Asianet Suvarna News Asianet Suvarna News

ಎಲ್ಲಾದ್ರೂ ಸಿಕ್ತಾನಾ ನೋಡಿ: ನೀರಿಗಾಗಿ 10 ಸಾವಿರ ಟಿಪ್ ಕೊಡ್ತಾನೆ ಈ ಮೂಡಿ!

ನೀರು ಪಡೆದು 10 ಸಾವಿರ ಯುಎಸ್ ಡಾಲರ್ ಟಿಪ್ ಕೊಟ್ಟ! ಗ್ರಾಹಕನ ಅಚ್ಚರಿಯ ವರ್ತನೆಗೆ ಬೆಸ್ತು ಬಿದ್ದ ಅಲಿಸಾ ಕಸ್ಟರ್! ಅಲಿಸಾ ರಿಯಾಕ್ಷನ್ ಸೆರೆ ಹಿಡಿಯಲು 10 ಸಾವಿರ ಡಾಲರ್! ಯೂಟ್ಯೂಬ್ ಸೆನ್ಸೆಶನ್ ಮಿಸ್ಟರ್ ಬೀಸ್ಟ್ ಮಾಡಿದ ಪ್ಲ್ಯಾನ್

After Ordering Just a water Man Leaves 10 Thousand Dollars tip
Author
Bengaluru, First Published Oct 23, 2018, 12:05 PM IST
  • Facebook
  • Twitter
  • Whatsapp

ನಾರ್ಥ್ ಕರೋಲಿನಾ(ಅ.23): ಅಲಿನಾ ಕಸ್ಟರ್ ಎಂದಿನಂತೆ ತಾನು ಕೆಲಸ ಮಾಡುವ ರೆಸ್ಟೋರೆಂಟ್ ಗೆ ಬಂದು, ಮುಗುಳ್ನಗುತ್ತಾ ಗ್ರಾಹಕರು ಆರ್ಡರ್ ಮಾಡಿದ್ದನ್ನು ಸರ್ವ್ ಮಾಡುತ್ತಿದ್ದಳು.

ದಿಢೀರ್ ಅಂತಾ ಒಳ ನುಗ್ಗಿದ ಆಗುಂತಕನೋರ್ವ, ಅಲಿನಾ ಮುಖವನ್ನೇ ದಿಟ್ಟಿಸಿ ನೋಡುತ್ತಾ ಎರಡು ಬಾಟಲ್ ನೀರು ಬೇಕು ಎಂದವನೇ ಟೇಬಲ್ ಮೇಲೆ ಕುಳಿತ. ಅಲಿನಾ ಕೊಂಚ ಬೆವರುತ್ತಲೇ ಆತ ಆರ್ಡರ್ ಮಾಡಿದ ಎರಡು ಬಾಟಲ್ ಮಿನರಲ್ ವಾಟರ್ ತಂದು ಕೊಟ್ಟಳು.

ನೀರಿನ ಬಾಟಲ್ ಪಡೆದವನೇ ಆ ಆಗುಂತಕ ಎದ್ದು ಹೊರ ನಡೆದುಬಿಟ್ಟ. ಅಬ್ಬಾ! ಕೊನೆಗೂ ಹೋದ್ನಲ್ಲ ಅಂತಾ ನಿಟ್ಟುಸಿರು ಬಿಟ್ಟ ಅಲಿನಾಗೆ ಆಗಲೇ ಅಚ್ಚರಿ ಕಾದಿತ್ತು. ಕಾರಣ ಆಕೆಯಿಂದ ಕೇವಲ ಎರಡು ಬಾಟಲ್ ನೀರು ಪಡೆದು ಹೋದವ ಬರೋಬ್ಬರಿ 10 ಸಾವಿರ ಯುಎಸ್ ಡಾಲರ್ ಟಿಪ್ ಬಿಟ್ಟು ಹೋಗಿದ್ದ. ಜೊತೆಗೆ ನೀರು ಕೊಟ್ಟಿದ್ದಕ್ಕೆ ಧನ್ಯವಾದ ಎಂಬ ಪುಟ್ಟ ನೋಟ್ ಕೂಡ ಬಿಟ್ಟು ಹೋಗಿದ್ದ.

ಅರೆ..! ಇದೇನು ಯಾವುದೋ ಸಿಸಿಮಾದ ಸ್ಕ್ರಿಪ್ಟ್ ಇದ್ದಂಗಿದೆ ಅಂತಾ ಮೂಗು ಮುರಿಬೇಡಿ. ಇದು ಅಮೆರಿಕದಲ್ಲಿ ನಿಜಕ್ಕೂ ನಡೆದ ಘಟನೆ. ಅಂದಹಾಗೆ ಅಲಿಸಾಳಿಂದ ಕೇವಲ ಎರಡು ಬಾಟಲ್ ನೀರು ಪಡೆದು 10 ಸಾವಿರ ಯುಎಸ್ ಡಾಲರ್ ಟಿಪ್ ನೀಡಿದ್ದಾತ ಕೂಡ ಸಾಮಾನ್ಯ ವ್ಯಕ್ತಿಯಲ್ಲ, ಯೂಟ್ಯೂಬ್ ನಲ್ಲಿ ಮಿಸ್ಟರ್ ಬೀಸ್ಟ್ ಎಂದೇ ಖ್ಯಾತಿ ಗಳಿಸಿದವ.

ಯೂಟ್ಯೂಬ್ ನಲ್ಲಿ 8.9 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮಿಸ್ಟರ್ ಬೀಸ್ಟ್, ಅಲಿನಾಳ ರಿಯಾಕ್ಷನ್ ಸೆರೆ ಹಿಡಿಯಲು ಟೇಬಲ್ ಮೇಲೆ 10 ಸಾವಿರ ಯುಎಸ್ ಡಾಲರ್ ಇಟ್ಟು ಹೋಗಿದ್ದ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಲಿನಾ, ತಾನೆಂದೂ ಇಷ್ಟೊಂದು ಮೊತ್ತವನ್ನು ನೋಡಿಯೇ ಇಲ್ಲ ಎಂದು ಸಂತಸ ಹಂಚಿಕೊಂಡಿದ್ದಾಳೆ. ಅಲ್ಲದೇ ಮಿಸ್ಟರ್ ಬೀಸ್ಟ್ ಈ ಹಣವನ್ನು ತನಗೇ ಕೊಟ್ಟಿರುವ ಕುರಿತು ಅಲಿನಾ ಸಂತಸ ವ್ಯಕ್ತಪಡಿಸಿದ್ದಾಳೆ.

Follow Us:
Download App:
  • android
  • ios