯರ ಟಿಕ್‌ಟಾಕ್ ಚಾಲೆಂಜ್, ಕೊರೋನಾ ಸೇವೆಯಲ್ಲಿರುವ ತಾಯಿಗೆ ಸಿಎಂ ಸಾಂತ್ವನ ಸೇರಿದಂತೆ ಏಪ್ರಿಲ್ 8ರ ಟಾಪ್  10 ಸುದ್ದಿ ಇಲ್ಲಿವೆ.

America request pm Modi to Tiktok challenge top 10 news of april 8
Author
Bengaluru, First Published Apr 8, 2020, 5:18 PM IST

ಕೊನೆಗೂ ಕರುನಾಡ ಪಾಲಿನ GST ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

America request pm Modi to Tiktok challenge top 10 news of april 8
ದೇಶದಲ್ಲಿ ಕೊರೋನಾ ಹರಡುವಿಕೆ ನಿಲ್ಲದಿದ್ದರೆ, ಲಾಕ್‌ಡೌನ್ ಮುಂದುವರೆದರೆ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಬಿಗುಡಾಯಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದ್ದ ಕರ್ನಾಟಕ ಪಾಲಿನ ಜಿಎಸ್‌ಟಿ ಹಣವನ್ನು ರಿಲೀಸ್ ಮಾಡಿದೆ. 

ಲಾಕ್‌ಡೌನ್ ವೇಳೆ ಇಸ್ಪೀಟ್ ಆಟ: ಮೇಲಿಂದ ಬಂತು ಪೊಲೀಸರ ಡ್ರೋನ್!

America request pm Modi to Tiktok challenge top 10 news of april 8

 ಕೊರೋನಾ ವೈರಸ್ ನಿಯಂತ್ರಿಸುವ ಸಲುವಾಗಿ ದೇಶದಾದ್ಯಂತ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ಜನರನ್ನು ಮನೆಯಲ್ಲೇ ಇರುವಂತೆ ಪಿಎಂ ಮೋದಿ ಮನವಿ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಅನೇಕ ಮಂದಿ ಲಾಕ್‌ಡೌನ್ ಉಲ್ಲಂಘಿಸುತ್ತಿದ್ದಾರೆ. ಇಂತವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಾರಂಭಿಸಿದೆ.

ಭಾರತದ ಎದುರು ಮಂಡಿಯೂರಿದ ಅಮೆರಿಕಾ; ಯಾಕಿಷ್ಟು ದುಂಬಾಲು ಬೀಳುತ್ತಿದೆ?...

America request pm Modi to Tiktok challenge top 10 news of april 8

ಭಾರತದ ತಾಕತ್ತು ಏನು ಎಂಬುದು ವಿಶ್ವದ ಮುಂದೆ ಮತ್ತೊಮ್ಮೆ ಜಗಜ್ಜಾಹಿರಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕಾದ ಕಣ್ಣು ಭಾರತದ ಮೇಲೆ ನೆಟ್ಟಿದೆ. ಭಾರತದ ಮುಂದೆ ಅಮೆರಿಕಾ ಮಂಡಿಯೂರಿದೆ. ಅಷ್ಟಕ್ಕೂ ಅಮೆರಿಕಾ ಯಾಕೆ ಭಾರತದ ದುಂಬಾಲು ಬಿದ್ದಿದೆ? ಏನಿದು ವಿಚಾರ? ಈ ವಿಡಿಯೋ ನೋಡಿ! 

ಈ ವರ್ಷ IPL ಖಚಿತ; ಟೂರ್ನಿ ಆಯೋಜನೆ ಸೀಕ್ರೆಟ್ ಬಿಚ್ಚಿಟ್ಟ RCB ಮಾಜಿ ಕೋಚ್!

America request pm Modi to Tiktok challenge top 10 news of april 8

ಕೊರೋನಾ ವೈರಸ್ ಕಾರಣದಿಂದ ಈ ವರ್ಷ ಐಪಿಎಲ್ ಆಯೋಜನೆ ಕಷ್ಟ. ಕೊರೋನಾ ಹತೋಟಿಗೆ ಬಂದ ಬಳಿಕವೇ ಐಪಿಎಲ್ ಆಯೋಜನೆಗೆ ಚಿಂತನೆ ನಡೆಸುವುದಾಗಿ ಬಿಸಿಸಿಐ ಹೇಳಿತ್ತು. ಇದೀಗ 2020ರ ಐಪಿಎಲ್ ಟೂರ್ನಿ ಆಯೋಜನೆ ಶೇಕಡಾ 100ರಷ್ಟು ಖಚಿತ, ಆದರೆ ಕಲ ಕಂಡೀಷನ್ ಪ್ರಕಾರ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬೌಲಿಂಗ್ ಕೋಚ್ ಹೇಳಿದ್ದಾರೆ. 

ಲಾಕ್‌ಡೌನ್‌ ಟೈಮ್‌ನಲ್ಲೇ ಬಂತು ದೊಡ್ಡ ಸ್ಟಾರ್‌ಗಳ ಕಿರುಚಿತ್ರ 'ಫ್ಯಾಮಿಲಿ'

America request pm Modi to Tiktok challenge top 10 news of april 8

ಲಾಕ್‌ಡೌನ್‌ ಪರಿಣಾಮ ಈಗ ಇಡೀ ಚಿತ್ರರಂಗವೇ ಸ್ತಬ್ದವಾಗಿದೆ. ಈ ಹಂತದಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ಬಿಗ್‌ ಬಿ ಅಮಿತಾಬ್‌, ರಜನಿಕಾಂತ್‌, ಶಿವರಾಜ್‌ ಕುಮಾರ್‌ರಂಥವರಿಂದ ಹಿಡಿದು ಅಲಿಯಾ ಭಟ್‌ವರೆಗೆ ಪ್ರಸಿದ್ಧ ನಟ ನಟಿಯರು ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.

ಕೊರೋನಾ ಸೇವೆಯಲ್ಲಿರುವ ತಾಯಿಗೆ ಸಿಎಂ ಕರೆ; ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಂತ್ವನ

America request pm Modi to Tiktok challenge top 10 news of april 8

ಕೊರೋನಾ ನಿಯಂತ್ರಣಕ್ಕಾಗಿ ತಾಯಿಯೊಬ್ಬರು  ಮಗುವನ್ನು ಬಿಟ್ಟು ಬಂದಿದ್ದು ದೂರದಿಂದಲೇ ತಾಯಿಯನ್ನು ನೋಡಿ ಮಗು ಕಣ್ಣೀರು ಹಾಕುವ ದೃಶ್ಯ ಮನಕಲಕುವಂತಿದೆ. ಬೆಳಗಾವಿ ನರ್ಸ್ ಸುಗಂಧಾಗೆ ಸಿಎಂ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. 

ಒಂದು ರಿಕ್ವೆಸ್ಟ್, ಡಬಲ್ ಆಗುತ್ತೆ ನಿಮ್ಮ PF ಹಣ: ಇಲ್ಲಿದೆ ವಿಧಾನ!

America request pm Modi to Tiktok challenge top 10 news of april 8

ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಕೆಲಸ ಮಾಡುವ ಉದ್ಯೋಗಿಗಳಿಗೆ ತಮ್ಮ PF ಹಣ ದ್ವಿಗುಣಗೊಳಿಸಲು ಏಪ್ರಿಲ್‌ನಲ್ಲಿ ಸುವರ್ಣಾವಕಾಶವಿದೆ. ಖಾಸಗಿ ಕಂಪನಿಗಳು ಏಪ್ರಿಲ್‌ನಲ್ಲಿ ತಮ್ಮ ಉದ್ಯೋಗಿಗಳ ಅಪ್ರೈಸಲ್ ಮಾಡುತ್ತವೆ. ಹೀಗಿರುವಾಗ ಸ್ಯಾಲರಿ ಸ್ಟ್ರಕ್ಚರ್ ಕೂಡಾ ಬದಲಾಗುತ್ತದೆ. ಹೀಗಿರುವಾಗ ನೀವು ನಿಮ್ಮ ಕಂಪನಿ ಬಳಿ ನಿಮ್ಮ PF ಹೆಚ್ಚು ಮಾಡಲು ಮನವಿ ಮಾಡಿಕೊಳ್ಳಬಹುದು. ಇದರಿಂದ ಭವಿಷ್ಯಕ್ಕಾಗಿ ನಿಮ್ಮ ಉಳಿತಾಯದಲ್ಲಿ ಬಹುದೊಡ್ಡ ಬದಲಾವಣೆಯಾಗಬಹುದು.

ಟಫ್ ಅಂತ 'ಅಲ್ಲಿಗೆ' ಟಚ್ ಮಾಡಿ ಓಡಿಹೋಗ್ತಾರೆ; ಟಿಕ್‌ಟಾಕ್‌ನಲ್ಲಿ ಹೊಸ ಚಾಲೆಂಜ್!.

America request pm Modi to Tiktok challenge top 10 news of april 8

ಟಿಕ್‌ಟಾಕ್‌ ಲೋಕದಲ್ಲಿ ಏನೇ ಮಾಡಿದರು ಬಹುಬೇಗನೆ ವೈರಲ್‌ ಆಗುತ್ತದೆ. ಈಗ ನೋಡಿ ಇದ್ಯಾವುದೋ ಚಾಲೆಂಜ್ ಬಂದಿದೆ. ಗೆಳತಿಯರ ನಡುವಿನ ಈ ಚಾಲೆಂಜ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ಲಾಕ್‌ಡೌನ್ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣು, 40 ಬೈಕ್‌ನಲ್ಲಿ ಪೊಲೀಸರ ಗಸ್ತು!.

America request pm Modi to Tiktok challenge top 10 news of april 8

 ಕೊರೋನಾ ವೈರಸ್ ತಡೆಯಲು ಕೇಂದ್ರ ಸರ್ಕಾರ ಭಾರತವನ್ನು 21 ದಿನಗಳ ವರೆಗೆ ಲಾಕ್‌ಡೌನ್ ಮಾಡಿದೆ. ಆದರೆ ಹಲವರು ಅನವಶ್ಯಕವಾಗಿ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದಾರೆ. ಇದೀಗ ಇಂತವರ ವಿರುದ್ಧ ಕಾರ್ಯಚರಣೆಗೆ ಕೋವಿಡ್--19 ವಿಶೇಷ ಪೊಲೀಸ್ ತಂಡವೊಂದು ದೆಹಲಿಯಲ್ಲಿ ಸಕ್ರೀಯವಾಗಿದೆ. 40 ಬೈಕ್ ನೀಡಲಾಗಿತ್ತು. ಎಲ್ಲಾ ಬೈಕ್‌ಗಳಿಗೆ ಕೋವಿಡ್-19 ಪೈಂಟಿಂಗ್ ಮಾಡಲಾಗಿದೆ. ವಿಶೇಷ ತಂಡದ ರಹಸ್ಯ ಕಾರ್ಯಾಚರಣೆ ಕುರಿತ ವಿವರ ಇಲ್ಲಿದೆ.

ಮೊಂಬತ್ತಿ ಬೆಳಗಿಸಿ ಅಂದ್ರೆ ಸ್ಟಂಟ್ ಮಾಡಿದ, ನೋಡ ನೋಡ್ತಿದಂತೆ ಮೈಗೆಲ್ಲಾ ಬೆಂಕಿ!

America request pm Modi to Tiktok challenge top 10 news of april 8

 ಕೊರೋನಾ ವೈರಸ್ ಅಟ್ಟಹಾಸ ಎಲ್ಲೆಡೆ ಕಂಡು ಬರುತ್ತಿದೆ. ಹೀಗಿರುವಾಗ ಪ್ರಧಾನಿ ನರೇದ್ರ ಮೋದಿ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ದೀಪ ಬೆಳಗಿಸುವಂತೆ ಕರೆ ನೀಡಿದ್ದರು. ಹಹೀಗಿರುವಾಗ ದೇಶದ ಮೂಲೆ ಮೂಲೆಗಳಲ್ಲೂ ಜನರು ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು.  ಆದರೆ ಈ ನಡುವೆ ಹಲವಾರು ಕಡೆ ಪಟಾಕಿಯನ್ನೂ ಜನರು ಸಿಡಿಸಿದ್ದರು. ಆದರೆ ಇವೆಲ್ಲದರ ನಡುವೆ ವ್ಯಕ್ತಿಯೊಬ್ಬ ಪಟಾಕಿ, ದೀಪ ಬಿಟ್ಟು ಸ್ಟಂಟ್ ಮಾಡಲು ಹೋಗಿ ಕೂದಲೆಳೆ ಅಂತರದ್ಲಿ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 

Follow Us:
Download App:
  • android
  • ios