Asianet Suvarna News Asianet Suvarna News

22ರಿಂದ 29ರವರೆಗೆ 9 ರೈಲು ಸಂಚಾರ ರದ್ದು

ರಾಜ್ಯದಲ್ಲಿ ಒಟ್ಟು 9 ರೈಲುಗಳ ಸಂಚಾರ ರದ್ದುಗೊಳ್ಳುತ್ತಿದೆ. ಕಾರಣವೇನು..?

9 Train Cancelled in Karnataka From May 22 to 29
Author
Bengaluru, First Published May 18, 2019, 8:15 AM IST

ಬೆಂಗಳೂರು :  ತುಮಕೂರು- ಮಲ್ಲಸಂದ್ರ- ಗುಬ್ಬಿ ಮಾರ್ಗದಲ್ಲಿ ರೈಲ್ವೆ ಹಳಿ ಕಾಮಗಾರಿ ಹಿನ್ನೆಲೆಯಲ್ಲಿ ಮೇ 22ರಿಂದ 29ರ ವರೆಗೆ ಬೆಂಗಳೂರು ವಿಭಾಗದಿಂದ ಸಂಚರಿಸುವ 9 ರೈಲು ಸಂಚಾರ ರದ್ದುಪಡಿಸಲು ತೀರ್ಮಾನಿಸಲಾಗಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಬೆಂಗಳೂರು ಕೆಎಸ್‌ಆರ್‌- ಶಿವಮೊಗ್ಗ ಟೌನ್‌ ಪ್ಯಾಸೆಂಜರ್‌ ರೈಲು ಮೇ 22ರಿಂದ 29ರ ವರೆಗೆ, ಶಿವಮೊಗ್ಗ ಟೌನ್‌- ಕೆಎಸ್‌ಆರ್‌ ಬೆಂಗಳೂರು ಪ್ಯಾಸೆಂಜರ್‌ ರೈಲು ಮೇ 23ರಿಂದ 29 ರವರೆಗೆ, ಹರಿಹರ- ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮೇ 23, 24 ಹಾಗೂ 29ರಂದು ರದ್ದುಗೊಳಿಸಲಾಗಿದೆ. ಯಶವಂತಪುರ- ಹರಿಹರ ಎಕ್ಸ್‌ಪ್ರೆಸ್‌ ರೈಲು ಮೇ 22, 23 ಹಾಗೂ 28, ಕೆಎಸ್‌ಆರ್‌ ಬೆಂಗಳೂರು- ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ಮೇ 22ರಿಂದ 28ರವರೆಗೆ, ತಾಳಗುಪ್ಪ- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಮೇ 23ರಿಂದ 29ರ ವರೆಗೆ, ಯಶವಂತಪುರ- ಶಿವಮೊಗ್ಗ ಟೌನ್‌ ಎಕ್ಸ್‌ಪ್ರೆಸ್‌ ಮೇ 25, 26 ಹಾಗೂ 27ರಂದು, ಶಿವಮೊಗ್ಗ ಟೌನ್‌- ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಮೇ 25, 26 ಹಾಗೂ 27ರಂದು ಮತ್ತು ಕೆಎಸ್‌ಆರ್‌ ಬೆಂಗಳೂರು/ ಚಿಕ್ಕಜಾಜೂರು- ಚಿತ್ರದುರ್ಗ ಪ್ಯಾಸೆಂಜರ್‌ ರೈಲು ಮೇ 23ರಿಂದ 29 ರವರೆಗೆ ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios