Asianet Suvarna News Asianet Suvarna News

ರಾಜ್ಯದ ರೈತರಿಗೆ ಸಿಗಬೇಕು 670 ಕೋಟಿ ರು.

ಸಕ್ಕರೆ ಕಾರ್ಖಾನೆಗಳು ಕೋಟ್ಯಂತರ ರೈತರ ಬಿಲ್‌ ಬಾಕಿ ಉಳಿಸಿಕೊಂಡಿರುವುದು ರೈತರನ್ನು ಕಂಗಾಲಾಗಿಸಿದೆ. ರಾಜ್ಯದ 43ಕ್ಕೂ ಅಧಿಕ ಕಾರ್ಖಾನೆಗಳು 670 ರು. ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿರುವುದು ಲೆಕ್ಕಕ್ಕೆ ಸಿಕ್ಕಿದೆ. 

670 Crore pending For Karnataka Sugarcane Farmers
Author
Bengaluru, First Published Nov 20, 2018, 8:57 AM IST

ಬೆಂಗಳೂರು :  ಸಕ್ಕರೆ ಕಾರ್ಖಾನೆಗಳು ಕೋಟ್ಯಂತರ ರೈತರ ಬಿಲ್‌ ಬಾಕಿ ಉಳಿಸಿಕೊಂಡಿರುವುದು ರೈತರನ್ನು ಕಂಗಾಲಾಗಿಸಿದೆ. ರಾಜ್ಯದ 43ಕ್ಕೂ ಅಧಿಕ ಕಾರ್ಖಾನೆಗಳು 670 ರು. ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿರುವುದು ಲೆಕ್ಕಕ್ಕೆ ಸಿಕ್ಕಿದೆ. 

ಇವುಗಳಲ್ಲಿ ಸಕ್ಕರೆ ಕಾರ್ಖಾನೆಗಳು ಅತ್ಯಧಿಕ ಪ್ರಮಾಣದಲ್ಲಿರುವ ಬೆಳಗಾವಿ, ಬಾಗಲಕೋಟೆ, ಮಂಡ್ಯ ಜಿಲ್ಲೆಗಳ 39 ಕಾರ್ಖಾನೆಗಳು ಒಟ್ಟಾರೆ 634 ರು. ಕೋಟಿ ಬಾಕಿ ಉಳಿಸಿಕೊಂಡಿವೆ. ಇವುಗಳಲ್ಲಿ ಹೆಚ್ಚಿನವು ರಾಜ್ಯದ ಪ್ರಭಾವಿ ರಾಜಕಾರಣಿಗಳದ್ದು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 24 ಸಕ್ಕರೆ ಕಾರ್ಖಾನೆಗಳಿದ್ದು, ಕಳೆದ ಐದು ವರ್ಷಗಳಿಂದ ಈವರೆಗೆ ರೈತರಿಗೆ ಒಟ್ಟು 185.6 ರು. ಕೋಟಿ ಕಬ್ಬಿನ ಬಾಕಿ ಬಿಲ್‌ ಉಳಿದಿದೆ. ಬಾಗ​ಲ​ಕೋ​ಟೆ ಜಿಲ್ಲೆಯ 11 ಕಾರ್ಖಾನೆಗಳು ಒಟ್ಟು 285.65 ರು. ಕೋಟಿ ಬಾಕಿ ಉಳಿಸಿಕೊಂಡಿವೆ. 

ಮಂಡ್ಯ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 162.93 ಕೋಟಿ ರು ಬಾಕಿ ಪಾವತಿ ಮಾಡಬೇಕಾಗಿದೆ. ಇವುಗಳಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷದ ಬಾಕಿ ಉಳಿಸಿಕೊಂಡಿದ್ದರೆ, ಕೆಲ ಕಾರ್ಖಾನೆಗಳು ಎರಡು ಮೂರು ವರ್ಷಗಳಿಂದ ಬಿಲ್‌ ಪಾವತಿಸದೆ ರೈತರನ್ನು ಸತಾಯಿಸುತ್ತಿವೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಭದ್ರಾವತಿ ಸಕ್ಕರೆ ಕಾರ್ಖಾನೆಯೂ ರೈತರಿಗೆ ನೀಡಬೇಕಾಗಿದ್ದ 2.92 ರು. ಕೋಟಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.


ಎಷ್ಟುಬಾಕಿ ಬರಬೇಕು?

ಕಾರ್ಖಾನೆ ಹೆಸರು-ಸ್ಥಳ-ಬಾಕಿ ಮೊತ್ತ

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ-ಎಂ.ಕೆ.ಹುಬ್ಬಳ್ಳಿ-18.60 ಕೋಟಿ ರು.

ಸೌಭಾಗ್ಯ ಲಕ್ಷ್ಮಿ ಕಾರ್ಖಾನೆ-ಹಿರೇನಂದಿಹಳ್ಳಿ- 20 ಕೋಟಿ

ಸತೀಶ ಶುಗರ್ಸ್‌- ಪಿ.ಜಿ.ಹುಣಶ್ಯಾಳ- 30 ಕೋಟಿ ರು.

ಬೆಳಗಾವಿ ಶುಗರ್ಸ್‌-ಹುದಲಿ- 12 ಕೋಟಿ ರು.

ಶಿವಸಾಗರ ಕಾರ್ಖಾನೆ-ಉದಪುಡಿ- 24 ಕೋಟಿ ರು.
 
ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ-ಗೋಕಾಕ- 4 ಕೋಟಿ ರು.

ರೇಣುಕಾ ಶುಗÜರ್ಸ್‌-ಮುನವಳ್ಳಿ-10 ಕೋಟಿ ರು.

ವಿಶ್ವನಾಥ ಶುಗರ್ಸ್‌-ಬೆಲ್ಲದಬಾಗೇವಾಡಿ-15ಕೋಟಿ ರು.

ಹಾಲಸಿದ್ದನಾಥ ಶುಗರ್ಸ್‌-ನಿಪ್ಪಾಣಿ- 8 ಕೋಟಿ ರು.

ಹಿರಣ್ಯಕೇಶಿ ಕಾರ್ಖಾನೆ-ಸಂಕೇಶ್ವರ- 10 ಕೋಟಿ ರು.

ಲೈಲಾ ಶುಗರ್ಸ್‌-ಖಾನಾಪುರ- 6 ಕೋಟಿ ರು.

ಪ್ಯಾರಿ ಶುಗರ್ಸ್‌-ರಾಮದುರ್ಗ-15 ಕೋಟಿ ರು.

ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ-ಬೈಲಹೊಂಗಲ-13 ಕೋಟಿ ರು.

ಐಆರ್‌ಎಸ್‌ ಶುಗರ್ಸ್‌-ಹೊಸಪೇಟೆ(ಬಳ್ಳಾರಿ)- 9.5 ಕೋಟಿ ರು.

ಎನ್‌ಎಸ್‌ಎಲ್‌ ಶುಗರ್ಸ್‌​-ದೇಶನೂರು(ಸಿರುಗುಪ್ಪ ತಾ.)- 3.4 ಕೋಟಿ ರು.

ಪ್ಯಾರಿ ಶುಗರ್ಸ್‌​-ಹಳಿಯಾಳ(ಉತ್ತರ ಕನ್ನಡ)- 21 ಕೋಟಿ ರು.

ಭದ್ರಾವತಿ ಸಕ್ಕರೆ ಕಾರ್ಖಾನೆ- ಭದ್ರಾವತಿ- 2.92 ಕೋಟಿ ರು.

ಎನ್‌ಎಸ್‌ಎಲ್‌ ಕಾರ್ಖಾನೆ-ಕೊಪ್ಪ(ಮಂಡ್ಯ)- 75.57 ಕೋಟಿ ರು.

ಮೈಷುಗರ್‌ ಸಕ್ಕರೆ ಕಾರ್ಖಾನೆ- ಮಂಡ್ಯ- 18.01 ಕೋಟಿ ರು.

ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ​-ಮಂಡ್ಯ- 34.86 ಕೋಟಿ ರು.

ಐಸಿಎಲ್‌ ಷುಗರ್‌​-ಮಾಕವಳ್ಳಿ(ಮಂಡ್ಯ)-.34.49 ಕೋಟಿ

ನಿರಾಣಿ ಶುಗರ್ಸ್‌- ಬಾಗಲಕೋಟೆ- 45.79 ಕೋಟಿ ರು.

ಬೀಳಗಿ ಶುಗರ್ಸ್‌ ಸಕ್ಕರೆ ಕಾರ್ಖಾನೆ-ಬಾಗಲಕೋಟೆ- 9.72 ಕೋಟಿ ರು.

ಇಂಡಿಯನ್‌ ಕೇನ್‌ ಪವ​ರ್‌-ಉತ್ತೂರು(ಬಾಗಲಕೋಟೆ)- 18.18 ಕೋಟಿ ರು.

ಗೋದಾವರಿ ಸಮೀರವಾಡಿ ಶುಗರ್ಸ್‌- ಬಾಗಲಕೋಟೆ- 35.18 ಕೋಟಿ ರು.

ಪ್ರಭುಲಿಂಗೇಶ್ವರ ಶುಗರ್ಸ್‌-ಬಾಗಲಕೋಟೆ- 44.35 ಕೋಟಿ ರು.

ಜಮಖಂಡಿ ಶುಗರ್ಸ್‌- ಬಾಗಲಕೋಟೆ-17.46 ಕೋಟಿ ರು.

ಜೆಮ್‌ ಶುಗರ್ಸ್‌-ಕುಂದರಗಿ- 31.21 ಕೋಟಿ ರು.

ಸಾಯಿ ಪ್ರಿಯಾ ಶುಗರ್ಸ್‌- ಬಾಗಲಕೋಟೆ- 11.9 ಕೋಟಿ ರು.

ರನ್ನ ಶುಗರ್ಸ್‌- ಬಾಗಲಕೋಟೆ-  10.61ಕೋಟಿ ರು.

ಸಾವರಿನ್‌ ಶುಗರ್ಸ್‌​-ಶೇಗುನಸಿ(ಬಾಗಲಕೋಟೆ)-  9.08 ಕೋಟಿ ರು.

ಸದಾಶಿವ ಶುಗರ್ಸ್‌- ಬಾಗಲಕೋಟೆ- 13.88 ಕೋಟಿ ರು.

Follow Us:
Download App:
  • android
  • ios