35 ನಿರಾಶ್ರಿತರ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಿದ ಅಲಿಯಾ ಭಟ್

First Published 15, Jul 2018, 10:05 AM IST
Alia Bhat lights up huts in Kikkeri town
Highlights

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಕಿಕ್ಕೆರಿ ಗ್ರಾಮದ ಗುಂಡುತೋಪಿನಲ್ಲಿ ವಾಸಿಸುತ್ತಿರೋ ನಿರಾಶ್ರಿತರು ವಿದ್ಯುತ್ ಸೌಲಭ್ಯ ಪಡೆದಿದ್ದಾರೆ.  ಬೆಂಗಳೂರು ಮೂಲದ "ಎಆರ್ ಓಎಚ್‍ಎ" ಸಂಸ್ಥೆ ನಡೆಸಿದ "ಲಿಟರ್ ದ ಲೈಟರ್" ಕಾರ್ಯಕ್ರಮಕ್ಕೆ ಅಲಿಯಾ ಭಟ್ ಹಣ ನೀಡಿದ್ದಾರೆ. 

ಮಂಡ್ಯ (ಜು. 15): ಬಾಲಿವುಡ್ ನಟಿ ಅಲಿಯಾ ಭಟ್  35 ನಿರಾಶ್ರಿತರ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ನೀಡಿದ್ದಾರೆ. 

ಕೆ ಆರ್ ಪೇಟೆ ತಾಲೂಕಿನ ಕಿಕ್ಕೆರಿ ಗ್ರಾಮದ ಗುಂಡುತೋಪಿನಲ್ಲಿ ವಾಸಿಸುತ್ತಿರೋ ನಿರಾಶ್ರಿತರು ವಿದ್ಯುತ್ ಸೌಲಭ್ಯ ಪಡೆದಿದ್ದಾರೆ.  ಬೆಂಗಳೂರು ಮೂಲದ "ಎಆರ್ ಓಎಚ್‍ಎ" ಸಂಸ್ಥೆ ನಡೆಸಿದ "ಲಿಟರ್ ದ ಲೈಟರ್" ಕಾರ್ಯಕ್ರಮಕ್ಕೆ ಅಲಿಯಾ ಭಟ್ ಹಣ ನೀಡಿದ್ದಾರೆ. 

ಪ್ಲಾಸ್ಟಿಕ್ ಮರುಬಳಕೆಯಿಂದ‌ ವಿದ್ಯುತ್ ಇಲ್ಲದ ಸಮುದಾಯಗಳಿಗೆ ಸೋಲಾರ್ ಒದಗಿಸುವ ಕಾರ್ಯಕ್ರಮವನ್ನು  ಎಆರ್ ಓಎಚ್‍ಎ ಸಂಸ್ಥೆ  "ಲಿಟರ್ ದ ಲೈಟರ್" ಅಭಿಯಾನದ ಮೂಲಕ  ಹಮ್ಮಿಕೊಂಡಿದೆ.  ಈ ಅಭಿಯಾನಕ್ಕೆ ತನ್ನ ವಿಶೇಷ ಬಟ್ಟೆ ಮಾರಾಟದಿಂದ ಬಂದ ಹಣವನ್ನು  ಅಲಿಯಾ ಭಟ್ ನೀಡಿದ್ದಾರೆ.  ಅಲಿಯಾ ನೀಡಿದ ಹಣದಿಂದ ಎಆರ್ ಓಎಚ್‍ಎ ಸಂಸ್ಥೆ ನಿರಾಶ್ರಿತ ಕುಟುಂಬಗಳಿಗೆ ವಿದ್ಯುತ್ ಒದಗಿಸಿದೆ.  

ಮುಂಬೈ ತೆರಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಿಕ್ಕೆರಿ ಗ್ರಾಮಕ್ಕೆ  ’ಎಆರ್ ಓಎಚ್ಎ’  ಸಂಸ್ಥೆ ಭೇಟಿ ನೀಡಿದಾಗ ಅಲ್ಲಿ ವಿದ್ಯುತ್ ಇಲ್ಲದಿರುವುದು ಗಮನಿಸಿ  ವಿದ್ಯುತ್ ಸೌಲಭ್ಯ ಒದಗಿಸಿದೆ. 
 

loader