Asianet Suvarna News Asianet Suvarna News

ತಾಯಿ ಇಲ್ಲದೇ ಜನಿಸಿದ ಅವಳಿ, 2 ತಿಂಗಳ ನಂತರ ಮಕ್ಕಳ ಎತ್ತಿ ಮುದ್ದಾಡಿದ ತಂದೆ

ಎರಡು ತಿಂಗಳ ನಂತರ ಅವಳಿ ಮಕ್ಕಳನ್ನು ಕಂಡ ತಂದೆ/ ಕೋಲ್ಕತ್ತಾದಿಂದ ದೆಹಲಿಗೆ ತೆರಳಲು ಹರಸಾಹಸ/ ಒಮ್ಮೆ ಲಾಕ್ ಡೌನ್ ಇನ್ನೊಮ್ಮೆ ಚಂಡಮಾರುತ/ ಮಕ್ಕಳನ್ನು ಕೈಯಲ್ಲಿ ಎತ್ತಿ ಮುದ್ದಾಡಿದ ತಂದೆ

A Single Father Story in Lockwown joy after two months of twins born
Author
Bengaluru, First Published May 30, 2020, 9:18 PM IST
  • Facebook
  • Twitter
  • Whatsapp

ಕೋಲ್ಕತ್ತಾ(ಮೇ 30)  ಒಂದು ಕಡೆ ಕೊರೋನಾ ಹಾವಳಿ ಇನ್ನೊಂದು ಕಡೆ ಚಂಡಮಾರುತ. ಪಶ್ಚಿಮ ಬಂಗಾಳ ಮತ್ತು ಓರಿಸ್ಸಾದ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ.

ಅವಳಿ ಮಕ್ಕಲು ಹುಟ್ಟಿದ್ದರೂ ಲಾಕ್ ಡೌನ್ ಪರಿಣಾಮ ಅವುಗಳನ್ನು ನೋಡಲು ಸಾಧ್ಯವಾಗದೆ ತಂದೆಯೊಬ್ಬರು ಪರಿತಪಿಸುತ್ತಿದ್ದರು.  ಮಕ್ಕಳು ಜನಸಿ ಬರೋಬ್ಬರಿ 57 ದಿನಗಳ ನಂತರ ತಂದೆ ದೆಹಲಿಯಲ್ಲಿ ಜನಿಸಿದ ಮಕ್ಕಳನ್ನು ನೋಡಿದ್ದಾರೆ.

ಸಾಲ್ಟ್ ಲೇಕ್ ನಿವಾಸಿ ಅಭಿಷೇಕ್ ಪೌಲ್ ತಮ್ಮ ಮಕ್ಕಳನ್ನು ನೋಡಲು ಬಹಳ ಕಾತರದಿಂದಿದ್ದರು.  ಸತತ ನಾಲ್ಕು ಸಾರಿ ಪ್ರಯತ್ನ ಮಾಡಿ ಕೋಲ್ಕತ್ತಾದಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಡೊಮೆಸ್ಟಿಕ್ ವಿಮಾನ ಆರಂಭವಾದ ಒಂದು ದಿನದ ನಂತರದಲ್ಲಿ ಅವರ ಪ್ರಯಾಣವಾಗಿದೆ.

ತಂದೆ ಕೂರಿಸಿಕೊಂಡು ಸಾವಿರ ಮೈಲಿ ಸೈಕಲ್ ತುಳಿದ ಮಗಳು

ಕೊರೋನಾ ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡು ಮಕ್ಕಳನ್ನು ತಂದೆ ಕೈಯಲ್ಲಿ ಎತ್ತಿಕೊಂಡಿದ್ದಾರೆ.  ಗೊತ್ತಿಲ್ಲದೆ ಅವರ ಕಣ್ಣಿನಲ್ಲಿ ನೀರು ಹೊಳೆಯಾಗಿ ಹರಿದಿದೆ.

ಪ್ರಪಂಚದಲ್ಲಿ ಇದಕ್ಕಿಂತ ದೊಡ್ಡ ಸಂಗತಿ ಇನ್ಯಾವುದೂ ಇಲ್ಲ. ಮಕ್ಕಳನ್ನು ಕಂಡರೂ ಒಂದು ಕ್ಷಣ ಅಲ್ಲಿಯೇ ನಿಂತೆ. ನರ್ಸ್ ಬಳಿ ನನ್ನನ್ನು ಸಾನಿಟೈಸ್ ಮಾಡಲು ಕೇಳಿಕೊಂಡು ಆ ಕೆಲಸ ಮುಗಿದ ಮೇಲೆಯೇ ಮಕ್ಕಳನ್ನು ಎತ್ತಿಕೊಂಡೆ ಎಂದು ಅಭಿಷೇಕ್ ಹೇಳುತ್ತಾರೆ.

ಅತ್ಯಂತ ನೋವಿನ ಕಾಯುವಿಕೆ ಅಂದರೆ ಇದೇ ಇರಬೇಕು. ಮಕ್ಕಳು ಅಳುತ್ತ ಇರಲಿಲ್ಲ. ಒಂದು ಮಗು ನಕಣ್ಣು ಮುಚ್ಚಿಕೊಂಡಿತ್ತು ಎಂದು ತಮ್ಮ ಅನುಭವ ತಿಳಿಸಿದ್ದಾರೆ.

ಅಭಿಷೇಕ್ ಮುದ್ರಣ ಉದ್ಯಮ ನಡೆಸಿಕೊಂಡಿದ್ದಾರೆ.  ಆರು ತಿಂಗಳ ಗರ್ಭಿಣಿ ಇದ್ದಾಗಲೇ ಅವರ ಪತ್ನಿ 2013ರಲ್ಲಿ ತೀರಿಕೊಂಡಿದ್ದರು. ಹೆಂಡತಿ ತೀರಿಕೊಂಡರೂ ತಂದೆಯಾಗಬೇಕು ಎಂಬ ಕನಸು ಹಾಗೇ ಇತ್ತು.

ಇದಾದ ನಂತರ ಅಭಿಷೇಕ್ ಬಾಡಿಗೆ ತಾಯಿತನದ ಅವಕಾಶ ಪಡೆದುಕೊಂಡರು. ಬಾಡಿಗೆ ತಾಯಿ ಅವಳಿ ಮಕ್ಕಳಿಗೆ ಏಪ್ರಿಲ್ 2 ರಮದು ಜನ್ಮ ನೀಡಿದ್ದರು. ಆದರೆ ತಂದೆ ಸಾವಿರದ ಆರೂನುರು ಕಿಮೀ ದೂರದಲ್ಲಿ ಇದ್ದರು. ಲಾಕ್ ಡೌನ್ ಪರಿಣಾಮ ಆಸ್ಪತ್ರೆಗೆ ಆಗಮಿಸುವ ಯಾವ ಸಾಧ್ಯತೆಯೂ ಇರಲಿಲ್ಲ.

ಅವಳಿ ಮಕ್ಕಳ ಜನನ; ಇಬ್ಬರ ತಂದೆ ಮಾತ್ರ ಬೇರೆ ಬೇರೆ, ತಾಯಿ ಗುಟ್ಟು ರಟ್ಟು

ವಿಡಿಯೋ ಕಾಲ್ ಮೂಲಕವೇ ಮಕ್ಕಳ ಆರೋಗ್ಯದ ಸ್ಥಿತಿಗತಿಗಳನ್ನು ಅಭಿಷೇಕ್ ತಿಳಿದುಕೊಳ್ಳುತ್ತಿದ್ದರು. ವೈದ್ಯರು ಮಕ್ಕಳ ವಿಡಿಯೋ ಕಳಿಸಿದಾಗ ಅದನ್ನು ನೋಡಿ ಮಗುವನ್ನು ಕೈಯಲ್ಲಿ ಎತ್ತಿಕೊಂಡಂತೆ ಆಸವಾಗುತ್ತಿತ್ತು ಎಂದು ಅಭಿಷೇಕ್ ಹೇಳುತ್ತಾರೆ. 

ಏಪ್ರಿಲ್ 15 ಕ್ಕೆ ಮೊದಲ ಸಾರಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಲಾಕ್ ಡೌನ್ ಮುಂದುವರಿಕೆ ಮಾಡಲಾಯಿತು. ಇದಾದ ಮೇಲೆ ಮೇ 25ಕ್ಕೆ ಟಿಕೆಟ್ ಬುಕ್ ಮಾಡಿದರು, ಆದರೆ ಅಂಫಾನ್ ಚಂಡಮಾರುತ ಅಡ್ಡ ಬಂತು. ಇದಾದ ಮೇಲೆ ಮತ್ತೆ ಮೇ 28 ರಂದು ಟಿಕೆಟ್ ಬುಕ್ ಮಾಡಿದರು ಆದರೆ ಆ ವಿಮಾನ ಕ್ಯಾನ್ಸಲ್ ಆಯಿತು. ಕೊನೆಯದಾಗಿ ಶುಕ್ರವಾರ ವಿಮಾನದ ಮೂಲಕವೇ ದೆಹಲಿಗೆ ಬಂದಿಳಿದರು.

ಅವಳಿ ಮಕ್ಕಳಿಗೆ ಅಧ್ಯಾಯನ್ ಮತ್ತು ಅಬಾಹನ್ ಎಂದು ಹೆಸರಿಲಾಗಿದೆ. ನಾವು ಹೆಚ್ಚಿನ ಎಚ್ಚರಿಕೆಯಿಂದಲೇ ಮಕ್ಕಳನ್ನು ಬೆಳೆಸುತ್ತೇವೆ ಎಂದಿರುವ ತಂದೆ ಅವಳಿ ಮಕ್ಕಳೊಂದಿಗೆ ಕೋಲ್ಕತ್ತಾ ಕಡೆ ವಿಮಾನ ಹಿಡಿದಿದ್ದಾರೆ. 

Follow Us:
Download App:
  • android
  • ios