ಬೆಂಗಳೂರು, [ನ.05]: 'ವಿಸ್ಮಯ' ಸಿನಿಮಾ ಚಿತ್ರೀಕರಣದ ವೇಳೆ ನಟ ಅರ್ಜುನ್‌ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ನಟಿ ಶ್ರುತಿ ಹರಿಹರನ್‌ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು [ಸೋಮವಾರ] ವಿಚಾರಣೆಗೆ ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರ ಮುಂದೆ ನಟ ಅರ್ಜುನ್‌ ಸರ್ಜಾ ಹಾಜರಾದರು. 

ಸುಮಾರು 3 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಸರ್ಜಾರಿಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಗೖದಿದ್ದಾರೆ. ಈ ವೇಳೆ ಪೊಲೀಸರಿಗೆ ಇಡೀ ಪ್ರಕರಣಕ್ಕೆ ಮೂರೇ ಮೂರು ವಾಕ್ಯಗಳಲ್ಲಿ ಅರ್ಜುನ್ ಸರ್ಜಾ ಖಡಕ್ ಉತ್ತರ ಕೊಟ್ಟಿದ್ದು, ಅದರ ವಿವರ ಇಲ್ಲಿದೆ.

#MeToo ವಿಚಾರಣೆ: ಪೊಲೀಸರ ಖಡಕ್ ಪ್ರಶ್ನೆಗೆ ಸರ್ಜಾ ಖಡಕ್ ಉತ್ತರ!

1. ನಾನು ಶೃತಿ ಹರಿಹರನ್ನ ಮುಟ್ಟಿದ್ದೆ ಆದ್ರೆ ಅದು ' 'ಪಾರ್ಟ್ ಆಪ್ ಕಾಂಟ್ರ್ಯಾಕ್ಟ್' ನಾನು ಹಾಗೇ ಮುಟ್ಟಿಲ್ಲ.
2. ಇನ್ ಕೇಸ್ ನಾನು ಕೆಟ್ಟ ರೀತಿಯಲ್ಲಿ ಮುಟ್ಟಿದ್ದೀನಿ ಅನ್ನೋದೆ ಆದ್ರೆ ಸಿನಿಮಾದ ವಿಡಿಯೋ ತರಿಸಿ ನೋಡಿ. ಕೆಟ್ಟ ಉದ್ದೇಶ ಇದ್ರೆ  ವಿಡಿಯೋದ ನನ್ನ ಮುಖಭಾವನೆಯಲ್ಲಿ ಎಲ್ಲ ತಿಳಿಯುತ್ತೆ. 
3. ಶೃತಿ ಆರೋಪ ಸತ್ಯವಾಗಿದ್ರೆ, ವಿಸ್ಮಯ ಸಿನಿಮಾ ರಿಲೀಸ್ ವೇಳೆ ನನ್ನನ್ನ ಹಾಡಿ ಹೊಗಳಿದ್ದು ಏಕೆ?. ಎರಡು ವರ್ಷಗಳ ನಂತರ ಆರೋಪ ಮಾಡ್ತಿರೋದ್ಯಾಕೆ?, ಆ ಉದ್ದೇಶ ನನಗೆ ಗೊತ್ತಿಲ್ಲ.

ಹೀಗೆ ಮೂರೇ ಮೂರು ವಾಕ್ಯಗಳಲ್ಲಿ ಪೊಲೀಸರಿಗೆ ಅರ್ಜುನ್ ಸರ್ಜಾ ಉತ್ತರ ನೀಡಿದರು.