ನವದೆಹಲಿ :  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಿಲ್ಲಿ ವಿಶ್ವವಿದ್ಯಾಲಯದ ಸ್ಟೂಡೆಂಟ್ ಯೂನಿಯನ್ ಚುನಾವಣೆಯ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದೆ. 

ಇದು ಬಿಜೆಪಿಯ ಆಶಾಭಾವನೆಯನ್ನು ಮೂಡಿಸುವಂತಹ ಬೆಳವಣಿಗೆಯಾಗಿದೆ.  ಬಿಜೆಪಿ ವಿದ್ಯಾರ್ಥಿ ಸಂಘಟನೆಯಾಗಿರುವ ಎಬಿವಿಪಿ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಲ್ಲಿ  ಗೆದ್ದಿದ್ದಾರೆ.   ಕಾಂಗ್ರೆಸ್ ಅಂಗವಾದ ಎನ್ ಎಸ್ ಯು ಐ ಕಾರ್ಯದರ್ಶಿ ಸ್ಥಾನ ಒಂದರಲ್ಲಿ ಗೆಲುವು ಪಡೆದುಕೊಂಡಿದೆ. 

 

 

ಇನ್ನು ದಿಲ್ಲಿ ವಿಶ್ವವಿದ್ಯಾಲಯದ ಚುನಾವಣೆಗೂ ಹಾಗೂ ಲೋಕಸಭಾ ಚುನಾವಣೆಗೂ ನೆರವಾದ ಸಂಪರ್ಕವಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶ ಮುನ್ಸೂಚನೆ ಇಲ್ಲಿ ಪ್ರಕಟವಾಗುತ್ತದೆ ಎನ್ನಲಾಗುತ್ತದೆ.

1997, 98,2013ರಲ್ಲಿಯೂ ಇಲ್ಲಿ ಇದೇ ರೀತಿಯ ಗೆಲುವು ಪಡೆದಿದ್ದು, ಇದಾದ ಬಳಿಕ ಬಿಜೆಪಿ ಕೇಂದ್ರದಲ್ಲಿ ಗೆಲುವು ದಾಖಲಿಸಿತ್ತು. ಆದ್ದರಿಂದ ಈ ಮೂಲಕ ಮುಂದಿನ ಚುನಾವಣೆಯ ಫಲಿತಾಂಶದ ಬಗ್ಗೆ ಬಿಜೆಪಿಯಲ್ಲಿ ಆಶಾಭಾವನೆಯೊಂದು ಮೂಡಿದಂತಾಗಿದೆ.