ನವದೆಹಲಿ (ಜ. 29):  ಏರ್‌ಸೆಲ್ ಮ್ಯಾಕ್ಸಿಸ್ ಹಗರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ಕೋರ್ಟ್ ಫೆ.18  ರವರೆಗೂ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. 

ಹೀಗಾಗಿ ಇಬ್ಬರು ಬಂಧನ ಭೀತಿಯಿಂದ ಪಾರಾಗಿದ್ದಾರೆ. ವಿದೇಶ ಹೂಡಿಕೆಗಳಿಗೆ ಅನುಮತಿ ನೀಡುವ ಅಧಿಕಾರ ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿಗೆ ಮಾತ್ರ ಇದೆ. ಆದರೆ ಚಿದು ಹಣಕಾಸು ಸಚಿವ ರಾಗಿದ್ದ ವೇಳೆ ಸ್ವತಃ ತಾವೇ ಇದಕ್ಕೆ ಅನುಮತಿ ನೀಡಿದ್ದರು. ಈ ಅಕ್ರಮ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಇದಕ್ಕೂ ಮುನ್ನ ಫೆ.1 ರವರೆಗೂ ಈ ಇಬ್ಬರನ್ನು ಬಂಧಿಸದಂತೆ ಸೂಚಿಸಲಾಗಿತ್ತು.