ಮುಂಬೈ : ಏರ್ ಹೋಸ್ಟೆಸ್ ಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು 23 ವರ್ಷದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. 

ಬಂಧಿತ ವ್ಯಕ್ತಿಯನ್ನು ಸ್ವಪ್ನಿಲ್ ಅರುಣ್ ಕುಮಾರ್ ಬಡೋನಿಯಾ ಎನ್ನಲಾಗಿದ್ದು, ಜೂನ್ 10ರವರೆಗೆ ಪೊಲೀಸ್ ವಶದಲ್ಲಿರಿಸಲಾಗಿದೆ. 

ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಕೂಡ ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಆತನ ನಿವಾಸದಲ್ಲಿ ನಡೆದ ಪಾರ್ಟಿಗೆ ತೆರಳಿದ್ದ ವೇಳೆ ಕುಡಿದು ಕಿರುಕುಳ ನೀಡಿದ್ದಾನೆ. ಈ ವೇಳೆ ಆತನ ಸ್ನೇಹಿತನೂ ಕೂಡ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. 

ಈ ಬಗ್ಗೆ ಸಂತ್ರಸ್ತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅರುಣ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಈ ಬಗ್ಗೆ ಆರೋಪಿ ವಿರುದ್ಧ ಸೆಕ್ಷನ್ 376[ಡಿ, ಗ್ಯಾಂಗ್ರೇಪ್], 323[ಹಲ್ಲೆ] ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ. ಆದರೆ ಆತನ ಸ್ನೇಹಿತನ ವಿರುದ್ಧ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ.