ಫೋಟೋ ಕೃಪೆ: DDN Bangla

ಕೋಲ್ಕತ್ತಾ(ನ.07): ಬಾಯಿಗೆ ಬಂದಂತೆ ಮಾತನಾಡಿ ಎಲ್ಲೆದುರು ಅಪಹಾಸ್ಯಕ್ಕೀಡಾಗುವುದು ಬಹುತೇಕ ರಾಜಕಾರಣಿಗಳ ಚಾಳಿ. ಅದರಲ್ಲೂ ಗೋವಿಗೆ ಸಂಬಂಧಿಸಿದಂತೆ ತಮಗೆ ತಿಳಿದಂತೆ ಮಾತನಾಡುವ ಕೆಲವು ರಾಜಕಾರಣಿಗಳು, ತಮ್ಮನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂಬ ಭ್ರಮೆಯಲ್ಲಿರುತ್ತಾರೆ.

ಆದರೆ ಕಾಲ ಬದಲಾಗಿದೆ. ರಾಜಕಾರಣಿಗಳ ಹಸಿ ಸುಳ್ಳುಗಳನ್ನು ಜನ ಅವರ ಮುಖಕ್ಕೆ ಹೊಡೆದಂತೆ ಬಯಲಿಗೆಳೆಯುತ್ತಾರೆ ಈ ಸತ್ಯವನ್ನು ರಾಜಕಾರಣಿಗಳು ಬೇಗ ಅರಿತಷ್ಟು ಅವರಿಗೇ ಒಳ್ಳೆಯದು.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ದೇಶೀಯ ತಳಿಯ ಗೋವಿನ ಹಾಲಿನಲ್ಲಿ ಚಿನ್ನ ಇರುತ್ತದೆ ಎಂದಿದ್ದ ಪ.ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್. ಈ ಅಪಹಾಸ್ಯದ ಹೇಳಿಕೆ ದಿಲೀಪ್ ಘೋಷ್ ಅವರನ್ನು ಇದೀಗ ಪೇಚಿಗೆ ಸಿಲುಕಿಸಿದೆ.

ವಿದೇಶಿ ಗೋವುಗಳು ತಾಯಿಯಲ್ಲ, ಆಂಟಿಗಳು: ಬಂಗಾಳ ಬಿಜೆಪಿ ಮುಖ್ಯಸ್ಥ!

ದೇಸಿ ಹಸುಗಳ ರಕ್ತನಾಳಗಳು ಸೂರ್ಯನ ಬೆಳಕಿನಿಂದ ಚಿನ್ನ ಉತ್ಪಾದಿಸುತ್ತವೆ. ಇದೇ ಕಾರಣಕ್ಕೆ ಅವುಗಳ ಹಾಲಿನಲ್ಲಿ ಚಿನ್ನದ ಅಂಶ ಇರುತ್ತದೆ ಎಂದು ದಿಲೀಪ್ ಘೋಷ್ ಹೇಳಿಕೆ ನೀಡಿದ್ದರು.

ದಿಲೀಪ್ ಘೋಷ್ ಹೇಳಿಕೆಯಂತೆ ಗೋವಿನ ಹಾಲಿನಲ್ಲಿ ಚಿನ್ನ ಇರುವುದಾದರೆ ನನ್ನ ಗೋವನ್ನು ಅಡವಿಟ್ಟುಕೊಂಡು ಚಿನ್ನದ ಮೇಲೆ ಸಾಲ ಕೊಡಿಸುವಂತೆ ಪ.ಬಂಗಾಳ ರೈತ ದಂಬಾಲು ಬಿದ್ದಿದ್ದಾನೆ.

ತನ್ನ ಗೋವನ್ನು ಅಡವಿಟ್ಟುಕೊಂಡು ಅದರ ಮೇಲೆ ಚಿನ್ನದ ಸಾಲ ಕೊಡುವಂತೆ ರೈತನೋರ್ವ ಇಲ್ಲಿನ ಧನ್'ಕುನಿಯ ಮಣಪ್ಪುರಂ ಗೋಲ್ಡ್ ಲೋನ್ ಕಂಪನಿಗೆ ಮನವಿ ಮಾಡಿದ್ದಾನೆ.

'ಕೃಷ್ಣನಂತೆ ಕೊಳಲೂದಿದರೆ ಹಸು ಹೆಚ್ಚು ಹಾಲು ಕೊಡುತ್ತೆ!'

ಮಣಪ್ಪುರಂ ಕಚೇರಿಗೆ ತನ್ನ ಗೋವಿನೊಂದಿಗೆ ಬಂದ ರೈತ, ತನ್ನ ಗೋವಿನ ಹಾಲಿನಲ್ಲಿ ಚಿನ್ನವಿದ್ದು ಇದನ್ನು ಅಡವಿಟ್ಟುಕೊಂಡು ಚಿನ್ನದ ಮೇಲಿನ ಸಾಲ ಕೊಡುವಂತೆ ದಂಬಾಲು ಬಿದ್ದಿದ್ದಾನೆ.

ಇನ್ನು ದಿಲೀಪ್ ಘೋಷ್ ಹೇಳಿಕೆ ಬಳಿಕ ಪ.ಬಂಗಾಳದಲ್ಲಿ ರೈತರಲ್ಲರೂ ತಮ್ಮ ಗೋವನ್ನು ಮಾರಾಟ ಮಾಡಿಕೊಂಡುವಂತೆ ಗ್ರಾಮದ ಸರಪಂಚರನ್ನು ಬೆನ್ನತ್ತಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಗರಲ್ಗಾಚಾ ಗ್ರಾಮ ಪಂಚಾಯ್ತಿಯ ಸರಪಂಚ್ ಮನೋಜ್ ಸಿಂಗ್, ದಿಲೀಪ್ ಹಾಸ್ಯಾಸ್ಪದ ಹೇಳಿಕೆ ಬಳಿಕ ಗ್ರಾಮದ ಜನ ತಮ್ಮ ಗೋವನ್ನು ಮಾರಾಟ ಮಾಡಿಕೊಡುವಂತೆ ದಂಬಾಲು ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.