Asianet Suvarna News Asianet Suvarna News

‘777888999’ ಈ ನಂಬರ್‌ನಿಂದ ಕರೆ ರಿಸೀವ್ ಮಾಡಿದ್ರೆ ಸಾವು?

777888999 ನಂಬರ್ ನಿಂದ ಕರೆ ಬಂದ್ರ ಸ್ವೀಕರಿಸಬೇಡಿ! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಭಯ ಹುಟ್ಟಿಸೋ ಸುದ್ದಿ! ಈ ನಂಬರ್ ನಿಂದ ಕರೆ ಸ್ವೀಕರಿಸಿದರೆ ಮೊಬೈಲ್ ಸ್ಫೋಟವಾಗುತ್ತಂತೆ!ಭಾರತದಲ್ಲಿ 9 ಸಂಖ್ಯೆಯ ಮೊಬೈಲ್‌ ನಂಬರ್‌ ಅಸ್ತಿತ್ವದಲ್ಲೇ ಇಲ್ಲ

A mobile number which can cause for death
Author
Bengaluru, First Published Oct 5, 2018, 9:46 AM IST

ಬೆಂಗಳೂರು(ಅ.5): ಎಲ್ಲರ ಮೊಬೈಲ್‌ ನಂಬರ್‌ 10 ಸಂಖ್ಯೆಯದ್ದಾಗಿರುತ್ತದೆ. ಆದರೆ, ನಿಮಗೆ 9 ಸಂಖ್ಯೆ ಇರುವ ಮೊಬೈಲ್‌ ನಂಬರ್‌ನಿಂದ ಕರೆ ಬಂದರೆ ಹುಷಾರ್‌! ನಿಮ್ಮ ಮೊಬೈಲ್‌ ಫೋನ್‌ ಸ್ಫೋಟಗೊಳ್ಳಬಹುದು. ಒಂದು ವೇಳೆ 9 ಸಂಖ್ಯೆಯ ಮೊಬೈಲ್‌ ನಂಬರ್‌ನಿಂದ ಬಂದ ಕರೆ ಸ್ವೀಕರಿಸಿದರೆ ನಮ್ಮ ಸಾವು ಖಚಿತ. ಇಂಥದ್ದೊಂದು ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

777888999 ಇದು ಈಗ ಭಾರೀ ಚರ್ಚೆಯಲ್ಲಿರುವ 9 ಸಂಖ್ಯೆ ಮೊಬೈಲ್‌ ನಂಬರ್‌. ಈ ಸಂಖ್ಯೆಯಿಂದ ಬಂದ ಕರೆಯನ್ನು ಸ್ವೀಕರಿಸಿದ ತಕ್ಷಣವೇ ವ್ಯಕ್ತಿಯೊಬ್ಬ ಮೊಬೈಲ್‌ ಸ್ಫೊಟಗೊಂಡು ಸಾವನ್ನಪ್ಪಿದ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಲಾಗುತ್ತಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯೊಬ್ಬ ‘ನನಗೂ ಈ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ಆದರೆ, ನಾನು ಕರೆಯನ್ನು ಸ್ವೀಕರಿಸಿಲ್ಲ’ ಎಂದು ಹೇಳುತ್ತಾ, ಮೊಬೈಲ್‌ಗೆ ಬಂದ ಕರೆಯನ್ನು ತೋರಿಸುತ್ತಾನೆ. 

ನಿಮಗೇನಾದರೂ ಈ ರೀತಿಯ ಕರೆಗಳು ಬಂದರೆ ಅದನ್ನು ಸ್ವೀಕರಿಸದಂತೆ ಆತ ಮನವಿ ಮಾಡಿಕೊಳ್ಳುತ್ತಾನೆ. ಆದರೆ, ಈ ಸುದ್ದಿಯ ನಿಜವನ್ನು ಶೋಧಿಸಿದಾಗ ತಿಳಿಯುವುದೇನೆಂದರೆ ಭಾರತದಲ್ಲಿ 9 ಸಂಖ್ಯೆಯ ಮೊಬೈಲ್‌ ನಂಬರ್‌ ಅಸ್ತಿತ್ವದಲ್ಲೇ ಇಲ್ಲ. ಈ ಸಂಖ್ಯೆಯ ಮೊಬೈಲ್‌ ನಂಬರ್‌ನಿಂದ ಕರೆಯನ್ನು ಮಾಡಲು ಸಾಧ್ಯವೇ ಇಲ್ಲ. ಕೆಲವು ವಿದೇಶಗಳಲ್ಲಿ 9 ಸಂಖ್ಯೆಯ ನಂಬರ್‌ ಇರಬಹುದಾದ ಸಾಧ್ಯತೆ ಇದೆ. 

ಆದರೆ, ಅದರೆ ಅದರಿಂದಲೂ ಯಾವುದೇ ಅಪಾಯ ಇಲ್ಲ. ಒಂದು ನಿರ್ದಿಷ್ಟಸಂಖ್ಯೆಯಿಂದ ಮೊಬೈಲ್‌ ಕರೆ ಮಾಡಿ ಮೊಬೈಲ್‌ ಸ್ಫೋಟಿಸುವ ತಂತ್ರಜ್ಞಾನವೇ ಇಲ್ಲ. ಜನರನ್ನು ಭೀತಿಗೊಳಿಸಲು ಇಂಥದ್ದೊಂದು ಸಂದೇಶ ಹರಿಬಿಡಲಾಗಿದೆ ಎಂದು ತಜ್ಞರು ಹೇಳಿದ್ದಾರೆ.

Follow Us:
Download App:
  • android
  • ios