ರನ್ ವೇ ಬಿಟ್ಟ ವಿಮಾನ: ಕೂದಲೆಳೆಯಲ್ಲಿ ತಪ್ಪಿದ ಅನಾಹುತ!

Air India Express Flight Overshoots Mumbai Runway
Highlights

ರನ್ ವೇ ಬಿಟ್ಟು ಮುನ್ನುಗ್ಗಿದ ಏರ್ ಇಂಡಿಯಾ ವಿಮಾನ

ಕೂದಲೆಳೆಯಲ್ಲಿ ತಪ್ಪಿತು ಭಾರೀ ಅನಾಹುತ

ಪ್ರಯಾಣಿಕರ ಜೀವ ಉಳಿಸಿದ ಪೈಲೆಟ್ ಸಮಯಪ್ರಜ್ಞೆ

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ

ಮುಂಬೈ(ಜು.10): ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಹೊರ ನುಗ್ಗಿದ ಘಟನೆ ನಡೆದಿದೆ. 

ಅದೃಷ್ಟವಶಾತ್ ವಿಮಾನಕ್ಕೆ ಮತ್ತು ರನ್ ವೇಗೆ ಯಾವುದೇ ಹಾನಿಯಾಗದೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಡ-ಮುಂಬೈ ಏರ್ ಇಂಡಿಯಾ ಏಕ್ಸ್ ಪ್ರೆಸ್ ವಿಮಾನ ಐಎಕ್ಸ್ 213 ಭಾರಿ ಮಳೆಯ ನಡುವೆಯೇ ಇಂದು ಮಧ್ಯಾಹ್ನ 2.50ರ ಸುಮಾರಿಗೆ ಪ್ರಮುಖ ರನ್ ವೇ 27ರ ಬದಲು 14ರಲ್ಲಿ ಲ್ಯಾಂಡ್ ಆಗಿದ್ದು, ಕೊನೆ ಗಳಿಗೆಯಲ್ಲಿ ಪೈಲೆಟ್ ನ ಸಮಯಪ್ರಜ್ಷೆಯಿಂದ ಯಶಸ್ವಿಯಾಗಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

loader