Asianet Suvarna News Asianet Suvarna News

8 ವರ್ಷದ ಬಾಲಕಿ ಮೇಲೆ 10 ವರ್ಷದ 5 ಬಾಲಕರಿಂದ ರೇಪ್

ಮಹಾರಾಷ್ಟ್ರದ ಪುಣೆಯಲ್ಲಿ 8 ವರ್ಷದ ಬಾಲಕಿಮೇಲೆ 8 ಅಪ್ರಾಪ್ತರು ಸೇರಿ 6 ಮಂದಿ ಸರಣಿ ಅತ್ಯಾ ಚಾರ ನಡೆಸಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಐವರು ಬಾಲಕರು ಮತ್ತು 19 ವರ್ಷದ ಯುವಕನನ್ನು ಬಂಧಿಸಲಾಗಿದೆ.

8 Year Old Girl Raped in Pune

ಪುಣೆ (ಡಿ.23): ಮಹಾರಾಷ್ಟ್ರದ ಪುಣೆಯಲ್ಲಿ 8 ವರ್ಷದ ಬಾಲಕಿಮೇಲೆ 8 ಅಪ್ರಾಪ್ತರು ಸೇರಿ 6 ಮಂದಿ ಸರಣಿ ಅತ್ಯಾ ಚಾರ ನಡೆಸಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಐವರು ಬಾಲಕರು ಮತ್ತು 19 ವರ್ಷದ ಯುವಕನನ್ನು ಬಂಧಿಸಲಾಗಿದೆ. ಪುಣೆಯ ಹೊರವಲಯದ ಕೊಂಡ್ವಾ ಪ್ರದೇಶದ ಬಾಲಕಿಯೊಬ್ಬಳು ಹೊಟ್ಟೆನೋವಿನಿಂದ ಬಳಲುತ್ತಿದ್ದಳು.

ಹಾಗಾಗಿ ಆಕೆಯನ್ನು ಪೋಷಕರು ವೈದ್ಯರ ಬಳಿ ಕರೆದೊಯ್ದಿದ್ದರು. ಈ ವೇಳೆ ಬಾಲಕಿ ಮೇಲೆ ಲೈಂಗಿಕ ಹಲ್ಲೆ ನಡೆದಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಸಂತ್ರಸ್ತ ಬಾಲಕಿ ನೀಡಿದ ಮಾಹಿತಿ ಮೇರೆಗೆ 19 ವರ್ಷದ ಓರ್ವ ಯುವಕ ಮತ್ತು 10-11 ವಯಸ್ಸಿನ 5 ಬಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios