Asianet Suvarna News Asianet Suvarna News

ರಾಜೀವ್ ಗಾಂಧಿ ಭಾರತ ರತ್ನ ವಿವಾದ: ಪಕ್ಷ ಬಿಡ್ತಿನಿ ಎಂದ ಶಾಸಕಿ!

ರಾಜೀವ್ ಗಾಂಧಿಗೆ ನೀಡಿದ್ದ ಭಾರತ ರತ್ನ ವಾಪಸ್?| ದೆಹಲಿ ವಿಧಾನಸಭೆಯಲ್ಲಿ ಒಕ್ಕೊರಲಿನ ನಿರ್ಣಯ| ಆಪ್ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದ ದೆಹಲಿ ವಿಧಾನಸಭೆ ನಿರ್ಣಯ| ನಿರ್ಣಯ ಪರ, ವಿರೋಧಿಗಳ ನಡುವೆ ತೀವ್ರ ತಿಕ್ಕಾಟ| ನಿರ್ಣಯ ವಿರೋಧಿಸಿದ ಆಪ್ ಶಾಸಕಿ ಅಲ್ಕಾ ಲಾಂಬಾ| ಆಪ್ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾದ ಶಾಸಕಿ

Alka Lamba Says She Will Quit AAP Over Rajiv Gandhi Resolution
Author
Bengaluru, First Published Dec 22, 2018, 3:37 PM IST

ನವದೆಹಲಿ(ಡಿ.22): 1984ರ ಸಿಖ್‌ ವಿರೋಧಿ ದಂಗೆ ಹಿನ್ನೆಲೆಯಲ್ಲಿ ಮಾಜಿ ಪ್ರದಾನಿ ರಾಜೀವ್‌ ಗಾಂಧಿ ಅವರಿಗೆ ಪ್ರದಾನ ಮಾಡಲಾಗಿರುವ ಭಾರತ ರತ್ನ ಗೌರವವನ್ನು ವಾಪಸ್‌ ಪಡೆಯಬೇಕೆಂಬ ನಿರ್ಣಯವನ್ನು ದೆಹಲಿ ವಿಧಾನಸಭೆ ಅಂಗೀಕರಿಸಿದೆ. ಇದರಿಂದಾಗಿ ಆಮ್ ಆದ್ಮಿ ಪಕ್ಷದಲ್ಲಿ ತೀವ್ರ ಗೊಂದಲ ಉಂಟಾಗಿದೆ.

ದೆಹಲಿ ವಿಧಾನಸಭೆಯ ಈ ನಿರ್ಣಯ ವಿರೋಧಿಸಿ ಆಪ್ ಶಾಸಕಿ ಅಲ್ಕಾ ಲಾಂಬಾ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ರಾಜೀವ್ ಗಾಂಧಿ ಅವರಿಗೆ ಭಾರತ ರತ್ನ ನೀಡಿರುವುದು ಸರಿಯಾದ ನಿರ್ಣಯ ಎಂದು ಅಲ್ಕಾ ಲಾಂಬಾ ವಾದಿಸಿದ್ದಾರೆ.

ಈ ಮಧ್ಯೆ ತಮ್ಮ ಸರ್ಕಾರದ ನಿರ್ಣಯ ವಿರೋಧಿಸಿದ ಕಾರಣಕ್ಕೆ ಅಲ್ಕಾ ಲಾಂಬಾ ಅವರಿಗೆ ಶಾಸಕ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಆಪ್ ಒತ್ತಾಯಿಸಿದೆ. ಸರ್ಕಾರದ ನಿರ್ಣಯ ವಿರೋಧಿಸುವ ಮೂಲಕ ಅಲ್ಕಾ ಲಾಂಬಾ ಅಗೌರವ ತೋರಿದ್ದಾರೆ ಎಂಬುದು ಆಪ್ ವಾದವಾಗಿದೆ.

ಈ ಮಧ್ಯೆ ಆಪ್ ಶಾಸಕಿ ಅಲ್ಕಾ ಲಾಂಬಾ ರಾಜೀನಾಮೆಯನ್ನು ಕೇವಲ ವದಂತಿ ಎಂದು ಸ್ಪಷ್ಟಪಡಿಸಿರುವ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ, ಆಪ್ ಯಾರಿಂದಲೂ ರಾಜೀನಾಮೆ ಕೇಳಿಲ್ಲ ಎಂದು ಹೇಳಿದ್ದಾರೆ.

 

ರಾಜೀವ್‌ ಗಾಂಧಿಗೆ ನೀಡಿದ ಭಾರತ ರತ್ನ ವಾಪಸ್‌ ಪಡೆಯಲು ನಿರ್ಣಯ

Follow Us:
Download App:
  • android
  • ios