ನಿರ್ಭಯಾಗಿಂತ ಭೀಕರ ಗ್ಯಾಂಗ್ ರೇಪ್, ಕೊಲೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 7:43 AM IST
9 Year Old Gang Raped And Killed In Jammu And Kashmi
Highlights

ಕೆಲ ವರ್ಷಗಳ ಹಿಂದೆ ದಿಲ್ಲಿಯಲ್ಲಿ ನಡೆದ ಭೀಕರ ನಿರ್ಭಯಾ ಗ್ಯಾಂಗ್ ರೇಪ್ ಗಿಂತಲೂ ಅತ್ಯಂತ ಅಮಾನುಷವಾಗಿ ಜಮ್ಮು ಕಾಶ್ಮೀರದಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. 

ಶ್ರೀಗರ: ಕಠುವಾ ಅತ್ಯಾಚಾರ ಪ್ರಕರಣದ ನೆನಪು ಮಾಸುವ ಮುನ್ನವೇ, ೯ ವರ್ಷದ ಬಾಲಕಿಯ ಮೇಲೆ ಭೀಕರ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ ಮತ್ತೊಂದು ಘಟನೆ ಜಮ್ಮು-ಕಾಶ್ಮೀರದ ಬಾರಮುಲ್ಲಾದಲ್ಲಿ ನಡೆದಿದೆ. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಕಣ್ಣು ಕಿತ್ತು, ಆ್ಯಸಿಡ್ ಹಾಕಿ ಸುಟ್ಟು ಹತ್ಯೆ ಮಾಡಲಾಗಿದೆ. 

ಆ. 23ರಂದು ಬಾಲಕಿ ನಾಪತ್ತೆಯಾಗಿದ್ದ ಬಗ್ಗೆ ಆಕೆಯ ತಂದೆ ದೂರು ದಾಖಲಿಸಿದ್ದರು. ಮೃತ ಬಾಲಕಿಯ ಮಲತಾಯಿಯನ್ನು ವಿಶೇಷ ತನಿಖಾ ತಂಡ ವಿಚಾರಿಸಿದಾಗ ಸಂಶಯ ಮೂಡಿದ್ದು, ಹೆಚ್ಚಿನ ವಿಚಾರಣೆಯ ವೇಳೆ ಕರಾಳ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಲತಾಯಿ, ಆತನ ಮಗ ಸೇರಿದಂತೆ 5 ಜನರನ್ನು ಬಂಧಿಸಲಾಗಿದೆ.
 
ಘಟನೆಗೆ ಕಾರಣ: ಹತ್ಯೆಗೀಡಾದ ಬಾಲಕಿಯ ತಂದೆಗೆ ಮೂವರು ಪತ್ನಿಯರು. ಆತ ತನ್ನ ಎರಡನೇ ಪತ್ನಿ ಮತ್ತು ಮಗಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ. ಇದು ಆತನ ಮೂರನೇ ಪತ್ನಿಗೆ ಭಾರೀ ಸಿಟ್ಟು ತರಿಸಿತ್ತು. ಇದಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಕೆಲ ದಿನಗಳ ಹಿಂದೆ ಮೂರನೇ ಪತ್ನಿ, ತನ್ನ ಪತಿಯ 2ನೇ ಪತ್ನಿಯ 9 ವರ್ಷದ ಮಗಳನ್ನು ರಹಸ್ಯವಾಗಿ ಕಾಡಿಗೆ ಕರೆದೊಯ್ದಿದ್ದಳು. ಅಲ್ಲಿಗೆ ಆಕೆಯ 14 ವರ್ಷದ ಪುತ್ರ ಮತ್ತು ಆತನ ಸ್ನೇಹಿತರೂ ಕೂಡಾ ಬಂದಿದ್ದರು.

ಕಾಡಿನಲ್ಲಿ ಬಾಲಕಿಯ ಮೇಲೆ ಆಕೆಯ ಮಲತಾಯಿಯ ಎದುರೇ ಆಕೆಯ ಮಲಸೋದರ ಮತ್ತು ಆತನ ಸ್ನೇಹಿತರು ಅತ್ಯಾಚಾರವೆಸಗಿದ್ದಾರೆ. ಬಳಿಕ ಒಬ್ಬಾತ ಆಕೆಯ ತಲೆಯನ್ನು ಕತ್ತಿಯಿಂದ ಕಡಿದುಹಾಕಿದ್ದರೆ, ಮತ್ತೊಬ್ಬ ಆಕೆಯ ಕಣ್ಣನ್ನು ಕಿತ್ತುಹಾಕಿದ್ದ. ಇಷ್ಟೆಲ್ಲಾ ಆದ ಬಳಿಕ ಅತ್ಯಾಚಾರದ ಸುಳಿವು ಸಿಗಬಾರದು ಎಂದ ಕಾರಣಕ್ಕೆ ಆಕೆಯ ಗುಪ್ತಾಂಗಕ್ಕೆ ಆ್ಯಸಿಡ್ ಹಾಕಿ, ಶವವನ್ನು ಕಾಡಿನಲ್ಲೇ ಮುಚ್ಚಿಹಾಕಿಬಂದಿದ್ದರು.

loader