Asianet Suvarna News Asianet Suvarna News

250 ಕಿ.ಮೀ. ವೇಗದಲ್ಲಿ ಗೋಡೆಗೆ ಗುದ್ದಿದ ಏರ್ ಇಂಡಿಯಾ ವಿಮಾನ!

ರನ್ ವೇನಲ್ಲಿ ಗೋಡೆಗೆ ಗುದ್ದಿದ ಏರ್ ಇಂಡಿಯಾ ವಿಮಾನ! ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ! ತಿರುಚಿಯಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ! 250 ಕಿ.ಮೀ. ವೇಗದಲ್ಲಿ ಗೋಡೆಗೆ ಗುದ್ದಿನ ಮುಂಭಾಗದ ಚಕ್ರ! ಹಾನಿಗೊಳಗಾದರೂ ಮುಂಬೈಗೆ ಪ್ರಯಾಣ ಬೆಳೆಸಿದ ವಿಮಾನ

 

Air India Plane Slammed Into Wall at Trichy Airport
Author
Bengaluru, First Published Oct 12, 2018, 5:12 PM IST

ಚೆನ್ನೈ(ಅ.12): ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸರಹದ್ದು ಗೋಡೆಗೆ ಅಪ್ಪಳಿಸಿರುವ ಘಟನೆ ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. 

ದುಬೈ-ತಿರುಚಿ ಮಾರ್ಗದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಿಂದ ಇಂದು ಬೆಳಗಿನ ಜಾವ 1.20ರ ಸುಮಾರಿಗೆ ರನ್ ವೇನಲ್ಲಿ ತೆರಳುತ್ತಿದ್ದಾಗ ಮುಂದಿನ ಚಕ್ರ ಸರಹದ್ದು ಗೋಡೆಗೆ ಬಡಿದಿದೆ. ವಿಮಾನದಲ್ಲಿ 130 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಗಳಿದ್ದರು. 

ಆಶ್ವರ್ಯಕರ ಸಂಗತಿ ಎಂದರೆ ವಿಮಾನ ಗೋಡೆಗೆ ಬಡಿದಿದ್ದರೂ, ಪೈಲೆಟ್ ವಿಮಾನವನ್ನು ಮುಂಬೈಗೆ ಕೊಂಡೊಯ್ದಿದ್ದು ವಿವಾದಕ್ಕೆ ಕಾರಣವಾಗಿದೆ. ಬಳಿಕ ಪ್ರಯಾಣಿಕರಿಗೆ ಬೇರೊಂದು ವಿಮಾನದ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ.  ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತನಿಖೆಗೆ ಆದೇಶಿಸಿದೆ.

ಹಾನಿಗೊಳಗಾದರೂ 3 ಗಂಟೆಗಳ ಕಾಲ ಹಾರಾಟ ನಡೆಸಿದ್ದ ವಿಮಾನ:

ಘಟನೆ ಬಳಿಕ ವಾಯು ಸಾರಿಗೆ ನಿಯಂತ್ರಣ ಕೊಠಡಿ ಪೈಲಟ್ ಸಂಪರ್ಕಿಸಿದ್ದು, ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ, ಕಾರ್ಯನಿರ್ವಹಿಸುತ್ತಿದೆ ಎಂದು ಪೈಲಟ್ ತಿಳಿಸಿದ್ದಾರೆ. 

ಬಳಿಕ ದುಬೈಗೆ ತೆರಳಬೇಕಿದ್ದ ವಿಮಾನ ಹಾರಾಟವನ್ನು ಮುಂಬೈಗೆ ತಿರುಗಿಸಲಾಗಿದೆ. ಇದರಂತೆ 5.35ರ ಸುಮಾರಿಗೆ ಮುಂಬೈಗೆ ವಿಮಾನ ತೆರಳಿದೆ. ಆದರೆ, ಈ ವೇಳೆ ವಿಮಾನ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ದಿಗ್ಭ್ರಾಂತಿಯಾಗಿದೆ. 

ವಿಮಾನದ ಹಲವು ಭಾಗಗಳು ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ವಿಮಾನದ ಆಂಟೆನಾ ಮುರಿದು ಹೋಗಿರುವುದು ಕಂಡು ಬಂದಿದೆ. ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದರೂ ವಿಮಾನ 3 ಗಂಟೆಗಳ ಹಾರಾಟ ನಡೆಸಿರುವುದು ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ.

Follow Us:
Download App:
  • android
  • ios