Asianet Suvarna News Asianet Suvarna News

‘ನಾನು ಸೊಂಟ ಮುಟ್ಟಿಲ್ಲ, ಆಕೆಗೆ ಏನೂ ಮಾಡಿಲ್ಲ’

ಬರಹ ಚಿತ್ರದ ಪೋಟೋ ಶೂಟ್​ ವೇಳೆ ಚೇತನ್​ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದರು ಎಂದು ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯ  ವಿಚಾರವಾಗಿ ಇಂದು ನಗರದಲ್ಲಿ ಚೇತನ್ ಪ್ರತಿಕ್ರಿಯಿಸಿದ್ದಾರೆ. ಅದರ ವಿವರ ಇಲ್ಲಿದೆ.

Actor chetan reacts on Arjun Sarja daughter allegation
Author
Bengaluru, First Published Oct 29, 2018, 10:39 PM IST
  • Facebook
  • Twitter
  • Whatsapp

ಬೀದರ್, [ಅ.29]:  ನಟಿ ಶ್ರುತಿ ಹರಿಹರನ್​ ಮಾಡಿದ್ದ ಮೀಟೂ ಆರೋಪಕ್ಕೆ ಕೈಜೋಡಿಸಿದ ನಟ ಚೇತನ್ ಗೆ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ.

 ಅರ್ಜುನ್​ ಸರ್ಜಾ ಮೇಲಿನ ಲೈಂಗಿಕ ಆರೋಪ ಸಂಬಂಧ ನಟ ಚೇತನ್​ ತಮ್ಮ ಫೈಯರ್​ ಸಂಸ್ಥೆ ಮೂಲಕ ಶ್ರುತಿ ಬೆನ್ನಿಗೆ ನಿಂತಿದ್ದರು. ಅಲ್ಲದೇ ಚೇತನ್ ಹಾಗೂ ಅರ್ಜುನ್ ನಡುವೆ ವಾಕ್ಸಮರ ನಡೆದಿತ್ತು.

ಇದರಿಂದ ಅವರು ಸರ್ಜಾ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರೇಮ ಬರಹ ಸಿನಿಮಾದ ಅಡ್ವಾನ್ಸ್​ ವಿಷಯದಿಂದ ಶುರುವಾದ ಆರೋಪ ಬಳಿಕ ಮೀಟೂ ರೂಪ ಪಡೆದುಕೊಂಡಿತು.

ನಟ ಚೇತನ್​ ಸಿನಿಮಾ ಜೀವನಕ್ಕೆ ಕುತ್ತು ತಂತು MeToo

 ಪ್ರೇಮ ಬರಹ ಚಿತ್ರದ ಪೋಟೋ ಶೂಟ್​ ವೇಳೆ ಚೇತನ್​ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದರು ಎಂದು ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯ ಆರೋಪ ಮಾಡಿದ್ದರು. 

 ಇದಕ್ಕೆ ಪ್ರತಿಕಿಯಿಸಿದ ಚೇತನ್,  ನಾನು ಸೊಂಟಾನು ಮುಟ್ಟಿಲ್ಲಾ.. ಏನೂ ಇಲ್ಲ.. ಅದು ಕೇವಲ ಪೋಟೋ ಶೂಟ್ ಅಷ್ಟೆ. ಸರ್ಜಾ ಅವರೇ ಆ ಪೋಟೋ ಶೂಟ್​ ನಿರ್ವಹಣೆ ಮಾಡಿದ್ದು ಅಂತಾ ಹೇಳಿದರು. 

ಅಲ್ಲದೇ, ನಾನು ಊಟಕ್ಕೆ ಕರೆದೆ ಎಂದು ಐಶ್ವರ್ಯ ಹೇಳಿದ್ದಾರೆ, ಆದರೆ, ನಾನು ಅವರನ್ನು ಊಟಕ್ಕೆ ಕರೆದೇ ಇಲ್ಲಾ. ಅರ್ಜುನ ಸರ್ಜಾ ಅವರೇ ಮನೆಗೆ ಊಟಕ್ಕೆ ಬನ್ನಿ ಎಂದಿದ್ರು. ಆದರೆ ಐಶ್ವರ್ಯ ಈಗ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Follow Us:
Download App:
  • android
  • ios