ಬೆಂಗಳೂರು. [ನ.05]: ನಟ ದುನಿಯಾ ವಿಜಯ್ 2ನೇ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಮೊದಲ ಪತ್ನಿ ನಾಗರತ್ನಗೆ ಸಧ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

ನಟ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಹಾಗೂ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನಗೆ ಮಧ್ಯಂತರ ಜಾಮೀನು ಸಿಕ್ಕಿದೆ. 

ಕೀರ್ತಿಗೌಡ ಮನೆಯಲ್ಲಿ ನಡೆದಿದ್ದೇನು? ಹಲ್ಲೆ ನಡೆದಿದ್ದು ಹೇಗೆ?

ನಿರೀಕ್ಷಣಾ ಜಾಮೀನು ಅರ್ಜಿ ಅಂತಿಮ ಆದೇಶ ಬರುವವರೆಗೂ ಮಧ್ಯಂತರ ಜಾಮೀನು ನೀಡಿ ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್ ಇಂದು [ಸೋಮವಾರ] ಆದೇಶ ಹೊರಡಿಸಿದೆ. 

50 ಸಾವಿರ ಬಾಂಡ್, ಒಬ್ಬರ ಶ್ಯೂರಿಟಿ, ವಿಚಾರಣೆ ಸಹಕರಿಸುವಂತೆ ಷರತ್ತು ವಿಧಿಸಿ ನ್ಯಾಯಧೀಶ ಬಿ.ಬಿ. ಜಕಾತಿ ಅವರು ಜಾಮೀನು ಮಂಜೂರು ಮಾಡಿದ್ದು, ಇದೇ ನವೆಂಬರ್ 12 ಕ್ಕೆ ವಿಚಾರಣೆ ಮುಂದೂಡಿದ್ದಾರೆ.

ಕೋರ್ಟ್ ಮೊರೆ ಹೋದ ವಿಜಿ ಪತ್ನಿ ನಾಗರತ್ನ

ಕೆಲ ದಿನಗಳ ಹಿಂದೆ ಬಿಜಿ ಮೊದಲ ಪತ್ನಿ ಕೀತೀಗೌಡ ಮನೆಗೆ ನುಗ್ಗಿ ಚಪ್ಪಲಿಯಿಂದ ಮನಬಂದಂತೆ ಥಳಿಸಿದ್ದರು. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.