Asianet Suvarna News Asianet Suvarna News

ತ್ರಿವರ್ಣ ಧ್ವಜದಿಂದ ಕಣ್ಣೀರು ಒರೆಸಿ ಅವಮಾನ ಮಾಡಿದನಾ ಈ ಬಾಲಕ?

ಬಾಲಕರಿಬ್ಬರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೇಗೆ ಅವಮಾನ ಮಾಡಿದ್ದಾರೆ? ಮಾಡಿದ್ದು ನಿಜನಾ? ಏನಿದರ ಅಸಲಿಯತ್ತು ತಿಳಿದುಕೊಳ್ಳಲು ಈ ಸುದ್ದಿ ಓದಿ. 

A boy insult national flag by clean tears
Author
Bengaluru, First Published Aug 24, 2018, 5:18 PM IST

ನವದೆಹಲಿ (ಆ. 24): ಬಾಲಕರಿಬ್ಬರು ಭಾರತದ ತ್ರಿವರ್ಣ ಧ್ವಜದಲ್ಲಿ ಕಣ್ಣೀರು ಒರೆಸಿ ರಾಷ್ಟ್ರಧ್ವಜವನ್ನು ಎಸೆದಿರುವ ದೃಶ್ಯವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಭಾರತದ ರಾಷ್ಟ್ರ ಧ್ವಜದಿಂದ ತನ್ನ ಕಣ್ಣೀರನ್ನು ಒರೆಸಿ, ಅದನ್ನು ಎಸೆದು ‘ನಾನು ಪಕ್ಕಾ ಮುಸಲ್ಮಾನ್’ ಎಂದು ಹೇಳಿರುವ ದೃಶ್ಯವಿದೆ. ಅನುಮಿಶ್ರಾಬಿಜೆಪಿ ಎಂಬ ಹೆಸರಿನ ಟ್ವೀಟರ್ ಖಾತೆಯಿಂದ ಈ ವಿಡಿಯೋ ಮೊದಲು ಪೋಸ್ಟ್ ಆಗಿದ್ದು, ಇದು 2100  ಬಾರಿ ಟ್ವೀಟ್ ಆಗಿದೆ, 2300 ಬಾರಿ ಲೈಕ್ ಆಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ ನಿಜಕ್ಕೂ ಬಾಲಕರಿಬ್ಬರು ತಾನು ಪಕ್ಕಾ ಮುಸಲ್ಮಾನ್ ಎಂದು ಹೇಳುತ್ತ, ಭಾರತದ ರಾಷ್ಟ್ರಧ್ವಜದಲ್ಲಿ ಕಣ್ಣೀರು ಒರೆಸಿ ಎಸೆದಿದ್ದು ನಿಜವೇ ಎಂದು ಪರಿಶೀಲಿಸದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ. ಈ ಬಗ್ಗೆ
ಸುದ್ದಿಮಾಧ್ಯಮವೊಂದು ವರದಿ ಮಾಡಿದ್ದು, ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಬಾಲಕರು, ತ್ರಿವರ್ಣದ ಪೇಪರ್‌ನಲ್ಲಿ ಕಣ್ಣೀರು ಒರೆಸುತ್ತಿರುವ ವಿಡಿಯೋ ಅದು ಎಂಬುದು ಸ್ಪಷ್ಟ ವಾಗಿದೆ.

ಪೊಲೀಸರು ಆ ಇಬ್ಬರು ಬಾಲಕರನ್ನು ಪತ್ತೆಹಚ್ಚಿದ್ದು, ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದ ಬಾಲಕರು. ಆ ಇಬ್ಬರೂ ತಮ್ಮ ಮಕ್ಕಳಾಟದ ಬಗ್ಗೆ ಕ್ಷಮೆಯಾಚಿಸಿದ್ದಾರೆ ಎಂದು ಪೊಲೀಸರೇ ಸ್ಪಷ್ಟಪಡಿ ಸಿದ್ದಾರೆ. ಆ ಇಬ್ಬರು ಯುವಕರು ತಮಾಷೆ ಮಾಡುವ ಸಲುವಾಗಿ ಈ ರೀತಿ ವಿಡಿಯೋ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಗಾಗಿ ಬಾಲಕರಿಬ್ಬರು ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ
ಹರಿದಾಡುತ್ತಿರುವ ಸುದ್ದಿ ಸುಳ್ಳು. 

-ವೈರಲ್ ಚೆಕ್ 

Follow Us:
Download App:
  • android
  • ios